ತಂದೆ ಮಗಳು ಇಬ್ವರೂ ಒಂದೇ ಶಾಲೆಯಲ್ಲಿ ಇದ್ದಾರೆ.ತಂದೆ ಶಾಲೆಯ ಸ್ಕೂಲ್ ವ್ಯಾನ್ ಗೆ ಡ್ರೈವರ್ ಮಗಳು ಅದೇ ಕಾಲೇಜಿನಲ್ಲಿ ಸ್ಟೂಡೆಂಟ್.ಈಗ ಮಗಳು ಪಿಯುಸಿಯಲ್ಲಿ ರಾಜ್ಯಕ್ಕೆ ನಾಲ್ಕನೆ ಟಾಪರ್.   ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ನೇರಂಬಳ್ಳಿಯವರು.

ಪಿಯುಸಿಯಲ್ಲಿ  ಸೈನ್ಸ್ ವಿಭಾಗದಲ್ಲಿ ಸತ್ಯಶ್ರೀ ರಾವ್ನಾಲ್ಕನೇ ಸ್ಥಾನದಲ್ಲಿದ್ದಾಳೆ ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ಪಿಸಿಎಂಸಿಯಲ್ಲಿ 593 ಅಂಕ ಪಡೆದಿದ್ದು ಯಾವುದೇ ಟ್ಯೂಶನ್ ಇಲ್ಲದೇ ಕೇವಲ ಶಾಲೆಯ ಪಾಠ ಪ್ರವಚನದ ಮೂಲಕವೇ ಈ ಸಾಧನೆ ಮಾಡಿದ್ದಾರೆ.

ಮುಂದೆ ಇಂಜಿನಿಯರಿಂಗ್ ಮಾಡುವ ಆಸೆ ಈಕೆಯದ್ದು.ನೇರಂಬಳ್ಳಿಯ ನಾಗೇಶ್ ರಾವ್ ಹಾಗೂ ಲಲಿತಾ ರಾವ್ ಎರಡನೇ ಪುತ್ರಿಯಾಗಿರುವ ಸತ್ಯಶ್ರಿ ಸಹೋದರಿ ಶೈಲಶ್ರಿ ಕೂಡ ಎರಡನೇ ವರ್ಷದ ಬಿಎಸ್ಸಿ ಸ್ಟುಡೆಂಟ್. ಅಂದ ಹಾಗೆ ನಾಗೇಶ್ ರಾವ್ ಚಾಲಕ ವ್ರತ್ತಿ ಮಾಡಿಕೊಂಡಿರುವುದು ಸತ್ಯಶ್ರಿ ಓದುತ್ತಿರುವ ಅದೇ ವೆಂಕಟರಮಣ ಶಾಲೆಯಲ್ಲಿ ಅನ್ನೋದು ಮತ್ತೊಂದು ವಿಶೇಷ.

ಯಾವುದೇ ಒತ್ತಡವನ್ನು ಹಾಕದೇ ಮಗಳನ್ನು ಓದಿಸುತ್ತಿರುವ ನಾಗೇಶ್ ರಾವ್ ಮಗಳು ಟಾಪರ್ ಆಗಿದ್ದಕ್ಕೇ ತುಂಬಾನೇ ಖುಷಿಪಟ್ಟಿದ್ದಾರೆ. ಇಡೀ ಮನೆಯಲ್ಲಿಯೂ ಸಂಭ್ರಮದ ವಾತಾವರಣವಿದೆ.ಒಟ್ಟಿನಲ್ಲಿ ಅಪ್ಪ ಡ್ರೈವರ್ ಆಗಿರುವ ಸಂಸ್ಥೆಯಲ್ಲಿ ಮಗಳು ರಾಜ್ಯಕ್ಕೆ ಟಾಪರ್ ಆಗಿರುವುದು ನಿಜಕ್ಕೂ ಗ್ರೇಟ್ ವಿಚಾರ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here