ಐಷಾರಾಮಿ ಕಾರಿನಲ್ಲಿ ಕುಳಿತು ರಸ್ತೆಯ ಮೇಲೆ ಏನಾಗುತ್ತಿದೆ ಎಂಬ ಪರಿಜ್ಞಾನ ಕೂಡಾ ಇಲ್ಲದೆ ಕಾರನ್ನು ಚಾಲನೆ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಕಾರು ಹತ್ತಿದ ಕೂಡಲೇ ಏನೋ ಒಂದು ಹುರುಪು, ಹುಮ್ಮಸ್ಸಿನಿಂದ ರಸ್ತೆಯಲ್ಲಿ ಸಂಚರಿಸುವವರ ಬಗ್ಗೆ ಆಲೋಚನೆ ಮಾಡದೆ ಅಪಘಾತ ಮಾಡುವವರು ಕೂಡಾ ಪ್ರತಿದಿನ ಕಾಣ ಸಿಗುತ್ತಾರೆ. ಇಂತಹುದೇ ಮೂಡ್ ನಲ್ಲಿ ತನ್ನ ಐಶಾರಾಮೀ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು, ಜೀಬ್ರಾ ಕ್ರಾಸಿಂಗ್ ನಲ್ಲಿ ಜನರು ರಸ್ತೆ ದಾಟುತ್ತಿದ್ದರೂ ಕೂಡಾ ಗಮನಿಸದೆ ರಸ್ತೆ ದಾಟುವ ಪ್ರಯತ್ನ ಮಾಡುತ್ತಾ, ರಸ್ತೆ ದಾಟುತ್ತಿದ್ದ ತಾಯಿ ಮಗುವಿಗೆ ಗುದ್ದಿರುವ ಘಟನೆ ನಡೆದಿದೆ.

ಈ ಘಟನೆ ನಡೆದಿರುವುದು ಚೀನಾದಲ್ಲಿ. ಕಾರು ಗುದ್ದಿದಾಗ ರಸ್ತೆ ದಾಟುತ್ತಿದ್ದ ತಾಯಿಗೆ ಕಾಲು ಪೆಟ್ಟಾಗಿ ಆಕೆ ರಸ್ತೆಯಲ್ಲೇ ಕುಳಿತು ಬಿಟ್ಟಿದ್ದಾರೆ. ತಾಯಿಯ ನೋವನ್ನು ನೋಡಿದ ಪುಟ್ಟ ಬಾಲಕನಿಗೆ ಸಿಟ್ಟು ಉಕ್ಕಿ ಬಂದಿದ್ದು, ತನ್ನ ತಾಯಿಗೆ ಏನಾಗಿದೆ ಎಂದು ಕೂಡಲೇ ನೋಡಿದ್ದಾನೆ. ತಾಯಿಯ ನೋವು ನೋಡಿ ಕಣ್ಣೀರು ಸುರಿಸಿದ್ದಾನೆ. ಆದರೆ ಕೋಪವನ್ನು ತಡೆಯಲಾಗದೆ, ತನ್ನ ತಾಯಿಗೆ ನೋವುಂಟು ಮಾಡಿದ ಕಾರಿನ ಚಾಲಕನ ಮೇಲೆ ಕೋಪಗೊಂಡಿದ್ದ ಬಾಲಕ, ಕಾರಿನ ಹೆಡ್ ಲೈಟ್ ಗೆ ಕಾಲಿನಿಂದ ಒದ್ದು, ಒಳಗಿದ್ದ ಚಾಲಕನಿಗೆ ಜೋರು ಜೋರಾಗಿ ಆವಾಜ್ ಹಾಕಿದ್ದಾನೆ.

ಬಾಲಕನು ಕಣ್ಣೀರು ಸುರಿಸುತ್ತಲೇ ತನ್ನ ಕೋಪವನ್ನು ಹೊರ ಹಾಕಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಬಾಲಕನ ಕೋಪದ ಪ್ರತಿಕ್ರಿಯೆಗಳ ನಂತರ ಕಾರ್ ಮಾಲೀಕ ಅನಂತರ ಕೆಳಗೆ ಇಳಿದು, ಮಹಿಳೆಯನ್ನು ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಬಾಲಕನು ಕಣ್ಣೀರು ಸುರಿಸುತ್ತಾ ತನ್ನ ಸಿಟ್ಟು ಮತ್ತು ತಾಯಿಯ ಮೇಲಿನ ಪ್ರೀತಿಯನ್ನು ಹೊರ ಹಾಕಿರುವ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here