ವಿಶ್ವದಲ್ಲಿ ಇದುವರೆವಿಗೂ ಮೂರು ರಾಷ್ಟ್ರಗಳು ಮಾತ್ರ ಚಂದ್ರನ ಅಂಗಳದಲ್ಲಿ ತಮ್ಮ ನೌಕೆ ಇಳಿಸಿ ಇತಿಹಾಸ ಬರೆದಿವೆ‌. ಈಗ ಅದೇ ಸಾಲಿಗೆ ಸೇರಲು ಭಾರತವು ಸಜ್ಜಾಗಿದ್ದು, ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದ ನಂತರ ರಷ್ಯಾ, ಅಮೆರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಹೆಗ್ಗಳಿಕೆ ನಮ್ಮ ದೇಶದ ಪಾಲಾಗಲಿದೆ. ಇದರಲ್ಲಿ ಮತ್ತೊಂದು ವಿಶೇಷ ಕೂಡಾ ಇದ್ದು, ಚಂದ್ರಮ ಮೇಲೆ ಇದುವರೆವಿಗೂ ಬೇರೆ ದೇಶಗಳು ತಲುಪಿರದ ಬಿಸಿಲಿನ ತಾಪ ಕಾಣದಿರುವ ಚಂದ್ರನ ದಕ್ಷಿಣ ದ್ರುವಕ್ಕೆ ಚಂದ್ರಯಾನ-2 ನೌಕೆ ಪ್ರವೇಶ ಮಾಡಲಿದೆ. ಇಂತಹ ಒಂದು ಸಾಧನೆಯ ಹಿಂದೆಯೇ ಇದನ್ನು ಮೋದಿಯ ರಾಜಕೀಯ ತಂತ್ರ ಎನ್ನುವಂತೆ ಅದನ್ನು ಟೀಕೆ ಮಾಡಿದ್ದಾರೆ ಮಮತಾ ಬ್ಯಾನರ್ಜಿ ಅವರು.

ದೀದಿ ಮಾತನಾಡುತ್ತಾ ಸದ್ಯ ದೇಶದಲ್ಲಿ ಆರ್ಥಿಕ ವಿಪತ್ತು ಎದುರಾಗಿದ್ದು, ಅದನ್ನು ಮರೆಮಾಚಲು, ಜನರ ದಿಕ್ಕು ತಪ್ಪಿಸಲು, ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕೆ ತೀವ್ರ ಆಕ್ಷೇಪವನ್ನು ಹೊರಹಾಕಿದ್ದಾರೆ. ಮಮತಾ ಬ್ಯಾನರ್ಜಿಯವರು ಬಂಗಾಳದ ವಿಧಾನ ಸಭೆಯಲ್ಲಿ ಮಾತನಾಡುತ್ತಾ,
ಎನ್‍ಆರ್ ಸಿ ವಿರುದ್ಧ ನಿರ್ಣಯ ಕೈಗೊಳ್ಳುವ ಕುರಿತು ಚರ್ಚೆ ನಡೆಯುತ್ತಿರುವಾಗ, ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಚಂದ್ರಯಾನ-2 ಎನ್ನುವುದು ಇದೇ ಮೊದಲಲ್ಲ, ಬಿಜೆಪಿಯವರು ಅಧಿಕಾರಕ್ಕೆ ಬರುವ ಮೊದಲು ನಾವು ಇಂತಹ ಕೂಡಾ ಇಂತಹ ಪ್ರಯತ್ನವನ್ನು ಮಾಡಿರುವುದಾಗಿ ಅವರು ಹೇಳುತ್ತಾ, ಬಿಜೆಪಿಯವರೇ ಇದನ್ನು ಮಾಡಿದ್ದಾರೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಮಮತಾ ಅವರು ಮಾಡಿರುವ ಈ ಟೀಕೆಗೆ ಹಲವರು ಪರವಾಗಿ ಮತ್ತು ಕೆಲವರು ವಿರುದ್ಧವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here