ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಡೈನಾಮಿಕ್ ಸ್ಟಾರ್ ದೇವರಾಜ್ ಮತ್ತು ಪ್ರಜ್ವಲ್‌ ದೇವರಾಜ್ ಅವರನ್ನು  ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಮೂಲಕ ಸ್ಟಾರ್ ನಟರಿಗೆ ಬಿಗ್​ ರಿಲೀಫ್​ ಸಿಕ್ಕಿದೆ. ಯಾಕಂದ್ರೆ ಇಡೀ ಪ್ರಕರಣದಲ್ಲಿ ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಕೋರ್ಟ್​ಗೆ ಅಲೆಯುವಂತಿಲ್ಲ. ಯಾವುದೇ ಫೈನ್ ಕಟ್ಟುವ ಅಗತ್ಯವಿಲ್ಲ. ವಿವಿ ಪುರಂ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಿಂದ ಈ ಮಾಹಿತಿ ಸ್ಪಷ್ಟವಾಗಿದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತದ ಹೊಣೆ ರಾಯ್ ಆಂಥೋನಿ ಮೇಲೆ ಬಿದ್ದಿದೆ‌.ಇಡೀ ಪ್ರಕರಣದಲ್ಲಿ ಕಾರು ಚಾಲಕ ರಾಯ್​ ಆಂಥೋನಿ ಒಬ್ಬನೇ ಆರೋಪಿ. ಪ್ರಕರಣಕ್ಕೆ ರಾಯ್ ಆಂಥೋಣಿ ಮಾತ್ರ ಹೊಣೆಗಾರ ಎಂಬುದು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ಐಪಿಸಿ ಸೆಕ್ಷನ್ 279, 337, 338 ಹಾಗೂ 279 ಅಡಿಯಲ್ಲಿ ಕೇಸ್​ ದಾಖಲಿಸಿದ್ದಾರೆ. 279- ಅತಿವೇಗದ ಚಾಲನೆ, 337- ಅಜಾಗರೂಕತೆಯಿಂದ ಸಣ್ಣ ಪ್ರಮಾಣದ ಗಾಯ ಉಂಟು ಮಾಡುವುದು, 338- ಅಜಾಗರೂಕತೆಯಿಂದ ದೊಡ್ಡ ಪ್ರಮಾಣದ ಗಾಯ ಉಂಟು ಮಾಡುವುದು. ಈ ಮೂರು ಸೆಕ್ಷನ್​ಗಳಿಗೂ ಚಾಲಕನೇ ಹೊಣೆ. ಚಾಲಕ ಮಾತ್ರ ಕೋರ್ಟ್ ಮೆಟ್ಟಿಲು ಹತ್ತಬೇಕು.

ಅಪಘಾತವಾದ ವೇಳೆ ಆಂಥೋನಿ ರಾಯ್ ಕಾರು ಚಾಲನೆ ಮಾಡುತ್ತಿದ್ದ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಐಷಾರಾಮಿ ಕಾರು ಬಿಡಿಸಿಕೊಳ್ಳಲು‌ ಕೋರ್ಟ್ ಮೆಟ್ಟಿಲು ಹತ್ತಲೇಬೇಕು. ಒಂದು ವೇಳೆ ಅಪರಾಧ ನಡೆಸಿರುವುದು ಸಾಬೀತಾದರೆ ರಾಯ್ ಆಂಥೋನಿಗೆ ಸುಮಾರು ಎರಡೂವರೆ ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸುವ ಸಾಧ್ಯತೆಯಿದೆ. ಸದ್ಯ ವಿವಿ ಪುರಂ ಠಾಣೆ ಪೊಲೀಸರು ಕಾರು ವಶಕ್ಕೆ ಪಡೆದಿದ್ದಾರೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here