ನಟ ಚಿರು ಸರ್ಜಾ ವಿಧಿವಶರಾಗಿ ಇವತ್ತಿಗೆ ಒಂದು ವಾರ ಕಾಲ ಕಳೆದಿದೆ. ಅದಾಗಲೇ ಒಂದು ವಾರ ಆಗಿ ಹೋಯಿತಾ ಎನ್ನುವಂತಿದೆ ಕಾಲದ ಹರಿವು. ಚಿರು ಅವರ ಅಕಾಲಿಕ ನಿಧನ ಅವರ ಅಭಿಮಾನಿಗಳಿಗೆ, ಸ್ಯಾಂಡಲ್ ವುಡ್ ಗೆ ಆಘಾತ ಉಂಟಾಗಿದ್ದರೆ, ಸರ್ಜಾ ಕುಟುಂಬಕ್ಕೆ ಇದು ವೇದನೆಯನ್ನು ಉಳಿಸಿ ಹೋಗಿದೆ‌.
ವಿಶೇಷವಾಗಿ ಮೇಘನಾ ರಾಜ್ ತಮ್ಮ ಪ್ರೀತಿಯ ಪತಿಯ ಅಗಲಿಕೆಯ ನೋವಿಗೆ ಒಳಗಾಗಿದ್ದರೆ, ಧೃವ ಸರ್ಜಾ ಅವರು ತಮ್ಮ ಅಣ್ಣನನ್ನು ಕಳೆದುಕೊಂಡು ತೀವ್ರವಾಗಿ ಭಾವುಕರಾಗಿದ್ದು, ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅವರು ಫೋಟೋ ಹಂಚಿಕೊಂಡು ಮನಸ್ಸಿನ ಭಾವನೆಗಳಿಗೆ ಪದಗಳ ರೂಪ ನೀಡುತ್ತಿದ್ದಾರೆ.

ಚಿರು ಅವರ ಕುಟುಂಬಕ್ಕೆ ಇದೊಂದು ಆಘಾತ ಹಾಗೂ ತುಂಬಲಾರದ ನಷ್ಟ. ಅದಕ್ಕೆ ವಾರ ಕಳೆದರೂ ಕೂಡಾ ಇನ್ನೂ ಚಿರು ಅಗಲಿಕೆಯ ನೋವು ಹಾಗೂ ಸಂಟಕ ಅವರಿಂದ ದೂರವಾಗಿಲ್ಲ. ಈ ಸಂದರ್ಭದಲ್ಲಿ ಇಂದು ದೊಡ್ಮನೆಯ ಮಗ ನಟ ರಾಘವೇಂದ್ರ ರಾಜ್​​ಕುಮಾರ್ ಅವರು ಸರ್ಜಾ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ವನ್ನು ಹೇಳಿದ್ದಾರೆ. ಭೇಟಿಯ ಸಂದರ್ಭದಲ್ಲಿ ರಾಘಣ್ಣ ಅವರ ಜೊತೆಗೆ
ಅವರ ಪುತ್ರರಾದ ಯುವ ರಾಜ್​ಕುಮಾರ್​ ಹಾಗೂ ವಿನಯ್​ ರಾಜ್​ಕುಮಾರ್​ ಕೂಡ ಇದ್ದರು.

ರಾಘಣ್ಣ ಅವರು ಸರ್ಜಾ ಅವರ ಮನೆಗೆ ತೆರಳಿ ಕುಟುಂಬಸ್ಥರನ್ನ ಮಾತನಾಡಿಸಿ, ಧೈರ್ಯ ಹೇಳಿದ್ದಾರೆ, ನೋವಿನ ಸಮಯದಲ್ಲಿ ಸಾಂತ್ವನದ ಮಾತುಗಳು, ಆಪ್ತರ ಭೇಟಿ ನಿಜಕ್ಕೂ ಮನಸ್ಸಿಗೊಂದು ಧೈರ್ಯ ಹಾಗೂ ಸಮಾಧಾನವನ್ನು ನೀಡುತ್ತದೆ. ಅದೇ ಕೆಲಸವನ್ನು ರಾಘಣ್ಣ ಅವರು ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಅಗಲಿಕೆ ನಿಜಕ್ಕೂ ಒಂದು ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬ ಈ ನೋವಿನಿಂದ ಆದಷ್ಟು ಬೇಗ ಚೇತರಿಸಿಕೊಳ್ಳಲೆಂದು ಆಶಿಸೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here