ಕಳೆದ ಮಾರ್ಚ್ 13 ರಿಂದ 15ನೇ ತಾರೀಖಿನ ವರೆಗೆ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಕ್ ಮರ್ಕಜ್ ಎಂಬ ಮಸೀದಿಯಲ್ಲೊಂದು ಧಾರ್ಮಿಕ ಸಭೆ ಆಯೋಜಿಸಲಾಗಿತ್ತು. ಈಗ ಈ ವಿಷಯ ಎಲ್ಲೆಲ್ಲೂ ದೊಡ್ಡ ಸುದ್ದಿಯಾಗಿದೆ. ಕಾರಣವೇನೆಂದರೆ ಇಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಇಂಡೋನೇಷ್ಯಾ, ಸಿಂಗಾಪೂರ್ ಸೇರಿದಂತೆ ದೇಶ ವಿದೇಶದಿಂದ ಬಂದಿದ್ದ, ಸುಮಾರು 4,000ಕ್ಕೂ ಅಧಿಕ ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಆದರೆ ಈ ಸಭೆ ಈಗ ಚರ್ಚೆಗೆ ಕಾರಣವಾಗಿದ್ದು, ಈ ಸಭೆಯಲ್ಲಿ ಪಾಲ್ಗೊಂಡ ಸುಮಾರು 10 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ದರಿಂದ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕರಿಗೆ ಸೋಂಕು ತಗುಲಿದ್ದು, ಅವರನ್ನು ದೆಹಲಿಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಕರ್ನಾಟಕದಿಂದಲೂ ಕೂಡಾ ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದ್ದು, ಕರ್ನಾಟಕದ ಯಾವ ಭಾಗದಿಂದ, ಯಾವ ಜಿಲ್ಲೆಯಿಂದ ಎಷ್ಟು ಜನ ಪಾಲ್ಗೊಂಡಿದ್ದರು ಎಂಬುದು ಮಾತ್ರ ಪತ್ತೆ ಹಚ್ಚುವುದು ಈಗ ಸರ್ಕಾರದ ಮುಂದೆ ಇರುವ ದೊಡ್ಡ ಸಮಸ್ಯೆ ಆಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನವರು ಇಂದು ರಾಜ್ಯದ ಪ್ರಮುಖ ಮುಸ್ಲಿಂ ನಾಯಕರುಗಳ ಜೊತೆಗೆ ಸಭೆಯೊಂದನ್ನು ನಡೆಸಿದ್ದಾರೆ.

ಈ ಸಭೆಯಲ್ಲಿ ಪ್ರಮುಖವಾದ ವಿಚಾರಗಳನ್ನು ಕುರಿತಾಗಿ ಚರ್ಚೆ ಮಾಡಿದ್ದು, ಸಭೆಯಲ್ಲಿ ಹಾಜರಿದ್ದ ಮುಸ್ಲಿಂ ಮುಖಂಡರು ನಿಜಾಮುದ್ದೀನ್ ತಬ್ಲೀಘ್ ಮರ್ಕಜ್ ಗೆ ಭೇಟಿ ನೀಡಿದ ರಾಜ್ಯದ ವ್ಯಕ್ತಿಗಳ ಮಾಹಿತಿಯನ್ನು ನೀಡುವುದಾಗಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಅದು ಮಾತ್ರವೇ ಅಲ್ಲದೇ ಆರೋಗ್ಯ ಕಾರ್ಯಕರ್ತರಿಗೆ ತಮ್ಮ ಕಡೆಯಿಂದ ಸೂಕ್ತವಾದ ಸಹಕಾರವನ್ನು ಕೂಡಾ ನೀಡುವುದಾಗಿ ತಿಳಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ಕ್ವಾರಂಟೈನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವ ವಿಷಯದಲ್ಲಿ ಕೂಡಾ ಭರವಸೆಯನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here