ನೀರು ಜೀವರಾಶಿ ಗಳ ಜೀವನ ಸೆಲೆ. ಆದರೆ ನೀರಿಗೆ ಇತ್ತೀಚಿನ ವರ್ಷಗಳಲ್ಲಿ ಆಗಿರುವ ಸಮಸ್ಯೆ ಎಲ್ಲರಿಗೂ ತಿಳಿದಿದ್ದೆ. ಈ ನಿಟ್ಟಿನಲ್ಲಿ ಜಲ ಮೂಲಗಳ ಸಂರಕ್ಷಣೆಗೆ ಮುಂದಾಗಿದೆ ಕೇಂದ್ರ ಸರ್ಕಾರ‌‌. ನದಿಗಳನ್ನು ಸಂರಕ್ಷಣೆ ಮಾಡಲು ಯೋಜನೆಗಳನ್ನು ರೂಪಿಸುವ ಮೂಲಕ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ನದಿಗಳನ್ನು ಶುದ್ಧೀಕರಣ ಮಾಡುವ ಮೂಲಕ, ನದಿಗಳಿಗೆ ಹೊಸ ಜೀವವನ್ನು ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ. ಆ ಮೂಲಕ ಜೀವ ಸೆಲೆಯಾದ ನೀರಿನ ಮೂಲಗಳನ್ನು ಮುಂದಿನ ಪೀಳಿಗೆಗಳಿಗೂ ಉಳಿಸುವ ಕಾರ್ಯ ಆರಂಭವಾಗಲಿದೆ ಎಂದು ಹೇಳಬಹುದಾಗಿದೆ.

ದೇಶದಲ್ಲಿ 16 ರಾಜ್ಯ ಗಳಲ್ಲಿನ ಪ್ರಮುಖವಾದ 13 ನದಿಗಳ ಶುದ್ಧೀಕರಣಕ್ಕಾಗಿ 5,870 ಕೋಟಿ ರೂಪಾಯಿಗಳ ವೆಚ್ಚರ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ. ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ ಅಡಿಯಲ್ಲಿ ರೂಪಿಸಲಾಗಿರುವ ಈ ನದಿ ಶುದ್ಧೀಕರಣ ಯೋಜನೆಯಿಂದ ಗಂಗಾ ನದಿಯನ್ನು ಮಾತ್ರ ಹೊರಗಿಡಲಾಗಿದೆ. ಏಕೆಂದರೆ ಗಂಗಾ ನದಿಯ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೇರೊಂದು ಯೋಜನೆ ಕಾರ್ಯಗತವಾಗಿದ್ದು, ಆ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ.

ಎನ್.ಆರ್.ಸಿ.ಪಿ ಯೋಜನೆಯ ಅಡಿಯಲ್ಲಿ ಸುಮಾರು 5,870 ಕೋಟಿ ರೂ ಗಳ ಯೋಜನೆಗಳ ಪೈಕಿ ಕೇಂದ್ರದ ಪಾಲು ಸುಮಾರು 2,522 ಕೋಟಿ ರೂ ಗಳಾಗಿದ್ದು, ಈ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆಯೆಂದು ಪರಿಸರ ಖಾತೆ ರಾಜ್ಯ ಸಚಿವರಾದ ಬಾಬುಲ್ ಸುಪ್ರಿಯೋ ಲೋಕ ಸಭೆಗೆ ತಿಳಿಸಿದ್ದಾರೆ. ಹದಿನಾರು ರಾಜ್ಯಗಳ ಪ್ರಮುಖ ನದಿಗಳನ್ನು ಶುದ್ಧೀಕರಣ ಮಾಡುವ ಮೂಲಕ, ಆ ನೀರನ್ನು ಕುಡಿಯಲು ಯೋಗ್ಯವನ್ನಾಗಿ ಮಾಡುವ ಪ್ರಯತ್ನ ಇದಾಗಿದ್ದು, ನೀರಿನ ಮೂಲದ ಸಂರಕ್ಷಣೆಯ ಭಾಗವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here