ಈ ಬಾರಿ‌ ಸ್ಯಾಂಡಲ್ ವುಡ್ ನಲ್ಲಿ ಸಂಕ್ರಾಂತಿ ಅದ್ದೂರಿಯಾಗಿ ಆಚರಿಸಿದ್ದು ಯಾರು ಅಂತ ಕೇಳಿದ್ರೆ ಎಲ್ಲರ ಬಾಯಲ್ಲೂ ಬರುವ ಮೊದಲ ಹೆಸರೇ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅಕ್ಷರಶಃ ಈ ಬಾರಿ ಸಂಕ್ರಾಂತಿಯನ್ನು ದರ್ಶನ್ ಆವರಿಸಿಕೊಂಡರು.ಹಬ್ಬದ ಬೆಳಿಗ್ಗೆ ದರ್ಶನ್ ತಮ್ಮ 51 ನೇ ಚಿತ್ರದ ಮುಹೂರ್ತ ಆಚತಿಸಿದರು.ಈ ಚಿತ್ರಕ್ಕೆ ದಿನಕರ್ ತೂಗುದೀಪ ಕ್ಲಾಪ್ ಮಾಡಿದರೆ ರಷ್ಮಿಕಾ ನಾಯಕಿ ಪಾತ್ರದಲ್ಲಿ ಮಿಂಚಲಿರುವುದು ಖಾತರಿ ಆಯಿತು.

ನಂತರ ದರ್ಶನ್ ನಿವಾಸದಲ್ಲಿ ಸಂಕ್ರಾಂತಿ ಸಡಗರ ರಂಗೇರಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಲಂಬೋರ್ಘಿನಿ ಕಾರು.ಬರೋಬ್ಬರಿ ಐದು ಕೋಟಿಯ ಈ ದುಬಾರಿ ಕಾರು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಇರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಮಾತ್ರ.ಹೊಸ ಕಾರಿನ ಪೂಜೆ ಮುಗಿಸಿ ಅದೇ ಕಾರಿನಲ್ಲಿ ಚಾಲೆಂಜಿಂಗ್ ಸ್ಟಾರ್ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ತೆರಳಿದರು.ಫಾರ್ಮ್ ಹೌಸ್ ನಲ್ಲಿ ತಮ್ಮ ನೆಚ್ಚಿನ ಗೆಳೆಯರ ಜೊತೆ ದರ್ಶನ್ ತಮ್ಮ ಹಸುಗಳಿಗೆ ಸ್ವತಃ ಅಲಂಕಾರ ಮಾಡಿದರು ನಂತರ

ಸಂಜೆಯಾಗುತ್ತಿದ್ದಂತೇ ಫಾರ್ಮ್ ಹೌಸ್ ನಲ್ಲಿ ಹಸುಗಳಿಗೆ ಕಿಚ್ಚು ಹಾಯಿಸಲು ದರ್ಶನ್ ಮೊಗದಲ್ಲಿ ಇದ್ದ ಸಂತೋಷ ಅಪಾರ.ತಾವೇ ಬೆಂಕಿಯಲ್ಲಿ ಹಸುಗಳ ಜೊತೆ ಓಡಿ ದರ್ಶನ್ ಸಂಕ್ರಾಂತಿಯ ಸಂಭ್ರಮ ಹೆಚ್ಚಿಸಿದರು.ನಂತರ ಸಂದೇಶ್ ಹೋಟೇಲಿನಲ್ಲಿ ಅಭಿಮಾನಿಗಳನ್ನು ದರ್ಶನ್ ಭೇಟಿ ಮಾಡಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here