ಕೊರೊನಾ ವಿಶ್ವದಾದ್ಯಂತ ಭೀತಿಯನ್ನು ಹುಟ್ಟಿಸಿರುವ ವೈರಸ್. ಇದುವರೆವಿಗೂ ಲಸಿಕೆ ಕೂಡಾ ಕಂಡು ಹಿಡಿಯಲಾಗಿಲ್ಲ ಆದರೆ ಅದರ ಪ್ರಯತ್ನ ನಡೆದಿದೆ. ಆದರೆ ಹಲವು ದೇಶಗಳಲ್ಲಿ ಕೊರೊನಾ ಹರಡುತ್ತಿದೆ. ಕೆಲವು ದಿನಗಳ ಹಿಂದೆ ಯುಎಸ್ ಸೆನೆಟರ್ ಟಾಮ್ ಕಾಟನ್ ಈ ವಿಷಯವಾಗಿ ಚೀನಾವನ್ನು ದೂಷಿಸುತ್ತಾ,ವೈರಸ್‌ ಪ್ರಯೋಗವೊಂದು ತಪ್ಪಾಗಿದೆ ಅಥವಾ ಉದ್ದೇಶಪೂರ್ವಕವಾಗಿ ಜೈವಿಕ ಆಯುಧವನ್ನು ಬಿಡುಗಡೆ ಆಗಿದೆ ಎಂದು ಹೇಳಿದಾಗ ಚೀನಾ ಇದನ್ನು ವಿರೋಧಿಸಿದ್ದು ಉಂಟು. ಆದರೆ 1981 ರಲ್ಲಿ ಪ್ರಕಟಣೆಗೊಂಡಿರುವ ಚೀನಾದ ಲೇಖಕ ಡೀನ್ ಕೂಂಟ್ಜ್ ಎಂಬುವವರ “ದಿ ಐಸ್ ಆಫ್ ಡಾರ್ಕ್ ನೆಸ್ ನಲ್ಲಿ ಚೀನಾದಲ್ಲಿ ನಡೆಸುತ್ತಿದ್ದ ವೈರಸ್ ಪ್ರಯೋಗದ ಬಗ್ಗೆ ಮಾಹಿತಿ ನೀಡಿದೆ.”

ದಿ ಐಸ್ ಆಫ್ ಡಾರ್ಕ್ ‌ನೆಸ್ ಕಥೆಯಲ್ಲಿ ಒಬ್ಬ ತಾಯಿ ತನ್ನ ಮಗ ಡ್ಯಾನಿ ವುಹಾ‌ನ್-400 ಎಂಬ ಮಾನವ ನಿರ್ಮಿತ ಸೂಕ್ಣ್ಮಾಣು ಜೀವಿಯಿಂದ ಸೋಂಕಿಗೆ ಒಳಗಾದಾಗ ಆತನನ್ನು ಮಿಲಿಟರಿ ಸೌಲಭ್ಯದಲ್ಲಿ ಇರಿಸಿದ್ದಾರೆಂದು ತಿಳಿದುಕೊಳ್ಳುವಳು. ಆ ಸಮಯದಲ್ಲಿಯೇ ಲಿ ಚೆನ್ ಎಂಬ ಚೀನಾದ ವಿಜ್ಞಾನಿ ಯುಎಸ್ ಗೆ ಪಕ್ಷಾಂತರಗೊಂಡರು, ಒಂದು ದಶಕದ ಚೀನಾದ ಅತ್ಯಂತ ಪ್ರಮುಖ ಮತ್ತು ಅಪಾಯಕಾರಿ ಹೊಸ ಜೈವಿಕ ಶಸ್ತ್ರಾಸ್ತ್ರದ ಡಿಸ್ಕೆಟ್ ದಾಖಲೆಯನ್ನು ಕೂಡಾ ಅವರು ಹೊಂದಿದ್ದರು. ಅವರು ಈ ವಿಷಯವನ್ನು ‘ವುಹಾನ್ -400’ ಎಂದು ಕರೆಯುತ್ತಾರೆ ಏಕೆಂದರೆ ಇದನ್ನು ವುಹಾನ್ ನಗರದ ಹೊರಗಿನ ತಮ್ಮ ಆರ್‌ಡಿಎನ್‌ಎ ಲ್ಯಾಬ್‌ಗಳಲ್ಲಿ ಅಭಿವೃದ್ಧಿಪಡಿಸಲಾಗಿತ್ತು ಮತ್ತು ಅದು ಆ ಸಂಶೋಧನಾ ಕೇಂದ್ರದಲ್ಲಿ ರಚಿಸಲಾದ ಮಾನವ ನಿರ್ಮಿತ ಸೂಕ್ಷ್ಮಜೀವಿಗಳ 400 ನೇ ಕಾರ್ಯಸಾಧನೆ ಆಗಿತ್ತು ಎನ್ನುತ್ತದೆ”

ಈ ಪುಸ್ತಕದ 353 ನೇ ಪುಟದಲ್ಲಿ ಈ ವಿಷಯವನ್ನು ಓದಬಹುದು. ಅಲ್ಲದೆ ಆ ಸೂಕ್ಷ್ಮಾಣು ಜೀವಿ ಪ್ರಾಣಿಗಳ ಮೇಲೆ ಅಲ್ಲದೆ ಕೇವಲ ಮನುಷ್ಯನ ಮೇಲೆ ಮಾತ್ರ ಪರಿಣಾಮ ಬೀರುವುದು ಎಂದು ಕೂಡಾ ಬರೆಯಲಾಗಿದೆ. ಈ ಪುಸ್ತಕದಲ್ಲಿ ನಮೂದಿಸಲಾದ ವೈರಸ್ ಕೊರೊನಾ ಹೌದೋ ಅಲ್ಲವೋ ಆದರೆ ಇದರಲ್ಲಿ ವುಹಾನ್ ಬಗ್ಗೆ, ಅಲ್ಲಿನ ಪ್ರಯೋಗಾಲಯಗಳ ಬಗ್ಗೆ ಬರೆದಿರುವುದು ಎಲ್ಲರಲ್ಲೂ ಅನುಮಾನ ಹುಟ್ಟಿಸಿದ್ದು ನಿಜ. ಅಲ್ಲದೆ ಕಾಕತಾಳೀಯ ಎಂಬಂತೆ ಮೊದಲ ಕೊರೊನಾ ಪತ್ತೆಯಾಗಿದ್ದು ಕೂಡಾ ವುಹಾನ್ ನಲ್ಲೇ ಎಂಬುದು ಈ ಅನುಮಾನಗಳಿಗೆ ಇಂಬು ನೀಡುವಂತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here