ನದಿಗಳನ್ನು ಸಂರಕ್ಷಣೆ ಮಾಡಲು ಒಂದು ಅಭಿಯಾನವನ್ನೇ ಆರಂಭಿಸಿದ್ದಾರೆ ಈಶ ಫೌಂಡೇಶನ್ ನ ಸಂಸ್ಥಾಪಕರಾದ ಜಗ್ಗಿ ವಾಸುದೇವ್ ಅವರು. ಅವರ ಈ ಅಭಿಯಾನ ರಾಷ್ಟ್ರ ವ್ಯಾಪಿ ಖ್ಯಾತಿಯನ್ನು ಪಡೆದುಕೊಂಡಿದೆ. ಈಗ ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಒಂದು ಮಾದರಯಾದ ಆದ ಮಾನವಕುಲದ ರಕ್ಷಣೆಯ ಗುರಿಯುಳ್ಳ ಅಭಿಯಾನವನ್ನು ರೂಪಿಸಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು, ಬೆಳೆಸುವ, ಪರಿಸರ ಸಂರಕ್ಷಣೆ, ನದಿಯ ರಕ್ಷಣೆ ಹಾಗೂ ರೈತರ ಅಭಿವೃದ್ಧಿಗೆ ಈ ಅಭಿಯಾನದ ಮೂಲಕ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ವಾಸುದೇವ್ ಜಗ್ಗಿ ಅವರ ಈ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಸೆಲಬ್ರಿಟಿಗಳು, ಸಾರ್ವಜನಿಕರು ಬಹಳ ಉತ್ತಮವಾದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಅಭಿಯಾನಕ್ಕೆ ತಮ್ಮ ಕೈ ಜೋಡಿಸಲು ಎಲ್ಲರೂ ಮುಂದಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಕೂಡಾ ಈ ಅಭಿಯಾನಕ್ಕೆ ತಮ್ಮ ಕೈ ಜೋಡಿಸಿದ್ದಾರೆ. ಕಾಂಗನಾ ಅವರು ಅಭಿಯಾನಕ್ಕೆ ತಮ್ಮ ಬೆಂಬಲ ನೀಡುತ್ತಾ, ಈ ಅಭಿಯಾನಕ್ಕೆ ತಮ್ಮ ಕಡೆಯಿಂದ 42 ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಅದೇ ಸಂದರ್ಭದಲ್ಲಿ ಅವರು ಕಾವೇರಿ ಕೂಗಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡಾ ತಾನು ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.

ತಾವು ನೀಡಿರುವ ಈ ಹಣದಿಂದ ಕಾವೇರಿ ತಟಗಳಲ್ಲಿ 1 ಲಕ್ಷ ಸಸಿಗಳನ್ನು ನೆಡಲಾಗುತ್ತದೆ ಎಂದಿರುವ ಕಂಗನಾ , ಸಸಿಗಳನ್ನು ನೆಡಲು ದೇಣಿಗೆ ನೀಡಿ ಎಂದು ಬಡವರಿಗೆ ಹೇಳಲಾಗುವುದಿಲ್ಲ. ಆದರೆ ಯಾರಿಗೆಲ್ಲಾ ದೇಣಿಗೆ ನೀಡಲು ಸಾಧ್ಯವೋ ಅವರೆಲ್ಲಾ ಕನಿಷ್ಠವೆಂದರೂ 2 ಸಸಿಗಳಿಗೆ ದೇಣಿಗೆ ನೀಡಿ ಎಂದಿದ್ದಾರೆ. ಇಂತಹ ಒಂದು ಪ್ರಯತ್ನ ನಮ್ಮ ಪರಿಸರವನ್ನು ಸಂರಕ್ಷಿಸಲು ನೆರವಾಗುತ್ತದೆ. ಈ ಕಾರ್ಯವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಕೂಡಾ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here