ಲಾಕ್ ಡೌನ್ ಮಾಡಿರುವುದು ಜನರ ಪ್ರಾಣ ರಕ್ಷಣೆಯ ಉದ್ದೇಶದಿಂದ. ಅಂದರೆ ಕೊರೊನಾ ಸೋಂಕು ಜನರಿಗೆ ಒಬ್ಬರಿಂದ ಒಬ್ಬರಿಗೆ ಹರಡದಿರಲಿ ಎಂಬ ಕಾಳಜಿಯಿಂದ. ಆದರೆ ಇನ್ನೊಂದೆಡೆ ಇದು ಅನೇಕ ಸಮಸ್ಯೆಗಳನ್ನು ಕೂಡಾ ಹುಟ್ಟು ಹಾಕಿರುವುದು ನಿಜ. ಕೆಲವರಿಗೆ ಅಗತ್ಯ ಹಾಗೂ ಅನಿವಾರ್ಯ ಆಗಿರುವ ಔಷಧಿಗಳು ಸಿಗದೇ ಆಗಿವೆ‌. ಅನೇಕರು ತಮಗೆ ಬೇಕಾದ ಔಷಧಿಗಳು ಸೂಕ್ತ ಸಮಯದಲ್ಲಿ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ದಕ್ಷಿಣ ಕನ್ನಡದಲ್ಲಿ ಔಷಧಿಗಾಗಿ 15 ಕಿಮೀ ನಡೆದ ಅಜ್ಜಿ, ನಿನ್ನೆ ತನ್ನ ಬೈಕ್ ನಲ್ಲೇ 450 ಕಿಮೀ ದೂರ ಪ್ರಯಾಣ ಮಾಡಿ ಕ್ಯಾನ್ಸರ್ ರೋಗಿಗೆ ಔಷಧಿ ನೀಡಿ ಬಂದ ಪೋಲಿಸ್ ಪೇದೆ ಇಂತಹ ವಿಷಯಗಳು ಸುದ್ದಿಯಾದವು. ಇವು ಸದ್ಯದ ಪರಿಸ್ಥಿತಿಗೆ ಉದಾಹರಣೆ ಆಗಿದೆ.

ಇಂತಹುದೇ ಇನ್ನೊಂದು ಘಟನೆಯಲ್ಲಿ ಬೆಳಗಾವಿಯ ಯುವತಿಯೊಬ್ಬಳು ಸಿಎಂ ಅವರಿಗೆ ಟಿಕ್ ಟಾಕ್ ಮೂಲಕ ವಿಡಿಯೋ ಸಂದೇಶ ನೀಡಿ ಸಹಾಯ ಪಡೆದ ಘಟನೆ ನಡೆದಿದೆ. ಬೆಳಗಾವಿಯ ಬಳಿಯ ಗ್ರಾಮವೊಂದರ ಯುವತಿಯ ತಂದೆಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿದ್ದು, ಯುವತಿಯ ತಾಯಿ ತಮ್ಮ ಪತಿಗೆ ಕಿಡ್ನಿ ನೀಡಿದ್ದಾರೆ‌. ಆದರೆ ಕಳೆದ ಹದಿನೈದು ದಿನಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಿಯಾದ ಔಷಧಿಗಳು ಅವರಿಗೆ ಸಿಗದೇ ಆಗಿದ್ದು, ಯುವತಿಯ ತಾಯಿ ಆರೋಗ್ಯದಲ್ಲಿ ಸಮಸ್ಯೆಯಾದ ಕಾರಣ, ಯುವತಿ ಟಿಕ್ ಟಾಕ್ ಮೂಲಕ ಮುಖ್ಯಮಂತ್ರಿ ಗಳ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಅನಂತರ ಆಕೆಯ ನೋವಿಗೆ ಸ್ಪಂದಿಸಿದ ಆಡಳಿತ ವರ್ಗ ಶೀಘ್ರದಲ್ಲೇ ಆಕೆಗೆ ಅಗತ್ಯವಿರುವ ಔಷಧಿಯನ್ನು ಅವರ ಮನೆಗೆ ತಲುಪಿಸುವ ಮಾನವೀಯ ಕಾರ್ಯವನ್ನು ಮಾಡಿದ್ದಾರೆ. ಯುವತಿ ತನ್ನ ಮನವಿಗೆ ಶೀಘ್ರವಾಗಿ ಪರಿಹಾರ ಸಿಕ್ಕಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಾಗೂ ಸ್ಥಳೀಯ ತಹಸೀಲ್ದಾರ್ ಅವರಿಗೂ ಕೂಡಾ ಧನ್ಯವಾದಗಳನ್ನು ತಿಳಿಸಿದ್ದು, ತನ್ನ ಮನವಿಗೆ ರಾತ್ರೋರಾತ್ರಿ ಸರ್ಕಾರ ಸ್ಪಂದಿಸಿದ ರೀತಿಗೆ ಆಕೆ ಕೃತಜ್ಞತೆಯನ್ನು ಕೂಡಾ ಸಲ್ಲಿಸಿದ್ದಾಳೆ. ತೊಂದರೆಯಲ್ಲಿ ಸಿಲುಕಿದ ಎಲ್ಲರಿಗೂ ಹೀಗೆ ಸೇವೆ ದೊರೆತು ಲಾಕ್ ಡೌನ್ ಮುಗಿಯುವವರೆಗೂ ಪರಿಸ್ಥಿತಿ ಶಾಂತವಾಗಿರಲಿ ಎಂದು ಆಶಿಸೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here