ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಎಲ್ಲರನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗದಿಂದ ಒಬ್ಬ ಕಲಾವಿದ ಇಂದು ಎಲ್ಲರನ್ನೂ ಅಗಲಿದ್ದು, ಇನ್ಮುಂದೆ ಅವರು ಸಿನಿ ರಸಿಕರ ಮನದಲ್ಲಿ ಒಂದು ಸ್ಮರಣೆಯಾಗಲಿದ್ದಾರೆ. ಬುಲೆಟ್ ಪ್ರಕಾಶ್ ಅವರು ಇಂದು ಅಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದ ಕಾರಣ ನಿಧನರಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸಚಿವ ಆರ್. ಅಶೋಕ್ ಅವರು ಬುಲೆಟ್ ಪ್ರಕಾಶ್ ಅವರ ಆಸ್ಪತ್ರೆಯ ಬಿಲ್ ಅನ್ನು ಸರ್ಕಾರದ ವತಿಯಿಂದ ಪಾವತಿ ಮಾಡಿಸಿದ್ದಾರೆ. ಅಗಲಿದ ನಟನೊಂದಿಗೆ ಅವರಿಗಿದ್ದ ಆತ್ಮೀಯತೆಯಿಂದ ಸಚಿವರು ಅವರ ಕುಟುಂಬದ ನೆರವಿಗೆ ಧಾವಿಸಿದ್ದಾರೆ.

 

ಈ ವಿಷಯವಾಗಿ ಮಾತನಾಡಿರುವ ನಟ ದುನಿಯಾ ವಿಜಯ್ ಅವರು ಸಚಿವರು ಆಸ್ಪತ್ರೆಯ ಬಿಲ್ ಪಾವತಿ ಮಾಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ, ಈ ಹೊತ್ತಲ್ಲಿ ದೇಹವನ್ನು ಮನೆಗೆ ತೆಗೆದುಕೊಂಡು ಹೋಗುವುದು ಬೇಡ ಎಂದು ಅವರು ಹಾಗೂ ಪ್ರೇಮ್ ಇಬ್ಬರೂ ಪ್ರಕಾಶ್ ಅವರ ಕುಟುಂಬದ ಸದಸ್ಯರನ್ನು ಒಪ್ಪಿಸಿದ್ದು, ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿಸಲು ಪ್ರಯತ್ನಗಳನ್ನು ಮಾಡುತ್ತಿರುವುದಾಗಿಯೂ ಅವರು ಹೇಳಿದ್ದಾರೆ. ಅಂತಿಮ ಸಂಸ್ಕಾರದ ಮಾಹಿತಿಯನ್ನು ನಾಳೆ ತಿಳಿಸುವುದಾಗಿ ವಿಜಯ್ ಅವರು ತಿಳಿಸಿದ್ದಾರೆ.

ಸಚಿವ ಆರ್.ಅಶೋಕ್ ಅವರು ಬುಲೆಟ್ ಪ್ರಕಾಶ್ ಅವರು ಮನೆಯ ಪರಿಸ್ಥಿತಿಯನ್ನು ಹಾಗೂ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಅರಿತಿದ್ದರಿಂದ ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆಯ ವೆಚ್ಚ ₹6,65,980 ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪಾವತಿ ಮಾಡಿಸಿ ಸಹಾಯವನ್ನು ಮಾಡಿದ್ದಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದಿಂದ ಕಣ್ಮರೆಯಾದ, ಆದರೆ ನೆನಪುಗಳನ್ನು ಉಳಿಸಿ ಹೋಗಿರುವ ಬುಲೆಟ್ ಪ್ರಕಾಶ್ ಅಂತಿಮ ಸಂಸ್ಕಾರ ಕೆಲವೇ ಮಂದಿಯ ಉಪಸ್ಥಿತಿಯಲ್ಲಿ ನಡೆಯಲು ಸರ್ಕಾರ ಅನುಮತಿ ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here