ಕಾರು ಅಪಘಾತದಿಂದಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್​ ಅವರು ಇಂದು ಮೈಸೂರಿನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರು.ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ದರ್ಶನ್, ಊಟ ಮಾಡಿಕೊಂಡು ಬರುವಾಗ ಅಪಘಾತ ಸಂಭವಿಸಿತ್ತು. ನನ್ನ ಕಾರಿನಲ್ಲಿ ಐದು ಮಂದಿ ಮಾತ್ರ ಕೂರಲು ಅವಕಾಶವಿದೆ. ನಾವು ಐದು ಮಂದಿ ಮಾತ್ರ ಕಾರಿನಲ್ಲಿದ್ದವು. ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಅಪಘಾತ ಸ್ಥಳ ನೋಡಿದರೇ ಗೊತ್ತಾಗುತ್ತೆ ಎಂದರು.ಈ ವೇಳೆ ಮಾಧ್ಯಮದ ಮುಂದೆ ಮಾತನಾಡಿದ ಅವರು, ಕೇವಲ ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ.

ವೈದ್ಯರು ನನಗೆ ಉತ್ತಮ ಚಿಕಿತ್ಸೆ ನೀಡಿದರು ಎಂದು ಧನ್ಯವಾದಗಳು ಎಂದು ತಿಳಿಸಿದರು.ಅಪಘಾತದ ಬಗ್ಗೆ ತಿಳಿಸಿದ ಅವರು, ನನ್ನ ಕಾರು ವಿದ್ಯುತ್​ ಕಂಬಕ್ಕೆ ಹೊಡೆದೇ ಇಲ್ಲ. ಬೇರೊಂದು ಅಪಘಾತದಲ್ಲಿ ಆ ಕಂಬ ಉರುಳಿಬಿದ್ದಿತ್ತು.ನಾವು ಕಾರಿನಲ್ಲಿ ಆರು ಜನ ಇರಲಿಲ್ಲ, 5 ಜನ ಮಾತ್ರ ಇದ್ದೆವು. ಊಟ ಮಾಡಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಜಾಗ ನೋಡಿದರೆ ಅಪಘಾತದ ಬಗ್ಗೆ ಗೊತ್ತಾಗುತ್ತದೆ ಎಂದರುಕಾರನ್ನು ನನ್ನ ಗೆಳೆಯ ಓಡಿಸುತ್ತಿದ್ದರು.

ಇದರಲ್ಲಿ ರಾಯ್​ ಆಂಟೋನಿಯ ತಪ್ಪು ಕೂಡ ಇಲ್ಲ. ಅಪಘಾತದ ಬಗ್ಗೆ ಸಾಕಷ್ಟು ಊಹಾ ಪೋಹಾ ನಡೆದಿದೆ. ಆದರೆ ಅದೆಲ್ಲಾ ಸುಳ್ಳು. ನನಗೆ ಒಂದು ತಿಂಗಳ ವಿಶ್ರಾಂತಿ ಸಾಕು. ಒಂದು ವರ್ಷ ಸುಧಾರಿಸಿಕೊಳ್ಳುವಂತಹ ಅಪಘಾತವಾಗಿಲ್ಲ ಎಂದರು. ದರ್ಶನ್​ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬರುತ್ತಿದ್ದು, ಅವರಿಗೆ ವಿಶ್ರಾಂತಿ ಅವಶ್ಯಕವಿದೆ. ಹಾಗೇ ಸಣ್ಣ ಪುಟ್ಟ ವೈದ್ಯಕೀಯ ಪರೀಕ್ಷೆ ಬಾಕಿ ಇದ್ದು, ದೈನಂದಿನ ತಪಾಸಣೆ ಅವಶ್ಯಕವಿದೆ. ಈ ಹಿನ್ನಲೆಯಲ್ಲಿ ಅವರಿಗೆ ಮನೆಯಲ್ಲಿಯೇ ವಿಶ್ರಾಂತಿ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here