ಸಾಮಾನ್ಯವಾಗಿ ಪ್ರಯಾಣ ಮಾಡುವಾಗ ಅದೆಷ್ಟೋ ಜನರು ಅಜಾಗರೂಕತೆಯಿಂದ ತಮ್ಮ ತಮ್ಮ ಹಣ ,ವಸ್ತುಗಳನ್ಬು ಕಳೆದುಕೊಂಡು ಚಿಂತಿಸುತ್ತಾರೆ. ಕೆಲವು ಬಾರಿ ಅವರ ಲಕ್ ಚೆನ್ನಾಗಿ ಇದ್ದರೆ ಕಳೆದುಕೊಂಡ ವಸ್ತುಗಳು ಮತ್ತೆ ಅವರ ಕೈ ಸೇರುತ್ತವೆ. ಮತ್ತೆ ಕೆಲವರಿಗೆ ಕಳೆದುಕೊಂಡ ವಸ್ತುಗಳು ಮತ್ತೆ ಸಿಗುವುದೇ ಇಲ್ಲ. ಇಲ್ಲೊಬ್ಬರು ಮಹಿಳೆಯ ಬರೋಬ್ಬರಿ 6.50 ಲಕ್ಷ ರೂ. ಮೌಲ್ಯದ ಒಡವೆಯನ್ನು ಹಿಂದುರುಗಿಸಿ ಕಂಡಕ್ಟರ್​ ಪ್ರಮಾಣಿಕತೆ ಮೆರೆದಿದ್ದಾರೆ. ಶಿರಾ ಡಿಪೋ‌ ವ್ಯಾಪ್ತಿಯ ಶ್ರೀಧರ್ ಒಡವೆ ಹಿಂದುರಿಗಿಸಿದ ನಿರ್ವಾಹಕ ಮಾನವೀಯತೆ ಮೆರೆದು ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪಾವಗಡ ನಿವಾಸಿ ನಾಗಲತಾ ಮಗಳ ಸೀಮಂತಕ್ಕಾಗಿ ಒಡವೆ ತೆಗೆದುಕೊಂಡು ನಿನ್ನೆ ರಾತ್ರಿ ಪಾವಗಡದಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸಿದ್ದರು.

ಒಡವೆಯ ವ್ಯಾನಿಟಿ ಬ್ಯಾಗನ್ನು ಬಸ್​ನಲ್ಲೇ ಮರೆತು ಇಳಿದಿದ್ದರು. ಬಸ್​ನಲ್ಲಿದ್ದ ಬ್ಯಾಗ್​​ನ್ನು ಕಂಡಕ್ಟರ್ ಶ್ರೀಧರ್​ ಅವರು ಡಿಪೋ ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ನಂತರ ಮಹಿಳೆಗೆ ಕರೆ ಮಾಡಿ. ಪಾವಗಡ ನಿವಾಸಿ ನಾಗಲತಾ ಬರೋಬ್ಬರಿ ₹ 6.50 ಲಕ್ಷ ಮೌಲ್ಯದ ಒಡವೆಯ ವ್ಯಾನಿಟಿ ಬ್ಯಾಗನ್ನು ಬಸ್‌ನಲ್ಲೇ ಮರೆತು ಇಳಿದಿದ್ದರು. ಡಿಪೋಗೆ ಬಸ್​​​ ಹಿಂತಿರುಗಿ ಬಂದಾಗ ಶಿರಾ ಡಿಪೋ‌ ವ್ಯಾಪ್ತಿಯ ಕಂಡಕ್ಟರ್ ಶ್ರೀಧರ್‌ಗೆ ಈ ಬ್ಯಾಗ್ ಸಿಕ್ಕಿದೆ.

ಬಳಿಕ ಅವರು ಡಿಪೋಗೆ ಬ್ಯಾಗ್ ತಂದು ಮೇಲಧಿಕಾರಿಗಳು ಗಮನಕ್ಕೆ ತಂಡಿದ್ದಲ್ಲದೇ, ನಂತರ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಬಳಿಕ ಮಹಿಳೆಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರನ್ನು ಡಿಪೋಗೆ ಕರೆಸಿ ಅವರ ಚಿನ್ನಾಭರಣವನ್ನು ವಾಪಸ್ ನೀಡಿದ್ದಾರೆ. ಆಗ ನಾಗಲತಾ ಕಂಡಕ್ಟರ್ ಶ್ರೀಧರ್‌ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಗಳ ಸೀಮಂತಕ್ಕಾಗಿ ನಾಗಲತಾ ಒಡವೆ ತಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಬಸ್ ಕಂಡಕ್ಟರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here