ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಪ್ರಚಾರಕ್ಕಾಗಿ ಸ್ಯಾಂಡಲ್ ವುಡ್ ನ ತಾರೆಯರು ಪ್ರಚಾರ ಮಾಡುತ್ತಿರುವ ವಿಷಯ ಈಗಾಗಲೇ ತಿಳಿದಿದೆ. ಕಳೆದ ಒಂದು ವಾರದಿಂದಲೂ ಕೂಡಾ ಸ್ಯಾಂಡಲ್ ವುಡ್ ನಟರಾದ ಹರಿಪ್ರಿಯಾ, ದಿಗಂತ್ , ಹರ್ಷಿಕಾ ಪೂಣಚ್ಚ, ನಟ ಭುವನ್ ಅವರು ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಈಗ ಇದರ ಬೆನ್ನಲ್ಲೇ ಈ ನಟರ ಜೊತೆಗೆ ಸಾಥ್ ನೀಡಲು ನೆರೆಯ ಟಾಲಿವುಡ್ ನಿಂದ ಹಾಸ್ಯ ನಟರೊಬ್ಬರು ಬರುತ್ತಿದ್ದಾರೆ. ಈ ಹಾಸ್ಯ ನಟ ಮತ್ತಾರೂ ಅಲ್ಲ. ಟಾಲಿವುಡ್ ನ ಹಿರಿಯ ಹಾಸ್ಯ ಕಲಾವಿದರಾದ ಬ್ರಹ್ಮಾನಂದಂ ಅವರು‌.

ಚಿಕ್ಕಬಳ್ಳಾಪುರ ಆಂಧ್ರದ ಗಡಿ ಭಾಗದ ಜಿಲ್ಲೆಯಾಗಿರುವುದರಿಂದ ತೆಲುಗು ಮಾತನಾಡುವ ಜನರ ಮನವನ್ನು ಗೆಲ್ಲುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ. ಹಾಸ್ಯ ನಟ ಬ್ರಹ್ಮಾನಂದಂ ಅವರು ಟಾಲಿವುಡ್ ಮಾತ್ರವೇ ಅಲ್ಲದೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ತೆರೆಯ ಮೇಲೆ ಬ್ರಹ್ಮಾನಂದಂ ಅವರು ಕಂಡರೆ ನಗುವ ಜನರು, ಅವರ ನಟನೇ ನೋಡುತ್ತಾ ನಕ್ಕು ನಕ್ಕು ಸುಸ್ತಾಗುತ್ತಾರೆ‌. ಬ್ರಹ್ಮಾನಂದಂ ಟಾಲಿವುಡ್ ನ ಶ್ರೀಮಂತ ನಟರಲ್ಲಿ ಒಬ್ಬರು ಕೂಡಾ‌. ಅವರ ಹಾಸ್ಯಕ್ಕೆ ನಗದವರೇ ಇಲ್ಲ. ಹೀಗೆ ಹಾಸ್ಯ ನಟನೆಗಾಗಿಯೇ ಅಪಾರ ಅಭಿಮಾನಿಗಳನ್ನು ಪಡೆದಿರುವ ಬ್ರಹ್ಮಾನಂದಂ ಅವರು ಶನಿವಾರ ಅಂದರೆ ನಾಳೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಆಗುತ್ತಿದ್ದಾರೆ.

ಬ್ರಹ್ಮಾನಂದಂ ಅವರು ಶನಿವಾರ ಬೆಳಗ್ಗೆ 9 ಗಂಟೆಗೆ ಸುಧಾಕರ್ ಅವರ ಸ್ವಗ್ರಾಮದಲ್ಲೇ ಅಂದರೆ ಪೇರೇಸಂದ್ರ ಕ್ರಾಸ್‍ನಲ್ಲಿ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸುತ್ತಿದ್ದಾರೆ. ಅದಾದ ನಂತರ ಅವರು ಇನ್ನು ಹಲವು ಕಡೆ ತಮ್ಮ ಪ್ರಚಾರ ಕಾರ್ಯವನ್ನು ನಡೆಸಲಿದ್ದಾರೆ ಎನ್ನಲಾಗಿದೆ. ಸುಧಾಕರ್ ಅವರ ಪರ ಪ್ರಚಾರ ಮಾಡಲು ಈ ಹಿಂದೆ ಕೂಡಾ ಮೆಗಾಸ್ಟಾರ್ ಚಿರಂಜೀವಿ, ರಮ್ಯಕೃಷ್ಣ ರಂತಹ ಸ್ಟಾರ್ ಗಳು ಬಂದಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here