ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್‌ಮನ್ , ತನ್ನ ಎದುರಾಳಿ ಬೌಲರ್‌ಗಳಿಗೆ ತನ್ನ ಬ್ಯಾಟ್ ಮುಖಾಂತರ ನಡುಕ ಹುಟ್ಟಿಸುವ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್.ಕ್ರಿಸ್ ಗೇಲ್ ಗೆ ಬೌಲ್ ಮಾಡಲು ಎಂತಹ ಬೌಲರ್ ಸಹ ಹೆದರುವುದುಂಟು.ಅಷ್ಟರಮಟ್ಟಿಗೆ ಸ್ಪೋಟಕ ಆಟಗಾರ ಕ್ರಿಸ್ ಗೇಲ್.

ವೆಸ್ಟ್ ಇಂಡೀಸ್ ತಂಡದಲ್ಲಿ ಆಡುವಾಗಲೇ ಹೆಸರು ಮಾಡಿದ್ದ ಗೇಲ್ ಗೆ ವಿಶ್ವಾದ್ಯಂತ ಅಭಿಮಾನಿಗಳು ಸೃಷ್ಟಿಯಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ. ಮೊದಲಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ಗೇಲ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾದರು

ಬೆಂಗಳೂರು ತಂಡದ ಪರ ಆಡಿದ ನಂತರ ಕ್ರಸ್ ಗೇಲ್ ಖದರ್ ಬದಲಾಯಿತು. ಪ್ರತಿ ಪಂದ್ಯದಲ್ಲಿ ಸಿಡಿಲ ಸಿಕ್ಸರ್ ಗಳು ಮತ್ತು ಆಕರ್ಷಕ ಬೌಂಡರಿಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಗೇಲ್ ಮೈದಾನದಲ್ಲೇ ವಿಶಿಷ್ಟ ಡಾನ್ಸ್ ಮೂಲಕ ಪ್ರೇಕ್ಷಕರರನ್ನು ಕುಣಿಯುವಂತೆ ಮಾಡುತ್ತಿದ್ದರು.

IPL ಇತಿಹಾಸದಲ್ಲಿ 6 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿರುವ ಕ್ರಿಸ್ ಗೇಲ್ ಗೆ ಕ್ರಿಕೆಟ್ ವಲಯದಲ್ಲಿ ಯೂನಿವರ್ಸಲ್ ಬಾಸ್ ಎಂಬ ಬಿರುದು ಇದೆ‌.ಈ ಬಾರಿಯ IPL ಹರಾಜಿನಲ್ಲಿ ಕ್ರಿಸ್ ಗೇಲ್ ಅವರನ್ನು ಖರೀದಿಸಲು ಯಾರೂ ಮನಸ್ಸು ಮಾಡಿರಲಿಲ್ಲ.

ಆದರೆ ಭಾರತದ ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ಕ್ರಿಸ್ ಗೇಲ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಗೇಲ್ ಅವರನ್ನು ಆಯ್ಕೆ ಮಾಡಿಕೊಂಡರು.ಮೊದಲ ಮೂರು ಪಂದ್ಯಗಳಲ್ಲಿ ರೆಸ್ಟ್ ಮಾಡಿದ್ದ ಗೇಲ್ ನಂತರದ ಎರಡು ಪಂದ್ಯಗಳಲ್ಲಿ ಅರ್ಧಶತಕ ಮತ್ತು ಶತಕ ಸಿಡಿಸಿ ತಮ್ಮ ಬ್ಯಾಟಿಂಗ್ ಪವರ್ ತೋರಿಸಿದರು.

ಶತಕ ಸಿಡಿಸಿದ ನಂತರ ಈ ಶತಕವನ್ನು ತನ್ನ ಮುದ್ದಿನ ಮಗಳಿಗೆ ಅರ್ಪಿಸಿದ್ದಾರೆ.ಕ್ರಿಕೆಟ್ ಹೊರತುಪಡಿಸಿ ಕ್ರಿಸ್ ಗೇಲ್ ಅವರಿಗೆ ಮುದ್ದಾದ ಹೆಂಡತಿ ಅಲಿ ಮತ್ತು ಮಗಳು ಕ್ರಿಸ್ ಅಲಿನ ಗೇಲ್  ಜೊತೆ ಅತಿ ಹೆಚ್ಚು ಕಾಲ ಕಳೆಯುತ್ತಾರೆ.

ಕ್ರಿಸ್ ಗೇಲ್ ಅವರಿಗೆ ತಮ್ಮ ಕುಟುಂಬದ ಮೇಲೆ ಅತೀವ ಪ್ರೀತಿಯಂತೆ.ಅದರಲ್ಲೂ ಮುದ್ದಿನ ಮಗಳಾದ ಕ್ರಿಸ್ ಅಲಿನ ಗೇಲ್ ಜೊತೆಗಿನ ಪ್ರೀತಿಯನ್ನು ವೀಡಿಯೋ ಮೂಲಕ ಹಂಚಿಕೊಳ್ಳುತ್ತಾರೆ.ಕ್ರಿಸ್ ಗೇಲ್ ತನ್ನ ಮಗಳ ಜೊತೆಗಿನ ವೀಡಿಯೋ ಮತ್ತು ಫೋಟೋ ಗ್ಯಾಲರಿ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here