ಬಿಗ್ ಬಾಸ್ ಮನೆಯಲ್ಲಿ ನೂರಾರು ದಿನಗಳು ಇದ್ದು ಕನ್ನಡಿಗರ ಮನಗೆದ್ದು ಎಲ್ಲರ ಮೆಚ್ಚುಗೆ ಪಡೆದು ಬಿಗ್ ಬಾಸ್ ಟ್ರೋಫಿ ಗೆದ್ದ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ಇಂದಿನ ಜನಪ್ರಿಯತೆ ಹಿಂದಿದೆ ಒಂದು ರೋಚಕ ಕಥೆ.ಹೌದು ಬಿಗ್ ಬಾಸ್ ಗೆದ್ದ ನಂತರ ಮಾಧ್ಯಮಗಳಲ್ಲಿ ಎಲ್ಲೆಲ್ಲೂ ಚಂದನ್ ಶೆಟ್ಟಿ ಅವರ ಸಂದರ್ಶನ ಜೋರಾಗಿದೆ.ತನ್ನ ಗೆಲುವಿನ ಹಿಂದಿರುವ ಶ್ರಮವನ್ನು ಪರಿಪರಿಯಾಗಿ ಚಂದನ್ ಶೆಟ್ಟಿ ಬಿಚ್ವಿಟ್ಟಿದ್ದಾರೆ.ಪಬ್ಲಿಕ್ ಟಿವಿಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ವೇಳೆ ಚಂದನ್ ಶೆಟ್ಟಿ ಮಾತನಾಡುತ್ತಾ

ನಾನು ಕೆಲವು ವರ್ಷಗಳ ಹಿಂದೆ ಮೈಸೂರಿನ ಪಬ್ಬಿಗೆ ಹೋಗಿದ್ದೆ.ಅಲ್ಲಿ ಅನ್ಯಭಾಷೆಯ ಹಾಡುಗಳು ಮಾತ್ರ ಪ್ರಸಾರಮಾಡುತ್ತಿದ್ದರು.ಇದನ್ನು ಪ್ರಶ್ನಿಸಲು ಮುಂದಾಗಿ ಹೋಗಿ ಪಬ್ಬಿನವರ ಬಳಿ ಕನ್ನಡ ಹಾಡು ಹಾಕಲು ಹೇಳಿದೆ.ಆದರೆ ಅವರು ನನ್ನನ್ನು ಬೌನ್ಸರ್ ಗಳನ್ನು ಬಿಟ್ಟು ಹೊರಗೆ ನೂಕಿಬಿಟ್ಟರು. ಅಂದೇ ನಾನು ನಿರ್ಧರಿಸಿದ್ದೆ ಇದೇ ಪಬ್ಬಿನಲ್ಲಿ ನಾನು ಕಂಪೋಸ್ ಮಾಡುವ ಕನ್ನಡ ಹಾಡು ಪ್ಲೇ ಆಗಬೇಕೆಂದು ಅಂದುಕೊಂಡಿದ್ದೆ.ಆದರೆ ಇಂದು ಕರ್ನಾಟಕದ ಪಬ್ಬುಗಳು ಮಾತ್ರವಲ್ಲದೇ ವಿದೇಶಗಳಲ್ಲೂ ನನ್ನ ಮತ್ತು ಹಲವರ ಕನ್ನಡ ಹಾಡುಗಳು ಪ್ರಸಾರ ಆಗುತ್ತಿವೆ ಎಂದು ಹೇಳಿದ್ದಾರೆ.ಇದಕ್ಕೇ ಅಲ್ಲವೇ ಹೇಳೋದು.ಕಾಲವನ್ನು ತಡೆಯೋರು ಯಾರು ಇಲ್ಲ. ಯಾರು ಏನಾಗಬೇಕೆನ್ನುವುದು ಅವರವರ ಪರಿಶ್ರಮದಲ್ಲಿಯೇ ಇದೆ.ಏನಂತೀರಾ ?

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here