ಗುರುವಾರ ಮತ್ತು ಶುಕ್ರವಾರದಂದು ನಡೆದ ಕರ್ನಾಟಕ ರಾಜ್ಯ ವಿಧಾನಸಭೆಯ ಆಡಳಿತ ಸರ್ಕಾರದ ವಿಶ್ವಾಸ ಮತ ಯಾಚನೆ ಚರ್ಚೆ ಅನೇಕ ಸ್ವಾರಸ್ಯಕರ ವಿಷಯಗಳಿಗೆ ನಾಂದಿಯಾಗಿದೆ. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ವಿಶ್ವಾಸ ಮತ ಯಾಚನೆ ಪ್ರಕರಣ ಎರಡು ದಿನ ಪೂರೈಸಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಮೊದಲು ಏಳು ಬಾರಿ ಆಡಳಿತ ಪಕ್ಷದ ನಾಯಕರು ಕೇವಲ ಒಂದೇ ದಿನದಲ್ಲಿ ಅಂದರೆ  24 ಗಂಟೆಯೊಳಗೆ ವಿಶ್ವಾಸ ಮತ ಪ್ರಕ್ರಿಯೆ ಮುಗಿಸಿದ್ದರು. ಈ ಎಲ್ಲದಕ್ಕಿಂತಲೂ ಇಂಟ್ರಸ್ಟಿಂಗ್ ವಿಷಯ ಎಂದರೆ ಮೂರ್ನಾಲ್ಕು ದಶಕಗಳಿಂದ ಪ್ರತಿಪಕ್ ನಾಯಕರ ಸ್ಥಾನದಲ್ಲೇ ವಿಶೇಷ ಮತ್ತು ಗಟ್ಟಿಗ ಎನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರ ಬದಲಾದ ನಡವಳಿಕೆ.! ಕರ್ನಾಟಕ ರಾಜಕೀಯದಲ್ಲಿ ಯಡಿಯೂರಪ್ಪ ಎಂದರೆ ಸಿಡಿಲು ಗುಡುಗು ಎಂದೇ ಅರ್ಥ.! ಸ್ವತಃ ರಾಜಕೀಯ ಮುಖಂಡರು ಕೂಡ ಈ ಮಾತನ್ನು ಹೇಳುತ್ತಾರೆ.

ಆಡಳಿತ ಪಕ್ಷದ ಇಂಚಿಚೂ ಲೋಪದೋಷಗಳನ್ನು ಸದನದಲ್ಲಿ ಬಹಿರಂಗಪಡಿಸಿ ಆಡಳಿತ ಯಂತ್ರ ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದ್ದ ಎದೆಗಾರಿಕೆ ಯಡಿಯೂರಪ್ಪ ಅವರದ್ದು. ಅದೆಷ್ಟೋ ಬಾರಿ ವಿಧಾನಸೌದದ ಬಾವಿಗಿಳಿದು ಛಲದಂಕಮಲ್ಲನ ಹಾಗೆ ಅನೇಕ ಕೆಲಸಗಳನ್ನು ಮಾಡಿಸಿದ ಕೀರ್ತಿ ಬಿ.ಎಸ್.ವೈ ಗೆ ಸಲ್ಲುತ್ತದೆ. ಸವಾಲಿಗೆ ಪ್ರತಿ ಸವಾಲು ನೀಡುತ್ತಾ ವಿಧಾನ ಸೌದದಲ್ಲಿ ಯಡಿಯೂರಪ್ಪ ಗುಡುಗುತ್ತಿದ್ದ ರೀತಿ ಪಕ್ಷಾತೀತವಾಗಿ ಎಲ್ಲರಿಗೂ ಇಷ್ಟವಾಗುತ್ತಿತ್ತು. ಕೇವಲ ಹೋರಾಟಗಳಿಂದಲೇ ಮನೆಮಾತಾದ ಬಿ.ಎಸ್.ವೈ ಮೊನ್ನೆ ನಡೆದ ಕುಮಾರಸ್ವಾಮಿ ಸರ್ಕಾರದ ವಿಶ್ವಾಸ ಮತ ಯಾಚನೆ ವೇಳೆ ಮಾತ್ರ ಮೌನಕ್ಕೆ ಶರಣಾಗಿದ್ದರು. ಅಕ್ಷರಶಃ ಯಡಿಯೂರಪ್ಪ ಮೌನ ಆಡಳಿತ ಪಕ್ಷಕ್ಕೆ ನಿಜಕ್ಕೂ ವರದಾನ ಎಂದೇ ಅನೇಕ ಪತ್ರಕರ್ತರು ಬಣ್ಣಿಸಿದ್ದರು.! ಚಿಕ್ಕನಾಯಕನಹಳ್ಳಿ ಮಾಧುಸ್ವಾಮಿ ಇಲ್ಲ ಅಂದಿದ್ದರೆ ಬಿ.ಜೆ.ಪಿ ಕಥೆ ಏನು ಅನ್ನುವಂತೆಯೂ ಮಾಡಿತ್ತು.

ಅಷ್ಟಕ್ಕೂ ಬಿ.ಎಸ್.ಯಡಿಯೂರಪ್ಪ ಮೌನಕ್ಕೆ ಬೇರೆಯದ್ದೇ ಕಾರಣವಿತ್ತು. ವಿಧಾನಸೌದದಲ್ಲಿ ಸಿ.ಎಂ.ಎಚ್.ಡಿ.ಕೆ  ವಿಶ್ವಾಸ ಮತ ಯಾಚನೆಯ ಚರ್ಚೆ ವೇಳೆ ಕಾಲ ಹರಣ ಮಾಡದಿರಲು ಸ್ವತಃ ವಿಪಕ್ಷ ನಾಯಕ ಬಿ.ಎಸ್.ವೈ ನಿರ್ಧರಿಸಿದ್ದರು ಎಲ್ಲಿ ನಾನು ಚರ್ಚೆ , ವಾದಗಳಲ್ಲಿ ಪಾಲ್ಗೊಂಡರೆ ಮೈತ್ರಿ ಪಕ್ಷ ಇದನ್ನು ಇನ್ನು ಒಂದು ವಾರಗಳ ಕಾಲ ಎಳೆಯಬಹದೆಂಬ ಕಾರಣ ಹಾಗೂ ಮೈತ್ರಿ ನಾಯಕರ ಜೊತೆ ಮಾತಿಗೆ ನಿಂತರೆ ಸ್ಪೀಕರ್ ನಮ್ಮ ಪಕ್ಷದವರನ್ನ ಸದನದಿಂದ ಹೊರಹಕಿ ವಿಶ್ವಾಸ ಮತಕ್ಕೆ ಸೂಚಿಸಿಬಿಡುವ ಸಾಧ್ಯತೆ ಹೆಚ್ಚಾದ್ದರಿಂದ ತಾವು ಮೌನವಾಗಿರೋಣ ಆಡಳಿತ ಪಕ್ಷದವರು ಏನೇ ಮಾತಾಡಿದರೂ ಏನೇ ಆರೋಪ ಮಾಡಿದರೂ ಅದಕ್ಕೆ ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂಬ ಉದ್ದೇಶದಿಂದ ಬಿ.ಎಸ್.ವೈ ಅಂಡ್ ಬಿ.ಜೆ.ಪಿ ಟೀಮ್ ನಿರ್ಧರಿಸಿತ್ತು.!

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here