ಐತಿಹಾಸಿಕ ಚಂದ್ರಯಾನ- 2 ಉಡಾವಣೆ ಆಂಧ್ರಪ್ರದೇಶದ ಶ್ರೀಹರಿಕೋಟಾ ದಿಂದ ಮಧ್ಯಾಹ್ನ 2.43 ಸಮಯಕ್ಕೆ ಚಂದಿರನ  ದಕ್ಷಿಣಕ್ಕೆ ಚಂದ್ರಯಾನ ಹೊರಟಿದ್ದು 53 ದಿನಗಳಲ್ಲಿ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. GSLVmark3 ರಾಕೆಟ್ ಮೂಲಕ ಚಂದ್ರಯಾನ 2 ಯಶಸ್ವಿಯಾಗಿ ತನ್ನ ಕಕ್ಷೆಯನ್ನು ದಾಟಿದೆ. 2.43 ನಿಮಿಷಕ್ಕೆ ಉಡಾವಣೆ ಆದ ಚಂದ್ರಯಾನ ಕೆಲವೇ ನಿಮಿಷಗಳಲ್ಲಿ 6000 ಕಿಲೋಮೀಟರ್ ಕ್ರಮಿಸಿ ಯಶಸ್ವಿ ಆಗಿದೆ  ಎಂದು ಇಸ್ರೋ ತಿಳಿಸಿದೆ.

ಕಳೆದ ವಾರ ತನ್ನ ಮೊದಲ ಪ್ರಯತ್ನದಲ್ಲಿ ಕೊನೆಯ ಕ್ಷಣದ ವೇಳೆ ಉಡಾವಣೆಯನ್ನು ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಆ ರೀತಿಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಇಸ್ರೋ ವಿಜ್ಞಾನಿಗಳು ಯಶಸ್ವಿ ಉಡಾವಣೆಗೆ ಸಿದ್ದತೆ ನಡೆಸಿದ್ದರು .ಈ ಮೂಲಕ  ಚಂದ್ರಯಾನ-2 ಯಶಸ್ವಿಯಾಯಾಗಿ ಉಡಾವಣೆ   ಸಾಧನೆ ಮಾಡಿದ ನಾಲ್ಕನೇ ದೇಶ ಎನ್ನುವ ಖ್ಯಾತಿಯನ್ನು ಭಾರತ ಹೊಂದಿ ದೆ. ಈಗಾಗಲೇ ರಷ್ಯಾ, ಅಮೇರಿಕಾ, ಚೀನಾ, ಈ ಸಾಧನೆಯನ್ನು ಮಾಡಿವೆ. ಕಳೆದ ವಾರ ಉಡಾವಣೆ ಮಾಡುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಇಸ್ರೋ ಅಧಿಕಾರಿಗಳು ಹೇಳುವಂತೆ ಈ ಸಮಸ್ಯೆಯನ್ನು ನಿಗಿಸದೆ ಹೋಗಿದ್ದಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಗುತ್ತಿತ್ತು ಎಂದು ಹೇಳಿದ್ದಾರೆ.’ಸಮಸ್ಯೆ ಗಂಭೀರವಾಗಿತ್ತು, ಆದರೆ ಅದನ್ನು ನಿವಾರಿಸುವುದು ಕೂಡ ಅಷ್ಟೇ ಸರಳವಾಗಿತ್ತು. ಅದೃಷ್ಟವಶಾತ್ ನಾವು ಆ ಸಮಸ್ಯೆಯನ್ನು ಪತ್ತೆ ಹಚ್ಚಿದೆವು. ಇಲ್ಲದಿದ್ದರೆ ಈ ಯೋಜನೆ ಸಂಪೂರ್ಣ ವಿಫಲವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.ಚಂದ್ರಯಾನ-2 ಯೋಜನೆಯ ವಿಶೇಷತೆ ಎಂದರೆ ಅಮೇರಿಕಾದ ನಾಸಾ ಯೋಜನೆಗಿಂತ 20 ಪಟ್ಟು ವೆಚ್ಚ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಯೋಜನೆಗೆ ಸುಮಾರು 1000 ಕೋಟಿ ರೂಗಳನ್ನು ವ್ಯಯ ಮಾಡಲಾಗಿದೆ. ಇದು ಹಾಲಿವುಡ್ ನ ಅವೆಂಜರ್ ಎಂಡ್ ಗೇಂ ಗಿಂತಲೂ ಕಡಿಮೆ ಎಂದು ಹೇಳಲಾಗಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here