ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -7 ಈಗಾಗಲೇ ಜನರನ್ನು ರಂಜಿಸುತ್ತಾ ಸಾಗಿದ್ದು, ನಾಲ್ಕನೇ ವಾರಕ್ಕೆ ಪ್ರವೇಶ ಮಾಡಿದೆ. ನಾಲ್ಕನೇ ವಾರದಲ್ಲಿ ಬಿಗ್ ಹೌಸ್ ನ ವಾತಾವರಣ ಸ್ವಲ್ಪ ಬಿಸಿಯಾಗಿದ್ದು, ಬಿಗ್ ಹೌಸ್ ನಲ್ಲಿ ನಡೆದ ಒಂದು ಸಂವಾದದಿಂದ ಈಗ ಬಿಗ್ ಹೌಸ್ ನ ಹೊರಗೆ ಕೂಡಾ ವಾತಾವರಣ ಸ್ವಲ್ಪ ಬಿಸಿಯಾಗಿದೆ. ಶೋ ನ ಸ್ಪರ್ಧಿ ಒಬ್ಬರ ವಿರುದ್ಧ ಕೂಗು ಕೇಳಿ ಬಂದಿದ್ದು, ಅವರ ವಿರುದ್ಧ ಕೆಂಡ ಕಾರಿದ್ದಾರೆ ಜನರು. ಇಷ್ಟಕ್ಕೂ ಅವರ್ಯಾರು? ಹಾಗೂ ಜನರ ಈ ಅಸಮಾಧಾನಕ್ಕೆ ಕಾರಣವೇನು? ಎಂಬುದನ್ನು ತಿಳಿಯೋಣ ಬನ್ನಿ.

ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿ ಚೈತ್ರ ಕೊಟ್ಟೂರು ಅವರು ನೀಡಿದ ಒಂದು ಹೇಳಿಕೆ ಈಗ ಸಮಾಜದ ಒಂದು ಸಮುದಾಯವನ್ನು ಕೆರಳಿಸಿದೆ. ಅವರು ಚೈತ್ರ ಕೊಟ್ಟೂರ್ ಅವರ ಮಾತಿಗೆ ಬೇಸತ್ತು ಪ್ರತಿಭಟನೆಯನ್ನು ನಡೆಸುವ ಹಂತಕ್ಕೆ ತಲುಪಿರುವುದು ವಾಸ್ತವ‌. ಸಂವಾದ ನಡೆಯುವ ಸಂದರ್ಭವೊಂದರಲ್ಲಿ ಅಸ್ಪೃಶ್ಯತೆ ಕುರಿತು ಚೈತ್ರಾ ಕೊಟ್ಟೂರು ಅವರು ನೀಡಿದರೆನ್ನಲಾದ ಹೇಳಿಕೆಯೊಂದರ ಬಗ್ಗೆ ಹಲವರು ಆಕ್ರೋಶ ವಕ್ತಪಡಿಸಿರುವುದು ಮಾತ್ರವಲ್ಲದೇ ಅಂಬೇಡ್ಕರ್ ಸೇನೆ ಎನ್ನುವ ದಲಿತ ಸಂಘಟನೆಯೊಂದು ಹಲವೆಡೆ ಪ್ರತಿಭಟನೆ ನಡೆಸಲು ಮುಂದಾಗಿದೆ.

ಅಂಬೇಡ್ಕರ್ ಸೇನೆ ಈಗಾಗಲೇ ಬೀದರ್ ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ನಡೆಸಿದ್ದು, ಅಷ್ಟಕ್ಕೆ ಅವರು ಸುಮ್ಮನಾಗದೇ ಮತ್ತೆ ನಾಳೆ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್ ಬಾಸ್ ಮನೆಯೆದುರು ತಮ್ಮ ಪ್ರತಿಭಟನೆಯನ್ನು ನಡೆಸಲಿದ್ದಾರೆ. ಈ ಸಂಬಂಧ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಪಿ ಮೂರ್ತಿಯವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಅದರ ಮೂಲಕ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ರಾಮನಗರ ಸುತ್ತ ಮುತ್ತ ಇರುವ ಪ್ರತಿಯೊಬ್ಬರೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿ ಕೂಡಾ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here