CBSE 9th ಕ್ಲಾಸ್ ಪುಸ್ತಕದಲ್ಲಿ ಡೇಟಿಂಗ್ ಪಾಠ. !
ದೆಹಲಿ: ಶಾಲಾ ಪಠ್ಯದಲ್ಲಿ ಸಮಾಜ ಸುಧಾರಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಾಠಗಳಿರುತ್ತವೆ. ವ್ಯಕ್ತಿತ್ವ ವಿಕಸನದ ಅಧ್ಯಾಯ ಇರುವುದನ್ನೂ ನೋಡಿದ್ದೇವೆ.
ಆದರೆ CBSE 9ನೇ ತರಗತಿ ಪುಸ್ತಕದಲ್ಲಿ ‘ಡೇಟಿಂಗ್, ರಿಲೇಷನ್‌ಶಿಪ್’ ಬಗ್ಗೆ ಪಾಠ ಇರುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ‘ಶಾಲಾ ವಿದ್ಯಾರ್ಥಿಗಳಿಗೆ ಲವ್, ಕ್ರಷ್ ಬಗ್ಗೆ ಕ್ಲಾಸ್ ಗಳಲ್ಲಿ ಕಲಿಸಿದರೆ, ಭವಿಷ್ಯದಲ್ಲಿ ಬ್ರೇಕಪ್‌ಗಳನ್ನು ಹೇಗೆ ಎದುರಿಸಬೇಕೆಂದು ಕಲಿಸಲಾಗುತ್ತದೆಯೇ?’ ಎಂದು ಟಿಂಡರ್ ಇಂಡಿಯಾ ಪ್ರಶ್ನಿಸಿದೆ.