ಬಿಗ್ ಬಾಸ್ ಸೀಸನ್ 7 ರಲ್ಲಿ ಮನೆಯ ಸದಸ್ಯರಿಗೆ ಸಿಕ್ಕ ಶಾಕ್ ಅಥವಾ ಸರ್ಪ್ರೈಸ್ ಗಳಲ್ಲಿ ಎಲ್ಲದಕ್ಕಿಂದ ಮುಖ್ಯವಾದುದು ಎಂದರೆ ಎಲಿಮಿನೇಟ್ ಆಗಿದ್ದ ಚೈತ್ರ ಕೊಟ್ಟೂರು ಏಳನೇ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಯೊಳಗೆ ಬಂದಿದ್ದು. ಹೀಗೆ ಎರಡನೇ ಬಾರಿ ಮನೆಯೊಳಗೆ ಬರಲು ಅವಕಾಶ ಪಡೆದ ಚೈತ್ರ ಕೊಟ್ಟೂರು ಕೂಡಾ ಎರಡನೇ ಬಾರಿ ಸಾಕಷ್ಟು ಬದಲಾಗಿ ಬಂದಿದ್ದಾರೆ. ಅವರ ಮಾತು,ನಡವಳಿಗೆ ಮತ್ತು ತೊಡುವ ಬಟ್ಟೆಗಳಲ್ಲೂ ಸಾಕಷ್ಟು ಬದಲಾವಣೆ ಕಂಡಿದ್ದು, ಎಲಿಮಿನೇಷನ್ ಆಗಿ ನಂತರ ಬಂದ ಚೈತ್ರ ತುಂಡು ಉಡುಗೆಗಳಿಗೆ ಪ್ರಾಧಾನ್ಯತೆ ನೀಡಿದ್ದು, ಅದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅವರು ಕೂಡಾ ಇದರ ಬಗ್ಗೆ ಮಾತನಾಡಿದ್ದಾರೆ.

ನಿನ್ನೆ ವಾರದ ಕಥೆಯಲ್ಲಿ ಸುದೀಪ್ ಅವರು ಕೂಡಾ ಈ ವಿಷಯದ ಬಗ್ಗೆ ಪರೋಕ್ಷವಾಗಿ ಗಮನ ಸೆಳೆದರು. ಕಾರ್ಯಕ್ರಮದ ಆರಂಭದಲ್ಲೇ ಸುದೀಪ್ ಅವರು ಚೈತ್ರಾ ಅವರನ್ನು‌ ಮಾತನಾಡಿಸುತ್ತಾ, ಚೈತ್ರ ಅವರು ಎಲ್ಲಾ ಎಪಿಸೋಡ್ ಗಳನ್ನು ಕೂಡಾ ನೋಡಿಕೊಂಡು ಮತ್ತೆ ಮನೆಯೊಳಗೆ ಹೋಗಿದ್ದಾರೆ, ಅದಕ್ಕೆ ಅವರನ್ನು ಮಾತನಾಡಿಸ್ತೀನಿ‌ ಎನ್ನುತ್ತಾ ಇನ್ಮುಂದೆ ಯಾವುದೇ ಪ್ರಶ್ನೆ ಕೇಳಿದರೆ ಅದು ಶಾರ್ಟ್ ಆಗಿರಲಿ, ಯಾಕೆಂದ್ರೆ ಹೆಂಗೂ ನಿಮ್ಮ ಡ್ರೆಸ್ ಕೂಡಾ ಶಾರ್ಟ್ ಆಗಿದೆ ಈಗ, ಈ ಬದಲಾವಣೆ ಚೆನ್ನಾಗಿದೆಯಾ? ಎಂದು ಕೇಳಿದರು.

ಇಲ್ಲಿ ಸುದೀಪ್ ಅವರು ಹೇಳಿದ ವಿಷಯದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಚೈತ್ರ ಅವರಿಗೆ ಇದೆ. ಅಂದರೆ ಬದಲಾವಣೆ ಎಂಬುದು ಸರಿ, ಆದರೆ ಬಿಗ್ ಬಾಸ್ ಶೋ ನಲ್ಲಿ ಬಟ್ಟೆಗಳಲ್ಲಿ ಬದಲಾವಣೆ ಮಾಡಿಕೊಂಡು ಹೆಚ್ಚು ದಿನ ಮುಂದುವರೆಯುತ್ತೇವೆ ಎಂಬ ಆಲೋಚನೆ ಇದ್ದರೆ ಅದು ಅವರ ದಡ್ಡತನ ಎಂಬುದನ್ನು ಸುದೀಪ್ ಅವರು ಪರೋಕ್ಷವಾಗಿ ಹೇಳಿದಂತೆ ಇದೆ. ಇನ್ನು ಬದಲಾವಣೆ ಬಗ್ಗೆ ಎರಡನೇ ಬಾರಿಗೆ ಮನೆಗೆ ಮರಳಿ ಬಂದ ಚೈತ್ರ ಅವರು ಕೂಡಾ ಹೇಳಿದ್ದರು. ನಾನು ಈಗ ಬದಲಾಗಿ ಬಂದಿದ್ದೇನೆ ಎಂದು ಅವರು ಆಗಾಗ ಹೇಳಿದ್ದುಂಟು.

Photos credit  :- colors kannada

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here