ಚಂದನವನದಲ್ಲಿ ಅರಳಲು ಸಿದ್ಧವಾಗುತ್ತಿದೆ ಅದ್ದೂರಿ ವೆಚ್ಚದಲ್ಲಿ ಐತಿಹಾಸಿಕ ಸಿನಿಮಾ. ಸದ್ಯಕ್ಕೆ ಎಲ್ಲೆಲ್ಲೂ ಅದೇ ಸಿನಿಮಾದ ಸುದ್ದಿ ಸದ್ದು ಮಾಡಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ನಟನೆಯ 54 ನೇ ಸಿನಿಮಾ ಅದಾಗಲಿದ್ದು, ಅದೇ ‘ಗಂಡುಗಲಿ ಮದಕರಿ ನಾಯಕ’ ಚಿತ್ರ. ಚಿತ್ರದ ಮುಹೂರ್ತ ನೆರವೇರಿದ್ದು, ಮೂರು ದಿನಗಳ ಹಿಂದೆ ಚಿತ್ರದುರ್ಗದಲ್ಲಿ ಪೂಜೆ ಸಲ್ಲಿಸಿದ್ದ ಚಿತ್ರ ತಂಡ, ಈಗ
ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಿತ್ರವನ್ನು ಆರಂಭಿಸುತ್ತಿದ್ದಾರೆ.
ಚಿತ್ರದ ಮುಹೂರ್ತದಲ್ಲಿ ನಟ ದರ್ಶನ್, ಹಿರಿಯ‌ ನಟ ದೊಡ್ಡಣ್ಣ , ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಿತ್ರದ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಹಾಗೂ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಚಿತ್ರತಂಡ ಹಾಜರಾಗಿತ್ತು.

ಈ ಐತಿಹಾಸಿಕ ಸಿನಿಮಾಕ್ಕಾಗಿ ಹೊಗೇನಕಲ್‌ನಲ್ಲಿ ಅದ್ಭುತವಾದ ಸೆಟ್ ಹಾಕಲಾಗಿದ್ದು, ಸ್ಯಾಂಡಲ್ ವುಡ್ ನ ಹಿರಿಯ ನಟರ ದಂಡು ಈ ಸಿನಿಮಾ ಮೂಲಕ ಎಲ್ಲರ ಮುಂದೆ ಮತ್ತೊಮ್ಮೆ ಬರಲಿದೆ. ಈ ಸಿನಿಮಾದಲ್ಲಿ ಸಂಸದೆ ಸುಮಲತ ಅವರು ರಾಜಮಾತೆಯಾಗಿ ಅಭಿನಯಿಸಲಿದ್ದಾರೆ ಎಂದು ಕೂಡಾ ಹೇಳಿದ್ದಾರೆ ದರ್ಶನ್ ಅವರು. ಅಲ್ಲದೆ ಎಲ್ಲಾ ಹಿರಿಯರು ಇರುವುದರಿಂದ ಅವರು ಹೇಳಿದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್ ಅವರು‌. ಇನ್ನು ಇಂದು ಈ ಸಿನಿಮಾದ ಟೈಟಲ್ ಬಗ್ಗೆ ಕೂಡಾ ಹೊಸ ಹಾಗೂ ಅಧಿಕೃತ ಮಾಹಿತಿ ಹೊರ ಬಂದಿದೆ.

ಅದೇನೆಂದರೆ ಇಷ್ಟು ದಿನ ಗಂಡುಗಲಿ ಮದಕರಿ ನಾಯಕ ಎನ್ನುವ ಟೈಟಲ್ ಎಲ್ಲಾ ಕಡೆ ಸುದ್ದಿ ಮಾಡಿತ್ತು. ಆದರೆ ಸಿನಿಮಾ ಟೈಟಲ್ ನಲ್ಲಿ ಸ್ವಲ್ಪ ಬದಲಾವಣೆ ಆಗಿದ್ದು, ರಾಜವೀರ ಮದಕರಿ ನಾಯಕ ನಾಗಿ ದರ್ಶನ್ ಅವರು ಎಲ್ಲರ ಮುಂದೆ ಬರಲಿದ್ದು, ತೆರೆಯ ಮೇಲೆ ವಿಜೃಂಭಿಸಲಿದ್ದಾರೆ. ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ, ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಕನಸಿನ ಕೂಸಾದ ಮದಕರಿ ನಾಯಕನಿಗೆ ಚಿತ್ರ ರೂಪವನ್ನು ನೀಡಲು, ತೆರೆಯ ಮೇಲೊಂದು ಐತಿಹಾಸಿಕ ದೃಶ್ಯಕಾವ್ಯವನ್ನು ಬರೆಯಲು ಸಿದ್ಧರಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here