ಗಡಿಯಲ್ಲಿ ಭಾರತವನ್ನು ವಿನಾಕಾರಣ ಕೆಣಕುತ್ತಿರುವ ಚೀನಾಕ್ಕೆ ತಕ್ಕ ಪಾಠವನ್ನು ಕಲಿಸಲು ಮೋದಿ ಸರ್ಕಾರವು ಒಂದು ದಿಟ್ಟ ನಿರ್ಧಾರವನ್ನು ಮಾಡಿದೆ. ತನ್ನ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದ ಚೀನಾ ಮೂಲದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದೆ ಭಾರತ ಸರ್ಕಾರ. ಹೆಚ್ಚಿನ ಆದಾಯವನ್ನು ಈ ಆ್ಯಪ್ ಗಳ ಮೂಲಕ ಗಳಿಸುತ್ತಿದ್ದ ಚೀನಾಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ ಭಾರತ‌. ಈ ಕುರಿತಾಗಿ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) ಹೊರಡಿಸಿರುವ ಆದೇಶದಲ್ಲಿ ಭಾರತ ಸರ್ಕಾರವು ನಿಷೇಧಿಸಿರುವ 59 ಅಪ್ಲಿಕೇಶನ್‌ಗಳ ಬ್ಯಾನ್ ಗೆ ಕಾರಣವನ್ನು ತಿಳಿಸಲಾಗಿದೆ.

ಈ ಇಲಾಖೆಯು “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಾಗಿದೆ” ಎಂದು ಹೇಳಿದೆ. ಇತ್ತೀಚಿಗೆ ಗುಪ್ತಚರ ಇಲಾಖೆ ಕೂಡಾ ಚೀನಾದ ಕೆಲವು ಆ್ಯಪ್ ಗಳು ತನಗೆ ಬೇಕಾದ ಮಾಹಿತಿಯನ್ನು ಕದಿಯುತ್ತಿದೆ ಎಂದು ಮಾಹಿತಿಯನ್ನು ನೀಡಿತ್ತು ಎನ್ನಲಾಗಿದೆ. ಅಲ್ಲದೇ ಆ್ಯಪಲ್ ಕಂಪನಿ ಕೂಡಾ ಟಿಕ್ ಟಾಕ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿರುವ ವಿಷಯದ ಬಗ್ಗೆ ಪತ್ತೆ ಹಚ್ಚಿತ್ತು ಎನ್ನಲಾಗಿದೆ. ಇವೆಲ್ಲವುಗಳ ನಂತರ ಸರ್ಕಾರ ಕೂಡಾ ದಿಟ್ಟ ನಿರ್ಧಾರವನ್ನೇ ಮಾಡಿದೆ.

ಚೀನಾ ಗಡಿಯಲ್ಲಿ ನಡೆಸಿದ ಗಲಭೆಗಳ ನಂತರ ಭಾರತದಲ್ಲಿ ಚೀನಾ ಆ್ಯಪ್ ಗಳನ್ನು ಬಹಿಷ್ಕಾರ ಮಾಡುವ ಅಭಿಯಾನ ಆರಂಭವಾಗಿದೆ. ಚೀನಾ ವಸ್ತುಗಳನ್ನು ಉಪಯೋಗಿಸಬೇಡಿ ಎಂದು ಜನರು ಕೂಡಾ ಪ್ರತಿಭಟನೆಗಳನ್ನು ನಡೆಸುತ್ತಿರುವಾಗಲೇ ಸರ್ಕಾರದ ಈ ನಿರ್ಧಾರವು ಜನರಿಗೆ ಕೂಡಾ ಸಂತಸವನ್ನು ತಂದಿದೆ. ಅಲ್ಲದೇ ಚೀನಾಕ್ಕೆ ಕೂಡಾ ಇದೊಂದು ದೊಡ್ಡ ಆಘಾತವನ್ನು ನೀಡುವುದು ಕೂಡಾ ವಾಸ್ತವ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here