ವಿಲಕ್ಷಣ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಅಲಿಘಡ್ ನಲ್ಲಿ ವ್ಯಕ್ತಿಯೊಬ್ಬರು ತನ್ನ ಕಾರನ್ನು ಚಾಲನೆ ಮಾಡುವಾಗಲೂ ಹೆಲ್ಮೆಟ್ ಧರಿಸಿರುವುದು ಕಂಡು ಬಂದಿದೆ. ಇನ್ನು ಇದೇನಾದರೂ ರಸ್ತೆ ಸಾರಿಗೆ ಹಾಗೂ ವಾಹನ ನಿಯಮದ ವಿರುದ್ಧ ಪ್ರತಿಭಟನೆಯೇ ಎಂದರೆ ಖಚಿತವಾಗಿ ಅಲ್ಲ. ಏಕೆಂದರೆ ಅವರು ಕಾರಿನಲ್ಲಿ ಹೆಲ್ಮೆಟ್ ಧರಿಸದೆ ಚಾಲನೆ ಮಾಡಿದ್ದಾರೆಂಬ ಕಾರಣ ಅವರಿಗೆ ದಂಡ ವಿಧಿಸಿರುವುದೇ, ಈಗ ಅವರು ಕಾರಿನಲ್ಲಿ ಸಂಚರಿಸುವ ಸಮಯದಲ್ಲಿ ಕೂಡಾ ಹೆಲ್ಮೆಟ್ ಧರಿಸುವಂತೆ ಮಾಡಿದೆ. ಹೀಗೆ ಕಾರಿನಲ್ಲಿ ಹೆಲ್ಮೆಟ್ ಹಾಕಿ ಸಂಚರಿಸುವ ಆ ವ್ಯಕ್ತಿಯ ಹೆಸರು
ಪಿಯೂಷ್ ವರ್ಷನಿ, ತನ್ನ ನಾಲ್ಕು ಚಕ್ರ ವಾಹನವನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದ ಕಾರಣ ಆಗಸ್ಟ್ 27 ರಂದು 500 ರೂ.ಗಳ ಇ-ಚಲನ್ ಪಡೆದಿದ್ದೇನೆಂದು ಅವರು ಹೇಳಿದ್ದಾರೆ.

ಆದ್ದರಿಂದ ಮತ್ತೆ ಚಲನ್ ಸಿಗಬಹುದೆಂಬ ಭಯದಿಂದಾಗಿ, ನಾನು ಕಾರನ್ನು ಚಾಲನೆ ಮಾಡುವಾಗಲೂ ಸಹಾ ಹೆಲ್ಮೆಟ್ ಧರಿಸಿದ್ದೇನೆ. ಚಲನ್ ಹೊರಡಿಸಿದಾಗ, ಅದರಲ್ಲಿ ನನ್ನ ಕಾರ್ ಸಂಖ್ಯೆ ಇತ್ತೆಂದು ಅವರು ಹೇಳಿದ್ದಾರೆ. ಇನ್ನು ಈ ವಿಚಾರದಲ್ಲಿ ಪೋಲಿಸರು, ಇದು ಯಾವುದೋ ತಾಂತ್ರಿಕ ಸಮಸ್ಯೆ ಇಂದು ಹೀಗೆ ತಪ್ಪಾಗಿ ಇ-ಚಲನ್ ಮೂಲಕ ದಂಡ ವಿಧಿಸಲಾಗಿದೆ. ಆದರೆ ಅದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ. ಈ ರೀತಿ ಕಾರ್ ಚಾಲನೆ ಮಾಡಿದ ವ್ಯಕ್ತಿಗೆ “ಹೆಲ್ಮೆಟ್ ಧರಿಸದೆ‌ ಇದ್ದ ಕಾರಣ ದಂಡ ವಿಧಿಸಿದ ಇ-ಚಲನ್ ಸಿಕ್ಕಿದೆ ಮತ್ತು ಚಲನ್ ಮೇಲೆ ಅವರ ಕಾರಿನ ಸಂಖ್ಯೆ ಇದೆ” ಎಂದು ಹೇಳಿದ ವ್ಯಕ್ತಿಯಿಂದ ನಮಗೆ ದೂರು ಬಂದಿದೆ ಎಂದು ಕೂಡಾ ಪೋಲಿಸರು ಹೇಳಿದ್ದಾರೆ.

ಪೋಲಿಸರು ಸಹಾ ಚಲನ್ ಅನ್ನು ಪರಿಶೀಲನೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ತಪ್ಪಾಗಿ ಡೇಟಾ ಫೀಡ್ ನಿಂದಾಗಿ ಹಲವಾರು ಬಾರಿ ತಪ್ಪುಗಳು ಕಂಡುಬಂದಿವೆ ಡೇಟಾ. ನಾವು ಚಲನ್ ಅನ್ನು ಪರಿಶೀಲಿಸಿ ಅನಂತರ ಅದು ತಪ್ಪಾಗಿದೆ ಎಂದು ನಾವು ಕಂಡುಕೊಂಡರೆ ಅದನ್ನು ಕೂಡಲೇ ರದ್ದುಗೊಳಿಸುತ್ತೇವೆ “ಎಂದು ಪೊಲೀಸ್ ವರಿಷ್ಠಾಧಿಕಾರಿ, ಸಂಚಾರ, ಅಜಿಜುಲ್ ಹಕ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆದರೂ ಪಿಯುಶ್ ಅವರು ಕಾರಿನಲ್ಲಿ ಹೆಲ್ಮೆಟ್ ಧರಿಸಿ ಓಡಾಡಿದ್ದು ಮಾತ್ರ ಎಲ್ಲರ ಗಮನ ಸೆಳೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here