ನಿನ್ನೆ ಯಶಸ್ವಿಯಾಗಿ ಚಂದ್ರಯಾನ 2 ನೌಕೆ ನಭಕ್ಕೆ ಹಾರಿ, ಭಾರತದ ಕೀರ್ತಿಯನ್ನು ಕೂಡಾ ಜಗತ್ತಿಗೆ ಸಾರಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಅನೇಕೆ ಸೆಲೆಬ್ರಿಟಿಗಳು, ದೇಶದ ಪೌರರು ಬಹಳ ಸಂತೋಷ ಹಾಗೂ ಸಂಭ್ರಮದಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಬರೆದು, ಫೋಟೋಗಳನ್ನು ಹಾಕುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಭಾರತೀಯ ಕ್ರಿಕೆಟ್ ಆಟಗಾರ ಹರ್ ಭಜನ್ ಸಿಂಗ್ ಕೂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಅದು ಈಗ ಎಲ್ಲರ ಗಮನವನ್ನು ಸೆಳೆದಿದೆ. ಅವರ ಟ್ವೀಟ್ ಎಲ್ಲೆಡೆ ವೈರಲ್ ಆಗಿರುವುದು ಮಾತ್ರವಲ್ಲದೆ, ಅದಕ್ಕೆ ಬಹು ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಕೂಡಾ ಬಂದಿವೆ.

ಹರ್ ಭಜನ್ ಸಿಂಗ್ ಅವರು ತಮ್ಮ ಟ್ವೀಟ್ ನಲ್ಲಿ ಕೆಲವು ದೇಶಗಳ ಧ್ವಜದ ಮೇಲೆ ಚಂದ್ರನಿದ್ದರೆ, ಮತ್ತೆ ಕೆಲವು ರಾಷ್ಟ್ರಗಳ ಧ್ವಜ ಚಂದ್ರನ ಮೇಲೆ ಇದೆ ಎಂದು ಭಾರತೀಯ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಹಾಗೂ ಇತರೆ ದೇಶಗಳನ್ನು ಅಂದರೆ ಧ್ವಜದ ಮೇಲೆ ಚಂದ್ರನನ್ನು ಹೊಂದಿರುವ ದೇಶಗಳನ್ನು ಅವರು ಟ್ರೋಲ್ ಮಾಡಿದ್ದಾರೆ. ಅವರ ಅವರು ತಮ್ಮ ಟ್ವಿಟ್ಟರಿನಲ್ಲಿ, ಪಾಕಿಸ್ತಾನ ಸೇರಿದಂತೆ ಕೆಲವು ದೇಶದ ಧ್ವಜಗಳನ್ನು ಹಾಕಿದ್ದು, ಅವುಗಳ ಮೇಲೆ ಚಂದ್ರನ ಚಿತ್ರ ಇದೆ.

ಅದರಲ್ಲಿ ಟರ್ಕಿ, ಲುಬಿಯಾ, ಟುನೀಶಿಯಾ, ಅಜೆರ್ಬೈಜಾನ್, ಅಲ್ಜೀರಿಯಾ, ಮಲೇಷ್ಯಾ, ಮಾಲ್ಡೀವ್ಸ್ ರಾಷ್ಟ್ರಗಳ ಇಮೋಜಿ ಹಾಕಿದ್ದಾರೆ. ಬಳಿಕ ಚಂದ್ರನ ಮೇಲೆ ನಮ್ಮ ಧ್ವಜ ಇದೆ ಎಂದು ಭಾರತ, ಅಮೆರಿಕ, ಚೀನಾ ಹಾಗೂ ರಷ್ಯಾ ಧ್ವಜಗಳ ಚಿತ್ರವನ್ನು ಹಾಕಿದ್ದಾರೆ. ಅವರ ಈ ಟ್ವೀಟಿನ್ನು 1.6 ಲಕ್ಷಕ್ಕಿಂತ ಅಧಿಕ ಜನರುಈ ಲೈಕ್ ಮಾಡಿದ್ದರೆ, ಸುಮಾರು 31 ಸಾವಿರಕ್ಕೂ ಅಧಿಕ ಮಂದಿ ಅದಕ್ಕೆ ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here