“ಡಿ ಬಾಸ್ ಡಿ ಬಾಸ್ ಡಿ ಬಾಸ್” ಇದು ಇಂದು ಚಿತ್ರದುರ್ಗದಲ್ಲಿ ಕೇಳಿ ಬರುತ್ತಿರುವ ಕೂಗು. ಹೌದು ಕನ್ನಡ ಚಿತ್ರರಂಗದ ಬಾಕ್ಸ್ ಆಫಿಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಕೋಟೆ ನಾಡಲ್ಲಿ ಹವಾ ಸೃಷ್ಟಿಸಿದ್ದಾರೆ. ಇದಕ್ಕೆ ಕಾರಣ  ದರ್ಶನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾದ ಮುಹೂರ್ತಕ್ಕೆ ಕೊನೆಯೂ ಕಾಲ ಕೂಡಿ ಬಂದಿದೆ. ಈ ಹಿಂದೆ ಸಾಕಷ್ಟು ವಿವಾದಗಳಿಂದಾಗಿ ಸದ್ದು ಮಾಡಿದ್ದ ಈ ಸಿನಿಮಾದ ಮುಹೂರ್ತ ಇಂದು ಚಿತ್ರದುರ್ಗದಲ್ಲಿ  ನೆರವೇರಿದೆ.

ಗಂಡುಗಲಿ ಮದಕರಿನಾಯಕ ಸಿನಿಮಾದ ಮುಹೂರ್ತದ ಹಿನ್ನೆಲೆ ಕೋಟೆನಾಡು ಚಿತ್ರದುರ್ಗಕ್ಕೆ ಚಿತ್ರತಂಡ ಆಗಮಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.ಪೂಜೆ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಪೋಷಕ ನಟರಾದ ದೊಡ್ಡಣ್ಣ ಹಾಗೂ ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು. ಈ ವೇಳೆ ಡಿ ಬಾಸ್..ಡಿ ಬಾಸ್ ಎಂದು ಅಭಿಮಾನಿಗಳು ಜೈಕಾರ ಕೂಗುತ್ತಾ ಸ್ವಾಗತ ಕೋರಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ದರ್ಶನ್ ಅಭಿಮಾನಿಗಳು ಭರ್ಜರಿ ಸ್ಟೆಪ್ ಹಾಕಿದ್ರು.

ಈ ವೇಳೆ ದರ್ಶನ್​ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದಿದ್ದು, ಡಿಬಾಸ್​ಗೆ ಜೈ ಎನ್ನುತ್ತಾ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ. ಈ ವೇಳೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ದೇವಾಲಯದ ಬಳಿ ಬಿಗಿ ಪೊಲೀಸ್​ ಬಂದೋಬಸ್ತ್​ ಸಹ ಏರ್ಪಡಿಸಲಾಗಿತ್ತು. ದರ್ಶನ್​ ಅವರನ್ನು ನೋಡಲು ಬಂದಿದ್ದ ಅಭಿಮಾನಿಗಳನ್ನು ತೆಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here