ರಸ್ತೆ ಸುರಕ್ಷಿತ ನಿಯಮಗಳ ಬಗ್ಗೆ ಸರ್ಕಾರ, ಸಾರಿಗೆ ಇಳಾಖೆ ಜಾಗೃತಿ ಮೂಡಿಸುವ ಅದೆಷ್ಟೋ ಅಭಿಯಾನಗಳು, ಕಾರ್ಯಕ್ರಮಗಳು, ಜಾಹೀರಾತುಗಳ ಮೂಲಕ ತಿಳಿಸಿದರೂ ಕೂಡಾ ಜನರಲ್ಲಿ ಜಾಗೃತಿ ಅನ್ನುವುದು ಮಾತ್ರ ಮೂಡುತ್ತಿಲ್ಲ. ಪ್ರತಿದಿನ ಅಪಘಾತಗಳಲ್ಲಿ ಅದೆಷ್ಟೋ ಜನ ತಮ್ಮ ಪ್ರಾಣವನ್ನು ಕಳೆದುಕೊಂಡು, ಅವರ ಕುಟುಂಬದವರಿಗೆ ತುಂಬಲಾರದ ನಷ್ಟವನ್ನು ಹಾಗೂ ಜೀವನ ಪರ್ಯಂತ ನೋವನ್ನು ಉಳಿಸಿ ಹೋಗುತ್ತಾರೆ. ಎಲ್ಳೋ ಅರಪೂಪಕ್ಕೊಮ್ಮೆ ಇಂತಹ ಅಪಘಾತಗಳಿಂದ ಅದೃಷ್ಟವಂತರು ಪಾರಾಗಿ ಬದುಕುತ್ತಾರೆ.

ಕಾರುಗಳಲ್ಲಿ ಸಂಚಾರ ಮಾಡುವವರು ಕೂಡಾ ಸರಿಯಾದ ಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಅದರಲ್ಲೂ ಪ್ರಯಾಣದ ಸಮಯದಲ್ಲಿ ಮಕ್ಕಳ ಬಗ್ಗೆ ವಿಶೇಷ ಗಮನ ನೀಡದೆ, ಸರಿಯಾದ ಜಾಗರೂಕತೆ ವಹಿಸದಿದ್ದರೆ ಏನಾಗುವುದು ಎಂಬುದನ್ನು ತಿಳಿಸಲು ಕೇರಳದ ಪಂಕಜ್ ನೈನ್ ಎಂಬ ಐಪಿಎಸ್ ಅಧಿಕಾರಿಯವರು ಕೊಟ್ಟಕಲ್ ನ ಮಲ್ಲಪುರಂನಲ್ಲಿ ಕಳೆದ ವಾರ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರಿಂದ
ಹೊರಗೆ ಬಿದ್ದ ಬಾಲಕನೊಬ್ಬನ ಸಿಸಿಟಿವಿ ಯಲ್ಲಿ ರೆಕಾರ್ಡ್ ಆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಪ್ರಾಣಾಪಾಯವಾಗಿಲ್ಲ.‌

ಪಂಕಜ್ ನೈನ್ ಅವರು ತಮ್ಮ ಟ್ಟೀಟ್ ನಲ್ಲಿ
ಮಕ್ಕಳೊಂದಿಗೆ ಪ್ರಯಾಣಿಸುವಾಗ ಚೈಲ್ಡ್ ಲಾಕ್ ಮತ್ತು ಮಕ್ಕಳ ಆಸನಗಳು ಬಗ್ಗೆ ಗಮನ ವಹಿಸಬೇಕಾದುದು ಬಹಳ ಮುಖ್ಯ. ಎಲ್ಲಾ ಬಾಗಿಲುಗಳನ್ನು ಸರಿಯಾಗಿ ಮುಚ್ಚಲಾಗಿದೆಯೆ ಎಂದು ಪರಿಶೀಲಿಸಿ, ಮತ್ತು ಚೈಲ್ಡ್ ಲಾಕ್ ಆನ್ ಆಗಿದೆಯೋ ಇಲ್ಲವೋ ಪರೀಕ್ಷಿಸಿ, ಮಕ್ಕಳು ಸದಾ ಸುರಕ್ಷಿತವಾದ ಆಸನದಲ್ಲಿ ಕುಳಿತುಕೊಳ್ಳುವಂತೆ ಎಚ್ಚರವಹಿಸಿ. ಏಕೆಂದರೆ ಎಲ್ಲಾ ಮಕ್ಕಳು ಈ ರೀತಿಯ ಅದೃಷ್ಟಶಾಲಿಯಾಗುವುದಿಲ್ಲ ಎಂದು ವಿಡಿಯೋದಲ್ಲಿನ ಬಾಲಕನ ಉದಾಹರಣೆ ಕೊಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here