ಪರದೆಯ ಮೇಲೆ ಕಾಣಿಸಿಕೊಂಡರೆ ಅವರನ್ನು ನೋಡಿ ಜನರು ತಮ್ಮ ದುಃಖ ಮರೆತು ನಗುತ್ತಾರೆ. ಅವರು ಡೈಲಾಗ್ ಹೇಳಿದರೆ , ಅವರ ಹಾವ ಭಾವ ನೋಡಿ ನಕ್ಕು ನಲಿಯುವರು. ಅಂತಹ ಪ್ರತಿಭಾವಂತರು ಹಾಸ್ಯ ನಟರು. ಸ್ಯಾಂಡಲ್ ವುಡ್ ನಲ್ಲಿ ಅಂತಹ ನಟರ ಸಾಲಲ್ಲಿ ಈಗ ಪ್ರತಿಭಾವಂತ ಹಾಸ್ಯ ನಟನಾಗಿ ಮಿಂಚುತ್ತಿರುವವರು ಚಿಕ್ಕಣ್ಣ. ತೆರೆಯ ಮೇಲೆ ನಟಿಸಿ ಜನರನ್ನು ನಕ್ಕು ನಗಿಸುವ ಕಲೆಯನ್ನು ಒಲಿಸಿಕೊಂಡ ಈ ಹಾಸ್ಯ ನಟ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಳೆದ ಭಾನುವಾರ ಸಾಧಕರ ಕುರ್ಚಿಯಲ್ಲಿ ಕುಳಿತಾಗ, ತಮ್ಮ ತಂದೆಯನ್ನು ನೆನೆದು ಭಾವುಕರಾದರು, ಅಭಿಮಾನಿಗಳನ್ನು ಕೂಡಾ ಭಾವುಕರನ್ನಾಗಿಸಿ ಬಿಟ್ಟರು.

ಅವರ ತಂದೆಯವರು ದೂರಾಗಿದ್ದನ್ನು , ಅವರು ಅಪಘಾತದಿಂದ ಆಸ್ಪತ್ರೆಗೆ ಸೇರಿದ ವಿಷಯವನ್ನು ನೆನಪಿಸಿಕೊಂಡ ಚಿಕ್ಕಣ್ಣ ಅವರ ಕಣ್ಣಿನಲ್ಲಿ ನೀರು ಬಂದಿತು. ಅವರು ಗದ್ಗದಿತರಾದರು. ಅವರ ತಂದೆ ಆಸ್ಪತ್ರೆಯಿಂದ ಗುಣಮುಖರಾಗಿ ಬಂದರು, ಒಂದು ವರ್ಷ ಆರಾಮಾಗೇ ಇದ್ದರು. ಆದರೆ ಅನಂತರ ಏನಾಯಿತೋ ಅವರು ನಮ್ಮನ್ನು ಬಿಟ್ಟು ಹೋದರು ಎಂದರು. ಅಲ್ಲದೆ ಜೀವನೋಪಾಯಕ್ಕಾಗಿ ತಮ್ಮ ಅಮ್ಮ, ಸಹೋದರಿಯರು ಗಾರೆ ಕೆಲಸ ಮಾಡಿತ್ತಿದ್ದುದ್ದನ್ನು ನೆನಪಿಸಿಕೊಂಡಾಗಲೂ ಕೂಡಾ ಅವರು ಭಾವುಕರಾಗಿದ್ದರು‌.

ತಾನು ತನ್ನ ತಂದೆಯವರಿಗೆ ಬೆಂಗಳೂರು ತೋರಿಸೋ ಪ್ರಯತ್ನ ಮಾಡಲೇ ಇಲ್ಲ. ಅವರು ಬೆಂಗಳೂರು ನೋಡಿರಲೇ ಇಲ್ಲ. ನನಗೆ ಜೀವನದಲ್ಲಿ ದುಡ್ಡು ಬರೋ ವೇಳೆಗೆ, ಅವರೇ ನಮ್ಮನ್ನು ಬಿಟ್ಟು ಹೋಗಿದ್ದರು. ತಮ್ಮ ತಂದೆಯನ್ನು ಬೆಂಗಳೂರಿಗೆ ಕರ್ಕೊಂಡು ಬಂದು ಚೆನ್ನಾಗಿ ನೋಡ್ಕೊಳ್ಳೊ ಆಸೆ ತೀರಲೇ ಇಲ್ಲ ಎಂದು ಅವರು ಕಣ್ಣೀರು ಹಾಕಿದಾಗ, ಅವರ ಎದುರಿಗಿದ್ದ ಅವರ ತಾಯಿ ಹಾಗೂ ಸಹೋದರಿಯರು ಕೂಡಾ ಒಂದು ಕ್ಷಣ ಕಣ್ಣೀರಾದರು. ಚಿಕ್ಕಣ್ಣ ಅವರು ಜನರನ್ನು ನಕ್ಕು ನಗಿಸುವ ಕಲಾವಿದ. ಆದರೆ ಆ ಸ್ಥಾನಕ್ಕೆ ಬರಲು ಅವರು ಎಷ್ಟೆಲ್ಲಾ ದುಃಖವನ್ನು ದಾಟಿ ಬಂದಿದ್ದಾರೆಂದು ತಿಳಿಸುವಲ್ಲಿ ವೀಕೆಂಡ್ ಶೋ ಯಶಸ್ವಿಯಾಗಿದೆ.

Weekend With Ramesh 4 | 9.30 PM | 23.06.2019 | On Zee Kannada

ಇಂದಿನ Weekend With Ramesh Season 4ರ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆಯ ಹಾಸ್ಯ ನಟ ಚಿಕ್ಕಣ್ಣರವರ ಸುಂದರ ಬದುಕಿನ ಅನಾವರಣ.#ZeeKannada #WeekendWithRamesh4 ಇಂದು ರಾತ್ರಿ 9.30ಕ್ಕೆ

Zee Kannada यांनी वर पोस्ट केले शनिवार, २२ जून, २०१९

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here