ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಒಬ್ಬರನ್ನು ಕಾಲಿನಿಂದ ಒದ್ದು, ಪೊದೆಗಳ ಒಳಗೆ ನೂಕಿ ದಾಂಧಲೆ ಮಾಡಿದ ಘಟನೆಯೊಂದು ವರದಿಯಾಗಿದೆ. ಮತದಾನದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು, ಕರಿಂಪುರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಮತ್ತು ಪಕ್ಷದ ಅಭ್ಯರ್ಥಿಯಾಗಿರುವ ಜಯ್ ಪ್ರಕಾಶ್ ಮಜುಂದಾರ್ ಅವರನ್ನು ಸೋಮವಾರ ಥಳಿಸಿ, ಕಾಲಿನಿಂದ ಒದ್ದು ಪೊದೆಗಳಿರುವ ಕಂದಕಕ್ಕೆ ನೂಕಿರುವ ಘಟನೆ ನಡೆದಿದೆ. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ವಿಡಿಯೋದಲ್ಲಿ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಜಯ್ ಪ್ರಕಾಶ್ ಮಜುಂದಾರ್ ಅವರನ್ನು ಎಳೆದೊಯ್ದಿರುವುದನ್ನು ಕಾಣಬಹುದು.

ನಂತರ ಅವರನ್ನು ರಸ್ತೆಯಲ್ಲೇ ತಮ್ಮ ಕಾಲಿನಿಂದ ಒದ್ದು ಪೊದಗಳ ಒಳಗೆ ನೂಕಿರುವುದು ಕೂಡಾ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಕಳೆದ ಸೋಮವಾರ ಕರೀಂಪುರ ವಿಧಾನಸಭೆ ಉಪ ಚುನಾವಣೆಗೆ ಮತದಾನ ನಡೆಯುತ್ತಿರುವಾಗ ಜಯ ಪ್ರಕಾಶ್ ಮಜುಂದಾರ್ ಅವರು ಮತದಾನ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನ ನಡೆದಿದೆ. ಜಯ ಪ್ರಕಾಶ್ ಮಜುಂದಾರ್ ಇದರ ಬಗ್ಗೆ ಮಾತನಾಡುತ್ತಾ, ನನ್ನನ್ನು ಹೊಡೆದು, ನಂತರ ಒದೆಯಲಾಯಿತು ಮತ್ತು ನನ್ನ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿತ್ತ. ಆದರೆ ಸ್ಥಳೀಯ ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ತೃಣಮೂಲ ಕಾಂಗ್ರೆಸ್ ಬೆಂಬಲಿಗ ಮಣಿಸುರಾಮನ್ ಮೊಂಡಾಲ್ ಮಾತನಾಡಿ, ಕರಿಂಪುರದಲ್ಲಿ ಬಿಜೆಪಿಗೆ ಸ್ಥಾನವಿಲ್ಲ. ಚುನಾವಣೆ ಮುಗಿದ ನಂತರ ಬಿಜೆಪಿಗೆ ಯಾವುದೇ ಸ್ಥಾನ ಇರುವುದಿಲ್ಲ. ಜನರು ಬಿಜೆಪಿಗೆ ಮತ ಹಾಕುತ್ತಿಲ್ಲ ಮತ್ತು ಜನರು ಬಿಜೆಪಿ ಕಡೆಯಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಆದರೆ ಜೇ ಪ್ರಕಾಶ್ ಮಜುಂದಾರ್ ಸಾಮರಸ್ಯವನ್ನು ಮುರಿಯಲು ಪ್ರಯತ್ನಿಸುತ್ತಿದ್ದರು. ನಾವು ಅದನ್ನು ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here