ಮಧ್ಯಪ್ರದೇಶದ ವಿದಿಷಾ ಜಿಲ್ಲೆಯ ಸಿರೊಂಜ್‌ನ 35 ವರ್ಷದ ವ್ಯಕ್ತಿಯೊಬ್ಬರು ಬುಧವಾರ ತನ್ನ ಎಮ್ಮೆಯನ್ನು ತಹಸಿಲ್ ಕೇಂದ್ರ ಕಚೇರಿಗೆ ತಂದು ತಹಶೀಲ್ದಾರ್ ಅವರ ಕಾರಿಗೆ ಕಟ್ಟಿಹಾಕಿದ್ದು, 25 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸರ ಹಾಗೂ ಅಸಮಾಧಾನ ಗೊಂಡ ರೈತ ತನಗೆ ಆ ಹಣವನ್ನು ನೀಡುವ ಸಾಮರ್ಥ್ಯ ಇಲ್ಲವೆಂದು ಹೇಳಿದ್ದಾರೆ. ರೈತ ಭೂಪತ್ ರಘುವಂಶಿ ಎನ್ನುವವರು, ಪತರಿಯಾ ಹಳ್ಳಿಯ ನಿವಾಸಿಯಾಗಿದ್ದು, ತಮ್ಮ ಜಮೀನಿನ ಹಂಚಿಕೆ ವಿಷಯದಲ್ಲಿ ಅಸಮಾಧಾನಗೊಂಡು ಇಂತಹುದೊಂದು ಕಾರ್ಯ ಮಾಡಿದ್ದು, ಟ್ವಿಟರ್ ನಲ್ಲಿ ಅವರು ಎಮ್ಮೆಯನ್ನು ತಹಸಿಲ್ದಾರ್ ಅವರ ಕಾರಿಗೆ ಕಟ್ಟಿ ಹಾಕಿರುವ ಫೋಟೋಗಳು ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ರೈತ ಭೂಪತ್ ರಘುವಂಶಿ ತಹಸಿಲ್ ಸಿರೊಂಜ್ ನ ಪಥಾರಿಯಾ ಗ್ರಾಮದ ನಿವಾಸಿಯಾಗಿದ್ದು, ಕಳೆದ ಹಲವು ತಿಂಗಳುಗಳಿಂದ ತಮ್ಮ ಜಮೀನು ಹಂಚಿಕೆ ವಿಷಯದಲ್ಲಿ ಅಸಮಾಧಾನರಾಗಿದ್ದಾರೆ. ಆ ವಿಚಾರದಲ್ಲಿ ಸಮಸ್ಯೆಯ ಇತ್ಯರ್ಥ ಹಾಗೂ ದಾಖಲೆಗಳ ಪರಿಶೀಲನೆಗೆ ತಹಸಿಲ್ದಾರ್ ಅವರು ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಎಸ್‌ಡಿಎಂಗೆ ದೂರು ಅರ್ಜಿ ಸಲ್ಲಿಸಿದ್ದರು, ಕಳೆದ ಏಳು ತಿಂಗಳಿಂದ ನನ್ನ ತಂದೆಯ ಭೂಮಿಯನ್ನು ನನಗೆ ಮಂಜೂರು ಮಾಡುವ ವಿಷಯದಲ್ಲಿ ನಾನು ತಹಸಿಲ್ದಾರ್ ಅವರ ಬಗ್ಗೆ ಅಸಮಾಧಾನ ಹೊಂದಿದ್ದೇನೆ ಎಂದಿರುವ ರೈತ, ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ, ಆದ್ದರಿಂದ ಅಧಿಕಾರಿಗಳು ಅವರ ಮುಂದೆಯೇ ಪ್ರಾಮಾಣಿಕವಾಗಿ ಹಂಚಿಕೆ ಮಾಡಿದರೆ ಅದು ಉತ್ತಮವೆಂಬುದು ಅವರ ಅಭಿಪ್ರಾಯವಾಗಿದೆ.

ಅವರು ನನಗೆ ಹಣದ ಕೊರತೆ ಇದೆ, ಹಾಗಾಗಿ ನಾನು ಲಂಚ ಕೊಡಲು ಸಾಧ್ಯವಿಲ್ಲದೆ, ನನ್ನ ಎಮ್ಮೆಯನ್ನು ನಾಯಬ್ ತಹಶೀಲ್ದಾರ್ ಸಿದ್ಧಾಂತ್ ಸಿಂಗ್ಲಾ ಅವರಿಗೆ ಕೊಡುತ್ತೇನೆ, ಅದನ್ನು ಮಾರಿ ಅವರು ತಮ್ಮ ಹಣವನ್ನು ಪಡೆಯಲಿ ಎಂದಿದ್ದು, ಈ ಅರ್ಜಿಯ ಒಂದು ಪ್ರತಿಯನ್ನು ರೈತ ವಿದಿಶಾ ಕಲೆಕ್ಟರ್‌ಗೆ ಕಳುಹಿಸಿದ್ದಾರೆ. ಈ ವಿಷಯವನ್ನು ಮಧ್ಯ ಪ್ರದೇಶ ಬಿಜೆಪಿಯ ಉಪಾಧ್ಯಕ್ಷ ವಿಜೇಶ್ ಲುಣಾವತ್ ಅವರು ಟ್ವೀಟ್ ಮಾಡಿದ್ದು, ಅದಕ್ಕೆ ಸಿಎಂ ಕಛೇರಿಯನ್ನು ಟ್ಯಾಗ್ ಮಾಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here