ಇತ್ತೀಚೆಗಷ್ಟೆ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡು , ಕೆಲವು ದಿನಗಳ ಚಿಕಿತ್ಸೆಯ ನಂತರ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿರುವ ವಿಷಯ ತಿಳಿದದ್ದೆ. ಆದರೆ ವಿಶ್ರಾಂತಿ ಪಡೆಯಬೇಕಾಗಿದ್ದ ದರ್ಶನ್ ಅವರು ಆರೋಗ್ಯಕ್ಕಿಂತ ಕರ್ತವ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿರುವ ಅಪರೂಪದ ಘಟನೆಯೊಂದು ನಡೆದಿದೆ. ನೋವಿನಲ್ಲೂ ಕರ್ತವ್ಯ ಮೆರೆದ ದರ್ಶನ್ ಅವರ ನಡೆ ಈಗ ಮೆಚ್ಚುಗೆಗೆ ಪಾತ್ರವಾಗಿದೆ. ದರ್ಶನ್ ಅವರು ರಾಜ್ಯ ಅರಣ್ಯ ಇಲಾಖೆಯ ಅಧಿಕೃತ ರಾಯಭಾರಿಯಾಗಿದ್ದಾರೆ. ಆದ್ದರಿಂದ ಆಗಾಗ ಅರಣ್ಯಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಾಣಿ ಪಕ್ಷಿಗಳನ್ನು ವೀಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ರಸ್ತೆ ಅಪಘಾತದ ನಂತರ ಅವರಿಗೆ ವಿಶ್ರಾಂತಿಯ ಅಗತ್ಯವಿದ್ದುದರಿಂದ ಅವರಿಗೆ ಅರಣ್ಯ ಇಲಾಖೆಯ ರಾಯಭಾರಿಯಾಗಿ ಮಾಡಬೇಕಾದ ಕರ್ತವ್ಯವನ್ನು ನಿರ್ವಹಿಸುವುದು ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಹಲವರ ಈ ನಂಬಿಕೆಗಳನ್ನು ದರ್ಶನ್ ಅವರು ಸುಳ್ಳಾಗಿಸಿದ್ದಾರೆ. ದರ್ಶನ್ ಅವರು ತಮಗಾಗಿದ್ದ ಗಾಯದ ನೋವುಗಳನ್ನು ಪಕ್ಕಕ್ಕಿಟ್ಟು ರಾಯಭಾರಿಯಾಗಿ ತಾವು ಮಾಡಬೇಕಾದ ಕರ್ತವ್ಯ ಮಾಡಲು ಟೊಂಕ ಕಟ್ಟಿದಂತೆ, ತಮ್ಮ ಕರ್ತವ್ಯ ಮರೆಯದೆ ಅರಣ್ಯ ವೀಕ್ಷಣೆ ಮಾಡಲು ಹೋಗಿದ್ದಾರೆ. ಅವರು ತಮ್ಮ ಆರೋಗ್ಯದ ಬಗ್ಗೆ ಯೋಚಿಸದೆ ತಮ್ಮ ಕೆಲಸದ ಬಗ್ಗೆ ಆಲೋಚನೆ ಮಾಡಿರುವುದು ನಿಜವಾಗಿಯೂ ಶ್ಲಾಘನೀಯ ಎನಿಸಿದೆ.

ಗಾಯದ ನೋವನ್ನು ಮರೆತು ಅರಣ್ಯ ವೀಕ್ಷಣೆಗೆ ಹೋದದ್ದು ಮಾತ್ರವಲ್ಲದೆ, ಅಲ್ಲಿನ ಪ್ರಕೃತಿಯ ಸೌಂದರ್ಯ ಸವಿಯುತ್ತಾ ತಮ್ಮ ನೋವನ್ನು ಕೆಲಕಾಲ ಮರೆತಿದ್ದಾರೆ. ಅರಣ್ಯದಲ್ಲಿ ಕ್ಯಾಮೆರಾ ಹಿಡಿದು ಪ್ರಕೃತಿಯ ಸೊಬಗನ್ನು ಕ್ಯಾಮೆರಾ ಕಣ್ಣಿನಲ್ಲಿ ಬಂಧಿಸಿದ್ದಾರೆ. ಅರಣ್ಯದಲ್ಲಿ ದರ್ಶನ್ ಅವರ ಸುತ್ತಾಟದ ಫೋಟೋಗಳನ್ನು ತೆಗೆದಿರುವ ಅವರ ಅಭಿಮಾನಿಗಳು ಅವನ್ನು ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇತರೆ ಕಡೆ ಅಪ್ಲೋಡ್ ಮಾಡಿದ್ದಾರೆ. ಅವರ ಈ ನಡೆಯನ್ನು ನೋಡಿದ ಅವರ ಅಭಿಮಾನಿಗಳು ಡಿ ಬಾಸ್ ಅವರ ಬಗ್ಗೆ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here