ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ ನಲ್ಲಿ ಈ ಹಿಂದೆ ಬಂದ ಚಮಕ್ ಚಿತ್ರವು ಸೂಪರ್ ಹಿಟ್ ಆಗುವ ಮೂಲಕ ನೋಡುಗರ ಮನಗೆದ್ದಿತ್ತು . ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಇನ್ನೂ ಹೆಸರಿಡದ ಈ ಹೊಸ ಚಿತ್ರವು ಇದೇ ತಿಂಗಳ 24 ರಂದು ಆರಂಭ ಅಗಲಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ದಕ್ಷಿಣ ಭಾರತದ ಹಲವಾರು ಚಿತ್ರಗಳಲ್ಲಿ ನಟಿಸಿರುವ ಸುರಭಿ ಪುರಾಣಿಕ್ ನಟಿಸುತ್ತಿದ್ದಾರೆ. ಭರಾಟೆ ಚಿತ್ರದ ನಿರ್ಮಾಪಕ ಸುಪ್ರೀತ್ ಅವರು ಈ ಚಿತ್ರಕ್ಕೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಸುಪ್ರೀತ್ ಅವರು ಬಂಪರ್ ಚಿತ್ರ ನಿರ್ಮಿಸುತ್ತಿದ್ದು, ಅದರ ಜೊತೆಯಲ್ಲೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಸುರಭಿ ಪುರಾಣಿಕ್ ಅವರು ಈಗಾಗಲೇ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ತೆಲುಗು, ಮಲಯಾಳಂ, ತಮಿಳಿನ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಸುರಭಿ ಪುರಾಣಿಕ್ ಅವರು ಗಣೇಶ್ ಜೊತೆ ಅಭಿನಯಿಸಲು ಸಜ್ಜಾಗಿದ್ದಾರೆ.

ಒಂದೊಂದು ಚಿತ್ರದಲ್ಲಿ ಒಂದೊಂದು ವಿಭಿನ್ನ ರೀತಿಯಾದ ಕಥಾಹಂದರ ಹೇಳುವ ಸಿಂಪಲ್ ಸುನಿ ಅವರು ಈ ಚಿತ್ರದಲ್ಲಿ ಸಹ ಹೊಸ ಸ್ಟೋರಿ ಹೇಳಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಸುರಭಿ ಅವರು ರಿಯಾಲಿಟಿ ಶೋದ ನಿರೂಪಕಿ ಆಗಿ ಕಾಣಿಸಿಕೊಳ್ಳಲಿದ್ದು ಇದೊಂದು ರಿಯಾಲಿಟಿ ಶೋ ಮತ್ತು ಕೋರ್ಟ್ ರೂಮ್ ಡ್ರಾಮಾ ನಡುವಿನ ಕಹಾನಿ ಜೊತೆ ಹಲವಾರು ಸಸ್ಪೆನ್ಸ್ ಚಿತ್ರದಲ್ಲಿ ಇರಲಿದೆ ಎಂದು ಸಿಂಪಲ್ ಸುನಿ ತಿಳಿಸಿದ್ದು ಗೋಲ್ಡನ್ ಗಣೇಶ್ ಅವರ ಪಾತ್ರದ ಬಗ್ಗೆ ಯಾವುದೇ ಬಿಟ್ಟುಕೊಟ್ಟಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here