ಸ್ಯಾಂಡಲ್ ವುಡ್ ನ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಫೋರ್ಟಿಸ್ ಹಾಸ್ಪಿಟಲ್ ನಲ್ಲಿ ದಾಖಲಾಗಿದ್ದಾರೆ. ಲಿವರ್, ಕಿಡ್ನಿ ಸೇರಿದಂತೆ ಬಹು ಅಂಗಾಂಗ ತೊಂದರೆ ಆಗಿದ್ದು , ಈಗ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈಗ ತಾನೇ  ಬುಲೆಟ್ ಪ್ರಕಾಶ್ ರ ಮಗ ಮಾತನಾಡುತ್ತಾ ನಮ್ಮ ತಂದೆ ಆರೋಗ್ಯ ಈಗ ಸುಧಾರಿಸುತ್ತಿದೆ . ನಮಗೆ ಭರವಸೆ ಇದೆ ಡಾಕ್ಟರ್ ನೀಡುವ ಮಾಹಿತಿ ತಮಗೆ ತಿಳಿಸುತ್ತೇವೆ. ವಿನಾ ಕಾರಣ ನಮ್ಮ ತಂದೆಯ ಆರೋಗ್ಯದ ಬಗ್ಗೆ ಗೊಂದಲವಾಗುವುದು ಬೇಡ ಎಂದು ಹೇಳಿದ್ದಾರೆ.

ಅಷ್ಟೇ  ಅಲ್ಲದೆ ದುನಿಯಾ ವಿಜಯ್ ಅವರು ಸಹ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ದುನಿಯಾ ವಿಜಯ್ ಅವರು ಬುಲೆಟ್ ಪ್ರಕಾಶ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸುಮ್ಮನೆ ವದಂತಿಗಳನ್ನು ಹಬ್ಬಿಸುವುದು ಇದರಿಂದ ಅವರ ಕುಟುಂಬಕ್ಕೆ ನೋವಾಗುತ್ತದೆ ಎಂದು ಹೇಳಿದ್ದಾರೆ.

ಇದೀಗ ತಾನೆ ಫೋರ್ಟಿಸ್ ಆಸ್ಪತ್ರೆಯಿಂದ ಬುಲೆಟ್ ಪ್ರಕಾಶ್ ಅವರ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು ಅದರಲ್ಲೂ ಸಹ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಚಿಕಿತ್ಸೆ ಮುಂದುವರಿಸುತ್ತಿದ್ದೇವೆ ವದಂತಿಗಳಿಗೆ ಕಿವಿಗಡಬೇಡಿ ಎಂದು ತಿಳಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here