ಕೊರೊನಾ ವೈರಸ್ ವಿಶ್ವದಾದ್ಯಂತ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಚೀನೀಯರು ಹಾಗೂ ಚೀನಾದಲ್ಲಿ ವಾಸಿಸುತ್ತಿರುವ ವಿದೇಶಿಯರಿಗೆ ಇ-ವೀಸಾ ಸೌಲಭ್ಯವನ್ನು ರದ್ದುಪಡಿಸಲಾಗಿದೆ. ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಸೌಲಭ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ಬೀಜಿಂಗ್‌ನಲ್ಲಿನ ಭಾರತೀಯ ರಾಯಭಾರ
ಕಚೇರಿ ಪ್ರಕಟಿಸಿದೆ.
ಇದು ಚೀನಾ ಪಾಸ್‌ಪೋರ್ಟ್ ಹೊಂದಿರುವ ಎಲ್ಲ ಪ್ರಜೆಗಳು ಮತ್ತು ಚೀನಾದಲ್ಲಿ ವಾಸಿಸುತ್ತಿರುವ ವಿದೇಶಿಯರಿಗೂ ಅನ್ವಯವಾಗಲಿದೆ. ಈಗಾಗಲೇ ನೀಡಿರುವ ವೀಸಾಗಳು ಹೆಚ್ಚು ದಿನ ಮಾನ್ಯತೆ ಹೊಂದಿರುವುದಿಲ್ಲವೆಂದು ತಿಳಿಸಲಾಗಿದೆ. ಭಾರತಕ್ಕೆ ಮರಳಲೇಬೇಕಾದ ಅನಿವಾರ್ಯತೆಯಿದ್ದವರು ಬೀಜಿಂಗ್, ಶಾಂಘಾಯ್ ಮತ್ತು ಗುಂಗ್‌ಜೌ ನಗರಗಳ ಭಾರತೀಯ ರಾಯಭಾರ ಕಚೇರಿಗಳನ್ನು ಹಾಗೂ ವೀಸಾ ವಿತರಣಾ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಏತನ್ಮಧ್ಯೆ ಭಾರತ ಸರ್ಕಾರ ನಿಯೋಜಿಸಿರುವ ವಿಶೇಷ ವಿಮಾನ ಭಾನುವಾರ ೩೨೪ ಜನರ ೨ನೇ ತಂಡವನ್ನು ವುಹಾನ್‌ನಿಂದ ಕರೆತಂದಿದೆ. ಕೇರಳದ ಎರಡನೇ ವ್ಯಕ್ತಿಗೆ ಸೋಂಕು ತಗುಲಿರುವುದು ಇದೀಗ ಧೃಢಪಟ್ಟಿದೆ. ಜೊತೆಗೆ ಜ೧ ನಂತರ ಚೀನಾಗೆ ಭೇಟಿ ನೀಡಿದ ಪ್ರವಾಸಿಗರು ತಕ್ಷಣವೇ ಸೂಕ್ತ ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ಸೂಚಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here