ಪೀಪಲ್ ಮೀಡಿಯಾ ಫ್ಯಾಕ್ಟರಿ ಎಲ್.ಎಲ್.ಪಿ. ಹಾಗೂ ಎಸ್.ಟಿ.ಎಫ್. ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿಯಲ್ಲಿ , ಟಿ.ಜಿ. ವಿಶ್ವಪ್ರಸಾದ್ ಹಾಗೂ ರಘುನಾಥ್ ಎಸ್. ನಿರ್ಮಾಣದಲ್ಲಿ ಮೂಡಿಬರುತ್ತಿರುವ ಯುವ ಸಾಮ್ರಾಟ್ ಚಿರು ಸರ್ಜಾ ಅಭಿನಯದ ಬಹುನಿರೀಕ್ಷಿತ ” ಆದ್ಯಾ ” ಚಿತ್ರ ಇದೇ ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.ನಿಂತ ನೀರಿನಂತಿರುವ ಕಮರ್ಷಿಯಲ್ ಚಿತ್ರಗಳ ನಡುವೆ ಯುವ ಸಾಮ್ರಾಟ್ ಚಿರು ಸರ್ಜಾ ಒಂದೊಳ್ಳೆ ಕಂಟೆಂಟ್ ಹೊಂದಿರುವ ಥ್ರಿಲ್ಲರ್ ಚಿತ್ರದ ಮೂಲಕ ವೀಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.

ಆ ದಿನಗಳು ತರಹದ ಎವರ್ ಗ್ರೀನ್ ಹಾಗೂ ಆಟಗಾರ ತರಹದ ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ನಂತಹ ಚಿತ್ರಗಳನ್ನು ನಿರ್ದೇಶಿಸಿರುವ ಅವಾರ್ಡ್ ವಿನ್ನಿಂಗ್ ನಿರ್ದೇಶಕ ಕೆ.ಎಮ್. ಚೈತನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಆದ್ಯಾ ಚಿತ್ರದ ಟ್ರೈಲರ್ ನೋಡಿದವರಿಗೆ ಕೆ.ಎಮ್ ಚೈತನ್ಯ ರವರ ನಿರ್ದೇಶನದ ತೀಕ್ಷ್ಣತೆಯ ಪರಿಚಯವಾಗಿರುತ್ತದೆ.ಚಿತ್ರದಲ್ಲಿ ಸಂಗೀತಾ ಭಟ್ ಯುವ ಸಾಮ್ರಾಟ್ ಚಿರು ಸರ್ಜಾ ರವರಿಗೆ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಆನ್ ಸ್ಕ್ರೀನ್ ನಲ್ಲಿ ಯುವ ಸರ್ಜಾ ಗೆ ಉತ್ತಮ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

 

ಚಿರು ಸರ್ಜಾ ಹಾಗೂ ಸಂಗೀತಾ ಭಟ್ ಅಲ್ಲದೇ, ಚಿತ್ರದಲ್ಲಿ ಶ್ರುತಿ ಹರಿಹರನ್,ರವಿಶಂಕರ್ ಗೌಡ,ಶಶಾಂಕ್ ಪುರುಶೋತ್ತಮ್, ಪ್ರಮೋದ್ ಶೆಟ್ಟಿ ಅಲ್ಲದೇ ಹಲವಾರು ಖ್ಯಾತ ನಾಮ ಪೋಷಕನಟರು ನಟಿಸಿದ್ದಾರೆ.ಈ ಚಿತ್ರವನ್ನು ನೋಡಲೇಬೇಕು ಎನ್ನೋದಕ್ಕೆ ಮುಖ್ಯಕಾರಣ ನಿರ್ದೇಶಕರು. ಕೆ.ಎಮ್ ಚೈತನ್ಯ ರವರ ಚಿತ್ರಗಳು ಪ್ರತಿಬಾರಿಯೂ ವೀಕ್ಷಕರ ಮನಗೆಲ್ಲುವಲ್ಲಿ ಎಂದಿಗೂ ಮುಂದು ಅಂತೆಯೇ ಈ ಚಿತ್ರ ಕೂಡ ವೀಕ್ಷಕರ ಮನದೊಂದಿಗೆ ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡೋದಂತೂ ಗ್ಯಾರಂಟಿ.

ಚಿತ್ರದ ಪ್ರಮುಖ ಆಕರ್ಷಣೆ ನಾಯಕನಟ ಯುವ ಸಾಮ್ರಾಟ್ ಚಿರು ಸರ್ಜಾ ಹಿಂದೆಲ್ಲಾ ಚಿತ್ರಗಳಿಗೆ ಹೋಲಿಸಿದಂತೆ ವಿಭಿನ್ನ ಗೆಟಪ್ ನಲ್ಲಿ ಆದ್ಯಾ ಚಿತ್ರದ ಮೂಲಕ ಇದೇ ಫೆಬ್ರವರಿ 21 ರಂದು ರಾಜ್ಯಾದ್ಯಂತ ನಿಮ್ಮೆಲ್ಲರ ಹತ್ತಿರದ ಚಿತ್ರಮಂದಿರಗಳಲ್ಲಿ ಎಂಟ್ರಿ ಕೊಡಲಿದ್ದಾರೆ. ತಪ್ಪದೇ ಕುಟುಂಬ ಸಮೇತರಾಗಿ ಚಿತ್ರವನ್ನು ವೀಕ್ಷಿಸಿ.

ಚಿತ್ರದ ಟ್ರೇಲರ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here