ಸೋಮವಾರ ಮುಂಜಾನೆ  ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದ್ದ ಕಾರು ಅಪಘಾತವಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಡೈನಾಮಿಕ್ ಹೀರೋ ದೇವರಾಜ್  ಮತ್ತು ಪ್ರಜ್ವಲ್ ದೇವರಾಜ್ ಅವರು ಚಲಿಸುತ್ತಿದ್ದ ಕಾರು ಅಪಘಾತವಾಗಿತ್ತು‌. ಈ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈಗೆ ತೀವ್ರ ಪೆಟ್ಟಾಗಿ ಮೂಳೆ ಮುರಿದಿತ್ತು.ಪ್ರಜ್ವಲ್ ದೇವರಾಜ್ ಮತ್ತು ದೇವರಾಜ್ ಅವರಿಗೂ ಸಹ ಈ ಅಪಘಾತದಲ್ಲಿ ಗಾಯಗಳಾಗಿತ್ತು.ನಂತರ ಎಲ್ಲ ನಟರನ್ನು ಮೈಸೂರಿನ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆ ನೀಡಿದ ಬಳಿಕ ಜನರಲ್ ವಾರ್ಡ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿತ್ತು‌.

ಆಕ್ಸಿಡೆಂಟ್ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಂಖ್ಯಾಶಾಸ್ತ್ರದ ಭಯ ಕಾಡಿದೆಯಾ ? ಹೀಗೊಂದು ಪ್ರಶ್ನೆ ಕಾಡಲು ಕಾರಣ ಇದೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ತಾವಿದ್ದ ವಾರ್ಡ್ ಬದಲವಣೆ ಮಾಡಿಕೊಂಡಿದ್ದಾರೆ. ಮೊದಲು 123 ನಂಬರಿನ ವಾರ್ಡ್ ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ 126 ನಂಬರಿನ ವಾರ್ಡ್ ಗೆ ಶಿಫ್ಟ್ ಆಗಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 9 ಲಕ್ಕಿ‌ ನಂಬರ್ ಆಗಿರುವುದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 126 ರ ನಂಬರ್ಗೆ ಶಿಫ್ಟ್ ಆಗಿದ್ದಾರೆ.

ಶ್ರಾವಣ ಮಾಸ ಮತರ ರಾಶಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜನಿಸಿದ್ದಾರೆ‌. 1+2+6 = 9 ಆಗುತ್ತದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಾರ್ಡ್ ಶಿಫ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇನ್ನೊಂದು ಮೂಲದ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊಲಂಬಿಯಾ ಏಷಿಯಾ ಆಸ್ಪತ್ರೆಯ 123 ರ ನಂಬರಿನ ವಾರ್ಡ್ ನಲ್ಲಿರುವುದು ಅಭಿಮಾನಿಗಳಿಗೆ ಗೊತ್ತಾಗಿರುವುದರಿಂದ ಆ ವಾರ್ಡಿನ ಬಳಿ ಸೇರಿದ್ದರು ಎಂದು ವಾರ್ಡ್ ಶಿಫ್ಟ್ ಮಾಡಿರುವ ಸಂಭವ ಇದೆ ಎನ್ಬಲಾಗುತ್ತಿದೆ‌. ಆದರೆ ಅಪಾರ ಧೈವ ಭಕ್ತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಖ್ಯಾಶಾಸ್ತ್ರದ ಪ್ರಕಾರ ವಾರ್ಡ್ ಶಿಫ್ಟ್ ಆಗಿದ್ದಾರೆ ಎನ್ನುವ ಮಾತುಗಳು ಇವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here