ಕೊರೊನಾ ತಡೆ ಸಲುವಾಗಿ ಬೆಂಗಳೂರಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಇದರ ಹೊರತಾಗಿಯೂ ಜನರು ಜಾಗೃತಿಯನ್ನು ಮರೆತಂತೆ, ಪರಿಸ್ಥಿತಿಯನ್ನು ಪರಾಮರ್ಶೆ ಮಾಡದೆ ತಮ್ಮ ತಮ್ಮ ಊರುಗಳತ್ತ ಹೋಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಜನರಿಗೆ ಸಿಎಂ ಯಡಿಯೂರಪ್ಪ ಅವರು ಊರಿಗೆ ಹೋಗಬೇಡಿ ಎಂದು ಮನವಿಯನ್ನು ಮಾಡಿದ್ದರು‌. ಆದರೆ ಸಿಎಂ ಮನವಿಯನ್ನು ಗಾಳಿಗೆ ತೂರಿದ ಜನರು ಯುಗಾದಿ ಹಬ್ಬಕ್ಕೆಂದು ತಮ್ಮ ಸ್ವಂತ ವಾಹನಗಳಲ್ಲಿ ಹಾಗೂ ಖಾಸಗಿ ಬಸ್‍ಗಳಲ್ಲಿ ಇಲ್ಲವೇ ಆ‌ ಮಾರ್ಗವಾಗಿ ಹೋಗುವ ವಾಹನಗಳನ್ನು ಹಿಡಿದು ಊರಿಗೆ ಹೊರಟಿದ್ದಾರೆ‌.

ವಾಹನಗಳ ಸಂಖ್ಯೆ ಕಡಿಮೆ ಇದ್ದಾಗ್ಯೂ ಜನರು ಹೇಗೋ ಊರುಗಳನ್ನು ಸೇರಬೇಕೆಂದು ಬಸ್ ಗಳ, ತೂಫಾನ್ ಗಾಡಿಗಳ ಟಾಪ್‍ನಲ್ಲೇ ಜಾಗ ಮಾಡಿಕೊಂಡು ಊರುಗಳ ದಾರಿ ಹಿಡಿದಿದ್ದಾರೆ. ಮತ್ತೆ ಕೆಲವರು ತಮ್ಮ ಬೈಕ್‍ ಗಳಲ್ಲೇ ಊರುಗಳಿಗೆ ತೆರಳಿದ್ದರೆ. ಹೀಗೆ ಏಕಾ ಏಕೀ ಹೆಚ್ಚು ಜನರು ಪ್ರಯಾಣ ಹೊರಟ ಹಿನ್ನೆಲೆಯಲ್ಲಿ ನೆಲಮಂಗಲ ಟೋಲ್‍ನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿ ಸಮಸ್ಯೆ ಆಗಿತ್ತು. ನಿನ್ನೆ ಅಂದರೆ ಸೋಮವಾರ ಒಂದೇ ದಿನದಲ್ಲಿ ಬೆಂಗಳೂರಿನಿಂದ ಅಸಂಖ್ಯಾತ ಜನರು ತಮ್ಮ ಊರುಗಳತ್ತ ಹೊರಟು ಬೆಂಗಳೂರು ನಗರದಿಂದ ಕಾಲ್ಕಿತ್ತಿದ್ದಾರೆ.

ರಾಜ್ಯ ಸರ್ಕಾರವು ಕೊರೊನಾ ಭೀತಿಯ ಕಾರಣವನ್ನು ನೀಡಿ, ಬರುವ ಮಾರ್ಚ್ 31ರವರೆಗೆ ಕರ್ನಾಟಕವನ್ನು ಲಾಕ್‍ಡೌನ್ ಮಾಡಲು ಆದೇಶವನ್ನು ಹೊರಡಿಸಿದೆ. ಈ ಆದೇಶ ಹೊರ ಬಿದ್ದ ಬೆನ್ನಲ್ಲೇ ಅನೇಕರು ಈ ಲಾಕ್ ಡೌನ್ ಉದ್ದೇಶವನ್ನೇ ಅರಿಯದವರಂತೆ ಬೆಂಗಳೂರು ತೊರೆದಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ಇಲ್ಲದೇ ಹಲವು ಪ್ರಯಾಣಿಕರು ಪರದಾಡಿದರೆ, ಮತ್ತೊಂದೆಡೆ ಬೆಂಗಳೂರು -ತುಮಕೂರು ಮಾರ್ಗವಾಗಿ ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ ನಾನಾ ಜಿಲ್ಲೆಗೆ ಹೊರಟಿದ್ದ ಜನರು ತಮಗೆ ಸಿಕ್ಕ ವಾಹನಗಳನ್ನೇ ಏರಿ ಊರಿಗೆ ಹೋಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here