ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಿ ಸುಮಾರು 2 ತಿಂಗಳು ಕಳೆದಿದ್ದರೂ ಕೆಲವು ಮಾಜಿ ಸಂಸದರು ನೂತನ ಸಂಸದರಿಗೆ ತಾವು ವಾಸವಿರು ಸರ್ಕಾರಿ ನಿವಾಸ ಬಿಟ್ಟು ಕೊಟ್ಟಿಲ್ಲ. ಅಧಿಕಾರ ಮುಗಿದರೂ ಸರ್ಕಾರಿ ನಿವಾಣಗಳಲ್ಲಿಯೇ ವಾಸವಿದ್ದಾರೆ. ಈಗ ಇದೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ನಿವಾಸ‌ ಖಾಲಿ ಮಾಡದೆ ಉಳಿದಿರುವ ಮಾಜಿ ಸಂಸದರುಗಳಿಗೆ ಇನ್ನೊಂದು ವಾರದೊಳಗೆ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ಆದೇಶ ನೀಡಿದೆ. ಅದರ ಜೊತೆಗೆ ಮೂರು ದಿನದೊಳಗೆ ನಿವಾಸಗಳಿಗೆ ನೀಡುವ ನೀರು, ಗ್ಯಾಸ್ ಹಾಗೂ ವಿದ್ಯುತ್ ಸರಬರಾಜನ್ನು ಸ್ಥಗಿತ ಮಾಡಿ ಎನ್ನುವ ಸೂಚನೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ನೂತನ ಸರ್ಕಾರ ಅಸ್ತಿತ್ವ ಪಡೆದ ಮೇಲೆ ನಿಯಮಗಳ ಪ್ರಕಾರ ಮಾಜಿ ಸಂಸದರು ಅಥವಾ ಸಚಿವರು ಲೋಕಸಭೆಯು ವಿಸರ್ಜನೆಗೊಂಡ 1 ತಿಂಗಳ ಒಳಗೆ ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಬೇಕು. ಆದರೆ ಅವಧಿ ಮೀರಿ 2 ತಿಂಗಳು ಕಳೆಯುತ್ತಾ ಬಂದಿದ್ದರೂ ಕೂಡಾ ಕೆಲವು ಮಾಜಿ ಸಂಸದರು ಮಾತ್ರ ತಾವಿರವ ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಿಲ್ಲ. ನಗರದ ಪ್ರತಿಷ್ಠಿತ ಲ್ಯೂಟೆನ್ಸ್ ದೆಹಲಿ ಪ್ರದೇಶದಲ್ಲಿ ಹಂಚಿಕೆ ಮಾಡಲಾಗಿದ್ದ ಸರ್ಕಾರಿ ನಿವಾಸಗಳಲ್ಲಿಯೇ ಒಬ್ಬರು,‌ಇಬ್ಬರಲ್ಲ ಬರೋಬ್ಬರಿ 200 ಮಾಜಿ ಸಂಸದರು ಉಳಿದುಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ.

ಈಗ ಅವರಿಗೆ ಕೆಂದ್ರ ಸರ್ಕಾರವು ಮನೆ ಖಾಲಿ ಮಾಡಲು ಸೂಚನೆಯನ್ನು ಹೊರಡಿಸಿದ್ದು, ಇನ್ನು ಏಳು ದಿನಗಳ ಗಡುವನ್ನು ನೀಡಲಾಗಿದೆ. ನಿವಾಸ ಖಾಲಿ ಮಾಡಲು ಏಳು ದಿನಗಳ ಅವಧಿ ಇದ್ದರೆ, ಇನ್ನು ಮೂರು ದಿನದೊಳಗೆ ನೀರು ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸೂಚನೆ ನೀಡಿದೆ ಎಂದು ಸಂಸತ್‍ನ ವಸತಿ ಸಮಿತಿ ಅಧ್ಯಕ್ಷ ಸಿ.ಆರ್.ಪಾಟೀಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಮಾಜಿ ಸಂಸದರು ನಿವಾಸಗಳನ್ನು ಖಾಲಿ ಮಾಡದ ಹೊರತು ಹೊಸ ಸಂಸದರಿಗೆ ನಿವಾಸಗಳನ್ನು ನೀಡುವುದು ಸಾಧ್ಯವಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here