ಮೈಸೂರಿನ ಯುವ ದಸರದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ತಮ್ಮ ಗೆಳತಿ ನಿವೇದಿತಾ ಗೌಡ ಅವರಿಗೆ ಸರ್ಪ್ರೈಸ್ ನೀಡುವ ಸಲುವಾಗಿ ವೇದಿಕೆ ಮೇಲೆಯೇ ನಿವೇದಿತಾ ಅವರಿಗೆ ಚಂದನ್ ಶೆಟ್ಟಿ ಅವರು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡು, ಆಕೆಗೆ ಉಂಗುರ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದಸರ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ನಡೆದು ಕೊಂಡ ರೀತಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಾಕಷ್ಟು ಸುದ್ದಿ ಕೂಡಾ ಆಗಿದೆ. ಇನ್ನು ಚಂದನ್ ಶೆಟ್ಟಿ ಅವರು ಈ ವರ್ತನೆಗೆ ಕೆಲವು ಪಾಸಿಟಿವ್ ಪ್ರತಿಕ್ರಿಯೆ ಬಂದರೂ ಬಹುತೇಕ ನೆಗೆಟಿವ್ ಪ್ರತಿಕ್ರಿಯೆಗಳು ಬಂದಿದೆ‌.

ಸಾರ್ವಜನಿಕರು ಚಂದನ್ ಅವರ ನಡೆಗೆ ವ್ಯಾಪಕವಾಗಿ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಚಂದನ್ ಅವರು ಕ್ಷಮೆ ಕೇಳಿದ್ದು ಮಾತ್ರವಲ್ಲದೆ , ಅದೊಂದು ಒಳ್ಳೆಯ ಸಮಯ, ವಿಶೇಷ ದಿನ ಆಗಿದ್ದರಿಂದ, ನಮ್ಮ ಬಗ್ಗೆ ಹರಿದಾಡುತ್ತಿದ್ದ ಗಾಳಿ ಸುದ್ದಿಗಳಿಗೆ ಒಂದು ಸ್ಪಷ್ಟ ಉತ್ತರ ನೀಡಲು ಆ ರೀತಿ ಮಾಡಿದ್ದಾಗಿ ಅವರು ತಮ್ಮ ಕಾರ್ಯದ ಬಗ್ಗೆ ಸಮರ್ಥನೆ ಕೂಡಾ ನೀಡಿದ್ದರು. ಇನ್ನು ಇದೇ ವಿಷಯವಾಗಿ ಸಚಿವ ಸೋಮಣ್ಣನವರು ಇನ್ನಾರು ತಿಂಗಳೊಳಗೆ ಮಾತೆಯೇ ಅವರಿಗೆ ಶಿಕ್ಷೆ ನೀಡುವಳು ಎಂದು ಚಂದನ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದರು‌. ವಿಷಯ ಹೀಗಿರುವಾಗ ಸಂಸದ ಪ್ರತಾಪ್ ಸಿಂಹ ಕೂಡಾ ಟ್ವೀಟ್ ಒಂದು ಮಾಡಿ ಚಂದನ್ ಅವರ ಪರವಾಗಿ ನಿಂತಿದ್ದಾರೆ.

ಇದನ್ನೂ ಓದಿ……  

ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಲವ್ ಪ್ರಪೋಸ್ ಬಗ್ಗೆ ಸಚಿವ ಸೋಮಣ್ಣ ಕಿಡಿ.. ಈ ಬಿಗ್ ನ್ಯೂಸ್ ನೋಡಿ.

ಪ್ರತಾಪ್ ಸಿಂಹ ಅವರು ತಮ್ಮ ಟ್ವೀಟ್ ನಲ್ಲಿ ,
“ಯುವದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವರಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ…” ಎಂದು ಹೇಳುವ ಮೂಲಕ ಚಂದನ್ ಹಾಗೂ ನಿವೇದಿತಾ ಅವರು ವೇದಿಕೆಯ ಮೇಲೆ ನಡೆದುಕೊಂಡದ್ದ ಸರಿಯಾಗಿದೆ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here