ಆ ದಿನಗಳು ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು ನಟ ಚೇತನ್. ಅನಂತರ ಕನ್ನಡ ಚಿತ್ರರಂಗದ ಭರವಸೆಯ ನಟನಾಗಿ ಬೆಳೆದವರು ಚೇತನ್. ಚೇತನ್ ಅವರು ಈಗ ತಮ್ಮ ಜೀವನದ ಮತ್ತೊಂದು ಪ್ರಮುಖವಾದ ಅಧ್ಯಾಯವನ್ನು ಆರಂಭಿಸಲು ಸಜ್ಜಾಗುತ್ತಿದ್ದಾರೆ. ಚೇತನ್ ಅವರು ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚೇತನ್ ಅವರು ತಾವು ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿರುವ ಹುಡುಗಿಯನ್ನು ಸಾಂಪ್ರದಾಯಿಕವಾಗಿ ವಿವಾಹವನ್ನು ಮಾಡಿಕೊಳ್ಳಲು
ಚೇತನ್ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಚೇತನ್ ಅವರು ವಿವಾಹವಾಗುತ್ತಿರುವುದು ಅಸ್ಸಾಂ ಮೂಲದ ಹುಡುಗಿಯನ್ನು ಎನ್ನಲಾಗಿದೆ. ಆ ಹುಡುಗಿಯನ್ನು ಪ್ರೀತಿಸುತ್ತಿರುವ ಚೇತನ್ ಅವರು ಮುಂದಿನ ವರ್ಷ ಫೆಬ್ರವರಿ 2 ರಂದು ಅನಾಥಾಶ್ರಮವೊಂದರಲ್ಲಿ ಸರಳವಾಗಿ ವಿವಾಹವನ್ನು ಮಾಡಿಕೊಳ್ಳಲಿದ್ದಾರೆ‌. ತಮ್ಮ ವಿವಾಹದ ವಿಚಾರವನ್ನು ಖುದ್ದಾಗಿ ಚೇತನ್ ಅವರೇ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ತಿಳಿಸಿರುವುದರಿಂದ ಅವರ ವಿವಾಹದ ಸುದ್ದಿ ಖಚಿತವೇ ಆಗಿದೆ‌. ಚೇತನ್ ಅವರು ತಮ್ಮ ವಿವಾಹದ ಬಗ್ಗೆ ಮಾತನಾಡುತ್ತಾ, ಈ ವಿಷಯ ನಿಜ ಎಂದಿದ್ದಾರೆ.

ತಾನು ಲವ್ ಮ್ಯಾರೇಜ್ ಆಗುತ್ತಿರುವುದಾಗಿ ಹೇಳಿರುವ ಚೇತನ್ ಅವರು ತಾವು ಪ್ರೀತಿಸುತ್ತಿರುವ ಹುಡುಗಿಗೆ ಕನ್ನಡ ಬರುವುದಿಲ್ಲ ಆದರೆ ನಾನೇ ಕನ್ನಡ ಕಲಿಸಿದ್ದೇನೆ ಎಂದಿರುವ ಅವರು, ಕನ್ನಡದ ಮೇಲೆ ನನಗೆ ಅಪಾರವಾದ ಅಭಿಮಾನ ಹಾಗೂ ಕಾಳಜಿ ಇದೆ ಎಂದು ಅವರು ಹೇಳಿದ್ದಾರೆ. ಅವರು ಕೂಡಾ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಸಾಮಾಜಿಕ ವಿಚಾರಗಳ ಬಗ್ಗೆ ಹೋರಾಟಕ್ಕೆ ಕೂಡಾ ಅವರು ಸಿದ್ಧರಾಗಿರುತ್ತಾರೆ. ಅದಕ್ಕೆ ಅವರು ಇಷ್ಟವಾಗಿದ್ದು, ಅವರು ಯಾರೆಂಬುದನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿರುವ ಚೇತನ್ ಅವರು, ತಮ್ಮ ವಿವಾಹ ಸರಳವಾಗಿರಲಿದ್ದು, ಆಡಂಬರಕ್ಕೆ ಅವಕಾಶವಿಲ್ಲ. ತಮ್ಮ ಮದುವೆ ಇತರರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here