ಬಿಗ್​ಬಾಸ್​ ಕಾರ್ಯಕ್ರಮದ ಮೂಲಕ ಪರಿಚಿತರಾಗಿ ನಾಡಿನ ಜನರ ಮನಗೆದ್ದಿದ್ದ  ನಿವೇದಿತಾ ಗೌಡ ಹಾಗೂ ಚಂದನ್‌ಶೆಟ್ಟಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಹಿನಕಲ್‌ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ವಿವಾಹ ಸಮಾರಂಭ ನಡೆಯಿತು. .‘ಮೀನಾ’ ಲಗ್ನದಲ್ಲಿ ಆಪ್ತರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಚಂದನ್‌ಶೆಟ್ಟಿ ನಿವೇದಿತಾಗೆ ಮಾಂಗಲ್ಯಧಾರಣೆ ಮಾಡಿದ್ರು. ಬೆಳಗ್ಗೆ 9 ಗಂಟೆಗೆವರೆಗೆ ಧಾರಾಮುಹೂರ್ತ ನಡೆದಿದೆ. ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ಮದುವೆ ಶಾಸ್ತ್ರಗಳು ನಡೆದವು..


ನೆನ್ನೆ ರಾತ್ರಿ ಆರತಕ್ಷತೆ ನಗರದ ಹಿನಕಲ್ ನಲ್ಲಿರುವ ಸ್ಪೆಕ್ಟ್ರ ಕನ್ವೆನ್ಷನ್ ಹಾಲ್​ನಲ್ಲಿ ನಡೆಯಿತು. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಸಂತಸದ ಸನ್ನಿವೇಶಗಳನ್ನ ಕಳೆದ್ರು. ಸಂಜೆ 7 ಗಂಟೆಗೆ ಆರಂಭವಾದ ಆರತಕ್ಷತೆಗೆ ನವ ಜೋಡಿಗಳು ಕುದುರೆ ಸಾರೋಟ್ ಏರಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ರು.

ಚಂದನ್ ಹಾಗೂ ನಿವೇದಿತಾ ಇಬ್ಬರೂ ನೇರಳೆ ಬಣ್ಣದ ಬಟ್ಟೆಯಲ್ಲಿ ಇದ್ದಿದ್ದು ಸ್ಷೆಷಲ್ ಎನಿಸಿತು.ಈ ಕಾರ್ಯಕ್ರಮಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ದಂಪತಿ, ಧ್ರುವ ಸರ್ಜಾ, ನಿರ್ದೇಶಕ ಚೇತನ್ ಕುಮಾರ್, ಅಕುಲ್​ ಬಾಲಾಜಿ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಸಾ.ರಾ.ಮಹೇಶ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ವಧು ವರರಿಗೆ ಶುಭ ಕೋರಿದ್ರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here