ಬಿಗ್ ಬಾಸ್ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಶಾಂತಿ ನೆಲೆಸಿತ್ತು ಎನ್ನುವಾಗಲೇ ಬಂದಿತು ಟಾಸ್ಕ್ ರಾಕ್ಷಸರು ಹಾಗೂ ಗಂಧರ್ವರು. ಈ ಟಾಸ್ಕ್ ಆರಂಭವಾಗಿ ಮೂರು ದಿನಗಳು ಕಳೆಯುತ್ತಿದ್ದು ಇಲ್ಲಿ ಅದಾವ ರೀತಿಯ ಮನರಂಜನೆ ಸಿಗುತ್ತಿದೆಯೋ ತಿಳಿಯುತ್ತಿಲ್ಲ. ಏಕೆಂದರೆ ಟಾಸ್ಕ್ ನಲ್ಲಿ ಕೇವಲ ಅರಚಾಟ , ಕೂಗಾಟ, ಹೊಡೆದಾಟಗಳು ಮೊದಲ ಸ್ಥಾನದಲ್ಲಿ ಇದ್ದು, ಒಬ್ಬರು ಇನ್ನೊಬ್ಬರ ಮೇಲೆ ಕೂಗಾಡಿ, ರೇಗಾಡಿ ಆಡುತ್ತಿರುವ ಈ ಟಾಸ್ಕ್ ನಲ್ಲಿ ಅರಚಾಟಕ್ಕೆ ಪ್ರಾಧಾನ್ಯತೆ ಒಂದು ಹಂತದ ನಂತರ ಹೊಡೆದಾಟಕ್ಕೂ ಅವಕಾಶ. ಬಿಗ್ ಬಾಸ್ ಮನೆ ಸೇರಿರುವ ಸೆಲೆಬ್ರಿಟಿ ಗಳು ಇದನ್ನು ಕೂಡಾ ಮನರಂಜನೆ ಎಂದು ಭಾವಿಸಿದಂತೆ ಕಂಡು ಬರುತ್ತಿದೆ.

ಟಾಸ್ಕ್ ನ ಸಂಚಾಲನೆ ಮಾಡುತ್ತಿರುವ ಚಂದನಾ ಅವರು ಮಾಡುತ್ತಿರುವ ನಿರ್ಧಾರಗಳು ತಪ್ಪು ಎಂದು ಕಿಶನ್ ತಾನು ಊಟ ಮಾಡುವುದಿಲ್ಲ ಎಂದು ಹಠ ಹಿಡಿದರೆ, ರಾಜು ತಾಳಿಕೋಟೆ ಅವರು ಕೂಡಾ ಅದಕ್ಕೆ ಸಾಥ್ ನೀಡಿದ್ದಾರೆ. ಕಿಶನ್ ಪ್ರತಿಭಟನೆಗೆ ಜೊತೆಯಾದ ಅವರು ನಾನೂ ಊಟ ಮಾಡೋದಿಲ್ಲ ಎಂದು ಹಠ ಮಾಡುತ್ತಾರೆ. ಕ್ಯಾಪ್ಟನ್ ಆಗಿರುವ ಚಂದನಾ ರಾಜು ತಾಳಿಕೋಟೆ ಅವರ ಬಳಿ ಹೋಗಿ ಕಣ್ಣೀರು ಇಡುತ್ತಾ ಊಟ ಮಾಡಿ ಎಂದು ಬೇಡಿ ಕೊಂಡರೂ, ಅವರು ಬೇಕಾದ್ರೆ ನಿನ್ನ ಕಾಲಿಗೆ ಬೀಳುತ್ತೇನೆ ಎಂದೆಲ್ಲಾ ಹೇಳುವಾಗ ಇದು ಸ್ವಲ್ಪ ಅಸಹಜ ಎನಿಸದೇ ಇರಲಾರದು.

ರಾಕ್ಷಸರು ಮತ್ತು ಗಂಧರ್ವರ ನಡುವೆ ಸಮನ್ವಯತೆ ಸಾಧಿಸುವಲ್ಲಿ ಚಂದನ ವಿಫಲರಾಗಿದ್ದಾರೆ, ಅವರ ನಿರ್ಧಾರಗಳು ಸಮರ್ಪಕವಾಗಿಲ್ಲ, ಪಕ್ಷಪಾತ ಮಾಡುತ್ತಿದ್ದಾರೆ, ನಿಯಮಗಳ ಪಾಲನೆ ವಿಚಾರದಲ್ಲಿ ಅವರು ಕಟ್ಟು ನಿಟ್ಟಾಗಿಲ್ಲ ಎಂದೆಲ್ಲಾ ಮನೆಯ ಸದಸ್ಯರೇ ದೂರಿದ್ದಾರೆ. ಹೀಗೆ ಕ್ಯಾಪ್ಟನ್ ಆದ ಮೇಲೆ ಕೂಡಾ ಕಣ್ಣೀರು ಹಾಕುತ್ತಿರುವ ಚಂದನ ಅವರು ತಮ್ಮ ನಾಯಕತ್ವವನ್ನು ಎಷ್ಟು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ವಾರಾಂತ್ಯದ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ಅವರಿಂದಲೇ ಕೇಳುವವರೆಗೆ ಕಾಯಲೇಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here