ಪ್ರಶಸ್ತಿ ಎಂಬುದು ಯಾವುದೇ ಕಲಾವಿದರಾಗಲಿ ಮತ್ತು ತಂತ್ರಜ್ಞರಿಗೆ ಸಂತಸ ನೀಡುವ ವಿಚಾರ. ಸಾಮಾನ್ಯವಾಗಿ ವಾಹಿನಿಗಳು ಪ್ರಶಸ್ತಿ ಸಮಾರಂಭ ಮಾಡುವುದು ವಾಡಿಕೆ. ಆದರೆ ಪತ್ರಿಕಾ ಮಾಧ್ಯಮದವರು ಮಾಡುವ ಪ್ರಶಸ್ತಿ ಸಮಾರಂಭಗಳು ಅಪರೂಪದ ಸಂಗತಿ ಎನ್ನಬಹುದು. ಬೆಂಗಳೂರಿನಲ್ಲಿ ಮೊನ್ನೆ  ಪತ್ರಿಕೆಗಳಲ್ಲಿ ಹಾಗೂ ಸುದ್ದಿವಾಹಿನಿಗಳಲ್ಲಿ ಸಿನಿಮಾಗಳ ಕುರಿತು ವಿಮರ್ಶೆ ಬರೆಯುವ ಪತ್ರಕರ್ತರು ಒಟ್ಟಾಗಿ ಆರಂಭಿಸಿದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ವತಿಯಿಂದ ಮೊದಲ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿಲಾಗಿತ್ತು.

19 ವಿಭಾಗಗಳ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸ್ಯಾಂಡಲ್‍ವುಡ್‍ನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.ವಿಭಿನ್ನವಾಗಿ ವಿನ್ಯಾಸಗೊಳಿಸಿದ ಟ್ರೋಫಿ ಎಲ್ಲರ ಗಮನಸೆಳೆಯಿತು.

ಮೊದಲ ವರ್ಷದ ಪ್ರಶಸ್ತಿಯನ್ನ ಅತ್ಯುತ್ತಮ ನಟ ವಿಭಾಗದಲ್ಲಿ ಜಗ್ಗೇಶ್ ಹಾಗೂ ಅತ್ಯುತ್ತಮ ನಟಿಯಾಗಿ ಅದಿತಿ ಪ್ರಭುದೇವ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ಪ್ರೀಮಿಯರ್ ಪದ್ಮಿನಿ ೨೦೧೯ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಯ್ತು.ಇದರ ಜೊತೆಗೆ ಅಜನೀಶ್ ಲೋಕನಾಥ್ ಅವನೇ ಶ್ರೀಮನ್ನಾರಾಯಣ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಪ್ರಶಸ್ತಿ ಪಡೆದರು.

ಇನ್ನು ಇದೇ ಮೊದಲ ಬಾರಿಗೆ ದೇವಕಿ ಚಿತ್ರದಲ್ಲಿ ಅಭಿನಯಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಐಶ್ವರ್ಯ ಉಪೇಂದ್ರ ಅವರು ಮೊದಲ ಸಿನಿಮಾದಲ್ಲಿಯೇ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕವಲುದಾರಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅನಂತ್ ನಾಗ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರೆ,ಬೆಲ್ ಬಾಟಮ್ ಚಿತ್ರದ ಸಂಗೀತಕ್ಕಾಗಿ ಅಜನೀಶ್ ಲೋಕನಾಥ್  ಅತ್ಯುತ್ತಮ ಸಂಗೀತ ಪ್ರಶಸ್ತಿ ಪಡೆದರು. ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ಕವಿರಾಜ್ ಪಡೆದರು. ಅವನೇ ಶ್ರೀಮನ್ನಾರಾಯಣ ಚಿತ್ರದ ಕರಮ್ ಚಾವ್ಲ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದರೆ ಅದೇ ಸಿನಿಮಾದ ಅತ್ಯುತ್ತಮ ಕೊರಿಯೋಗ್ರಫಿಗಾಗಿ ಇಮ್ರಾನ್ ಸರ್ದಾರಿಯಾ ಭಾಜನರಾದರು.

2019ರಲ್ಲಿ ಚಂದನವನ ಫಿಲ್ಮ್ ಕ್ರಿಕೆಟ್ ಅಕಾಡೆಮಿ ಆರಂಭವಾಯಿತು. ಸ್ಯಾಂಡಲ್‍ವುಡ್‍ನ ಕಲಾವಿದರನ್ನು ಗುರುತಿಸುವ ಉದ್ದೇಶದಿಂದ ಈ ಅಕಾಡೆಮಿ ಆರಂಭವಾಯಿತು.ನಾಮನಿರ್ದೇಶನಗೊಂಡ 95 ಕಲಾವಿದರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here