ಪಾಕಿಸ್ತಾನಕ್ಕೆ ಏನಾದರೂ ಸಮಸ್ಯೆ ಎದುರಾದರೆ ಆ ದೇಶಕ್ಕೆ ಸಹಾಯ ನೀಡಲು ಸದಾ ಮುಂದಾಗುವುದು ಚೀನಾ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಪಾಕಿಸ್ತಾನದ ಪರವಾಗಿ ನಿಲ್ಲುವ ರಾಷ್ಟ್ರ ಕೂಡಾ ಚೀನಾ ಎಂಬುದು ಜಗಕ್ಕೆ ತಿಳಿದಿರುವ ಸತ್ಯ. ಈಗ ಪ್ರಸ್ತುತ ಪಾಕಿಸ್ತಾನ ಕೂಡಾ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳನ್ನು ಎದುರಿಸುತ್ತಿದ್ದು, ತನಗೆ ನೆರವು ನೀಡುವಂತೆ ಪಾಕಿಸ್ತಾನ ತನ್ನ ಮಿತ್ರ ರಾಷ್ಟ್ರ ಚೀನಾದ ಮುಂದೆ ಬೇಡಿಕೆಯನ್ನು ಇಟ್ಟಿದೆ. ಆದರೆ ಚೀನಾ ಅಂಡರ್ ವೇರ್ ನಿಂದ ತಯಾರಿಸಿದ ಮಾಸ್ಕ್ ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿರುವ ಪ್ರಸಂಗ ಈಗ ಹಾಸ್ಯಕ್ಕೆ ಗುರಿಯಾಗಿದೆ.

 

ಕೊರೊನಾ ಹರಡುವುದನ್ನು ತಪ್ಪಿಸಲು ಪಾಕಿಸ್ತಾನ ಚೀನಾದ ಮುಂದೆ ಉತ್ತಮ ಗುಣಮಟ್ಟದ ಎನ್-95 ಮಾಸ್ಕ್ ಗಳ ಅಗತ್ಯವಿದೆ ಎಂದು ತನ್ನ ಬೇಡಿಕೆಯನ್ನು ಇಟ್ಟಿದ್ದು, ಚೀನಾ ಮಾಸ್ಕ್ ಗಳನ್ನು ಪೂರೈಕೆ ಮಾಡಿದೆ. ಇನ್ನು ತನ್ನ ಮಿತ್ರ ರಾಷ್ಟ್ರ ಕಳುಹಿಸಿದ ಮಾಸ್ಕ್ ಗಳನ್ನು ಪಾಕಿಸ್ತಾನ ಪರೀಕ್ಷೆ ಮಾಡದೆ ನೇರವಾಗಿ ಅಗತ್ಯವಿರುವ ಆಸ್ಪತ್ರೆಗಳಿಗೆ ರವಾನೆ ಮಾಡಿದೆ. ಆದರೆ ಅನಂತರ ಕಾದಿತ್ತು ಶಾಕ್. ಆಸ್ಪತ್ರೆಯಲ್ಲಿ ಸಿಬ್ಬಂದಿ ಮಾಸ್ಕ್ ಗಳನ್ನು ತೆಗೆದು ನೋಡಿದಾಗ ಅವು ಅಂಡರ್ ವೇರ್ ನಿಂದ ತಯಾರಿಸಲ್ಪಟ್ಟವು ಎಂದು ತಿಳಿದು ಶಾಕ್ ಆಗಿದ್ದಾರೆ.

ಇನ್ನು ಚೀನಾ ಕಳುಹಿಸಿದ ಈ ಮಾಸ್ಕ್ ಗಳ ವಿಷಯ ಪಾಕಿಸ್ತಾನದ ಮಾದ್ಯಮಗಳಲ್ಲಿ ಸುದ್ದಿಯಾಗಿದ್ದು, ಈ ವೀಡಿಯೋ ವೈರಲ್ ಆಗಿದೆ. ಪಾಕಿಸ್ತಾನ ಚೀನಾದ ಬಳಿ ಫೇಸ್ ಮಾಸ್ಕ್ ಗಳು, ವೆಂಟಿಲೇಟರ್ ಗಳು, ಟೆಸ್ಟಿಂಗ್ ಕಿಟ್ ಗಳು, ಮೆಡಿಕಲ್ ರಕ್ಷಣಾ ವಸ್ತ್ರಗಳ ಬೇಡಿಕೆಯನ್ನು ಇಟ್ಟಿತ್ತು ಎನ್ನಲಾಗಿದೆ. ಪಾಕಿಸ್ತಾನ ಚೀನಾದ ಜೊತೆಗಿನ ಗಡಿಯನ್ನು ಕೊರೊನಾ ವೈರಸ್ ಭೀತಿಯಿಂದ ಮುಚ್ಚಿದೆಯಾದರೂ, ಮೆಡಿಕಲ್ ವಸ್ತುಗಳ ಪೂರೈಕೆಗಾಗಿ ಅದನ್ನು ತೆರೆಯಲಾಗಿತ್ತು ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here