ಬಿಗ್ ಬಾಸ್ ಸೀಸನ್-5 ವಿನ್ನರ್ ಚಂದನ್ ಶೆಟ್ಟಿ ಬಿಗ್ ಮನೆಯಿಂದ ತಮ್ಮ ಮನೆಗೆ ಆಗಮಿಸಿದ ವೇಳೆ ಬೆಂಗಳೂರಿನ ನಾಗರಬಾವಿ ಸರ್ಕಲ್ ನಿಂದ ಮನೆಯವರೆಗೆ ಚೆಂದನ್​ಶೆಟ್ಟಿ ಮೆರವಣಿಗೆ ಮಾಡ್ಲಾಯ್ತು. 106 ದಿನಗಳ ನಂತರ ಸ್ವಗೃಹಕ್ಕೆ ಆಗಮಿಸಿದ ಚಂದನ್ ಶೆಟ್ಟಿಯನ್ನು ಕುಟುಂಬಸ್ಥರು ಆತ್ಮೀಯತೆಯಿಂದ ಸ್ವಾಗತಿಸಿದ್ರು. ಇನ್ನು, ಬಿಗ್ ಬಾಸ್ ವಿನ್ನರ್ ಆಗಮಿಸಿದ ಸುದ್ದಿ ಕೇಳಿ ನೂರಾರು ಅಭಿಮಾನಿಗಳು ಮನೆಮುಂದೆ ಜಮಾಯಿಸಿದ್ರು. ಪಟಾಕಿ ಸಿಡಿಸಿ ಚೆಂದನ್​ಶೆಟ್ಟಿಗೆ ಹೂವಿನ ಹಾರ ಹಾಕಿ ಸಂಭ್ರಮಾಚರಣೆ ಮಾಡಿದರು.

ಇನ್ನು ಅರ್ಜುನ್ ಜನ್ಯ ಅವರು ಚಂದನ್ ಶೆಟ್ಟಿ ಬಗ್ಗೆ ಖಾಸಗಿ ಚಾನಲ್ ಒಂದಕ್ಕೆ ಕರೆ ಮಾಡಿ ಚಂದನ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.ಚಂದನ್ ಶೆಟ್ಟಿ ಒಬ್ಬ ಕನಸುಗಾರ. ಕನಸು ಕಾಣದಲ್ಲದೇ ಅದನ್ನು ನನಸು ಮಾಡಲು ಪ್ರಯತ್ನಿಸುತ್ತಾನೆ. ಆ ಕನಸಿನ ಹಿಂದೆ ಹೋಗಿ ತನ್ನದೇ ಆದ ಒಂದು ದಾರಿಯನ್ನು ಮಾಡಿಕೊಳ್ಳುತ್ತಾನೆ. `ಮೂರೇ ಮೂರು ಪೆಗ್’ ಹಾಡು ವಿಶ್ವದಾದ್ಯಂತ ಜನಪ್ರಿಯವಾಗಿದೆ. ನಾನು ದುಬೈಗೆ ಹೋದರು ಅಲ್ಲಿನ ಜನರು ಆ ಹಾಡನ್ನು ಕೇಳುತ್ತಾರೆ. ಇದು ಕರ್ನಾಟಕದ ಹೆಮ್ಮಯ ವಿಷಯ. ಚಂದನ್ ಶೆಟ್ಟಿಗೆ ಯಾವ ಗಾಡ್ ಫಾದರ್ ಇಲ್ಲ. ಯಾವ ಮ್ಯೂಸಿಕ್ ಬ್ಯಾಗ್ರೌಂಡ್ ಕೂಡ ಇಲ್ಲದೆ ಈ ರೀತಿ ಹಾಡುಗಳನ್ನು ಮಾಡುತ್ತಾನೆಂದರೆ ಅದು ದೇವರ ಆರ್ಶಿವಾದ ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here