ಆಯಾಸವಾದಾಗ ಕುರ್ಚಿಯ ಮೇಲೆ ಕೂರುವುದು, ವಿಶ್ರಮಿಸುವುದು ಸಾಮಾನ್ಯವಾಗಿ ಎಲ್ಲರಿಗೂ ಇರುವ ಅಭ್ಯಾಸ. ಆದರೆ ಕುರ್ಚಿಯ ಮೇಲೆ ಕೂತರೆ ಸಾವಿಗೆ ಆಹ್ವಾನ ನೀಡಿದಂತೆ ಎಂದರೆ ಯಾರೊಬ್ಬರೂ ಕೂರುವುದಿಲ್ಲ ಹಾಗೂ ಅದನ್ನು ನಂಬುವುದಿಲ್ಲ ಜನ. ಆದರೆ ಇಂಗ್ಲೆಂಡ್‌ ನಲ್ಲಿ ಒಂದು ಮ್ಯೂಸಿಯಂ‌ ನಲ್ಲಿ ಒಂದು ವಿಶೇಷವಾದ ಕುರ್ಚಿ ಇದ್ದು, ಆ ಕುರ್ಚಿ ಶಾಪಿತ ಎಂದೇ ಜನರು ನಂಬಿದ್ದು, ಅದರ ಮೇಲೆ ಕುಳಿತವರು ಸಾಯುವರು ಎಂಬ ನಂಬಿಕೆ ಬಹಳ ಗಾಢವಾಗಿದ್ದು, ಆ ಕುರ್ಚಿಯ ಮೇಲೆ ಕೂರುವ ಧೈರ್ಯ ಯಾರೂ ಮಾಡುವುದಿಲ್ಲ‌. ಅಲ್ಲದೆ ಇದಕ್ಕೆ ತಕ್ಕಂತೆ ಈ ಕುರ್ಚಿ ಮೇಲೆ ಕುಳಿತವರು ಕೂಡಾ ಸತ್ತಿರುವುದು ಜನರ ನಂಬಿಕೆಗೆ ಪುಷ್ಟಿ ನೀಡುವಂತೆ ಇದೆ.

ಇಂಗ್ಲೆಂಡಿನ ಥರ್ಕಸ್ ಮ್ಯೂಸಿಯಂ ನಲ್ಲಿ ನೆಲದಿಂದ ಆರು ಅಡಿ ಎತ್ತರದಲ್ಲಿ ಹಲವು ವರ್ಷಗಳಿಂದ ಕುರ್ಚಿಯೊಂದನ್ನು ಗೋಡೆಯ ಮೇಲೆ ನೇತು ಹಾಕಲಾಗಿದೆ. ಕಾರಣ ಇದರ ಮೇಲೆ ಕುಳಿತವರು ಯಾವುದಾದರೊಂದು ರೀತಿ ಸಾಯುವುದು ಖಚಿತ ಎನ್ನಲಾಗಿದೆ. ಅಲ್ಲಿನ ಇತಿಹಾಸದ ಪ್ರಕಾರ ಈ ಕುರ್ಚಿ ಥಾಮಸ್ ಬಸ್ಬಿ ಎನ್ನುವ ವ್ಯಕ್ತಿಯದ್ದು‌. ಆತ ಅದರ ಮೇಲೆ ಯಾರನ್ನೂ ಕೂರಲು ಬಿಡುತ್ತಿರಲಿಲ್ಲ. ಆದರೆ 1702 ರ ಒಂದು ರಾತ್ರಿ ತನ್ನ ಮಾವ ಕುಳಿತಿರುವುದನ್ನು ನೋಡಿ ಆತನನ್ನು ಕೊಲೆ ಮಾಡಿದ. ಬಸ್ಬಿಗೆ ಕೊಲೆ ಮಾಡಿದ ಆಪಾದನೆಯ ಮೇರೆಗೆ ನೇಣು ಶಿಕ್ಷೆ ವಿಧಿಸಲಾಯಿತು. ನಂತರ ತನ್ನ ಸಾವಿನ ದಿನಗಳಲ್ಲಿ ಅದರ ಮೇಲೆ ಯಾರೇ ಕುಳಿತರೂ ಅವರು ಸಾಯಲಿ ಎಂದು ಶಪಿಸಿದನಂತೆ.

ಇದಾದ ಮೇಲೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಈ ಕುರ್ಚಿಯನ್ನು ಒಂದು ಪಬ್ ನಲ್ಲಿ ಇಟ್ಟು ಅದಕ್ಕೆ ಹಾಟ್ ಸೀಟ್ ಎಂದು ಹೆಸರಿಟ್ಟಿದ್ದರು ಎನ್ನಲಾಗಿದ್ದು, ಕೆಲವು ದಿನ ಯಾರೂ ಅದರ ಬಗ್ಗೆ ಗಮನಿಸಿ ಇರಲಿಲ್ಲ. ಆದರೆ ನಂತರ ತಿಳಿದಿದ್ದು ಆ ಕುರ್ಚಿಯ ಮೇಲೆ ಕುಳಿತವರೆಲ್ಲಾ ಸತ್ತಿದ್ದಾರೆಂದು. ಇದುವರೆವಿಗೂ ಸುಮಾರು 63 ಜನರು ಸತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಲವರು ಇದೆಲ್ಲಾ ಕಾಕತಾಳೀಯ ಅಷ್ಟೇ ಎಂದರೂ , ಆ ಕುರ್ಚಿ ಮೇಲೆ ಕುಳಿತವರೆಲ್ಲಾ ಸತ್ತಿರುವುದು ಭಯ ಹುಟ್ಟಿಸುತ್ತದೆ. ಅಲ್ಲದೆ ಮ್ಯೂಸಿಯಂ ನಲ್ಲಿ ಮೊದಲು ನೆಲದ‌ ಮೇಲೆ ಇದ್ದ ಕುರ್ಚಿ ಮೇಲೆ ಅರಿಯದೆ ಕುಳಿತವರ ಸಾವು ಆದ ಮೇಲೆ, ಮತ್ತಾರೂ ಕೂರದೇ ಇರಲೆಂದು ಈಗ ಅದನ್ನು ಎತ್ತರದಲ್ಲಿ ನೇತು ಹಾಕಲಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here