ಕಳಸಾ ಬಂಡೂರಿ ಮಹದಾಯಿ ಹೋರಾಟ ಆರಂಭವಾಗಿ ಎರಡು ವರ್ಷಗಳು ಮುಗುದು ಮೂರನೇ ವರ್ಷಕ್ಕೆ ಕಾಲಿಟ್ಟಿದೆ.ಆದರೆ ಇನ್ನೂ ರೈತರಿಗೆ ನ್ಯಾಯ ಮಾತ್ರ ಸಿಕ್ಕಿಲ್ಲ. ಇನ್ನು ಮಹದಾಯಿ ಹೋರಾಟಗಾರರಿಗೆ ಜಯ ಸಿಗುವುತನಕ ಜೊತೆಯಲ್ಲಿ ಹೋರಾಟ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ದೊಡ್ಡ ಸಮಾವೇಶ ಮಾಡಿ ಭಾಷಣ ಬಿಗಿದಿದ್ದ ಸಿನಿಮಾ ಮಂದಿ ಮತ್ತೆ ಮಹದಾಯಿ ವಿಷಯ ಮರೆತೇಬಿಟ್ಟಿದ್ದಾರೆ.ಈಗ ಮಹದಾಯಿ ಹೋರಾಟ ಮತ್ತೆ ಭುಗಿಲೆದ್ದಿದ್ದು ಈಗ ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರು ಕಳೆದ ಮೂರು ದಿನಗಳಿಂದ ಹಗಲು ರಾತ್ರಿ ಎನ್ನದೇ ರಸ್ತೆಯಲ್ಲಿ ಧರಣಿ ಕುಳಿತ್ತಿದ್ದಾರೆ.ಇನ್ನು ಇಂದು ಮಾಧ್ಯಮದ ಜೊತೆ ಮಾತಾಡಿದ ರೈತರು ಸಿನಿಮಾ ರಂಗದವರ ವಿರುದ್ಧ ಸಿಡಿದೆದ್ದಿದ್ದಾರೆ.ಅದರಲ್ಲೂ ಚಿತ್ರರಂಗದ ಪ್ರಮುಖ ನಟರಾದ ಶಿವರಾಜ್ ಕುಮಾರ್ , ಪುನೀತ್ ರಾಜ್‍ಕುಮಾರ್ ,ಸುದೀಪ್ ,ದರ್ಶನ್ ,ಯಶ್ ,ದುನಿಯಾ ವಿಜಯ್,ಗಣೇಶ್,ಉಪೇಂದ್ರ ,ದೃವ ಸರ್ಜಾ ಅವರನ್ನು ಟಾರ್ಗೆಟ್ ಮಾಡಿರುವ ರೈತರು ಈ ದೊಡ್ಡ ನಟರೆಲ್ಲಾ ಅವರವರ ಸಿನಿಮಾ ಪ್ರಮೋಸನ್ ಗೋಸ್ಕರ ಮಾತ್ರ ರೈತರ ಬಗ್ಗೆ ಭಾಷಣ ಬಿಗಿಯುತ್ತಾರೆ ಇವರಿಗೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇಲ್ಲ ಎಂದು ಗುಡುಗಿದ್ದಾರೆ.ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕಛೇರಿಯ ಮುಂದೆ ಕಳೆದ ನಾಲ್ಕು ದಿನಗಳಿಂದ ಮಹದಾಯಿ ಹೋರಾಟ ನಡೆಯುತ್ತಿದ್ದು.ಈ ಬಾರಿ ನಮಗೆ ನ್ಯಾಯ ಸಿಗುವವರೆಗೂ ಬೆಂಗಳೂರು ಬಿಟ್ಟು ಕದಲುವುದಿಲ್ಲ ಎಂದಿರುವ ರೈತರು ನಮಗೆ ಜನಸಾಮಾನ್ಯರ ಬೆಂಬಲ ಸಾಕು .ಈ ಸಿನಿಮಾ ರಂಗದವರು ರಾಜಕೀಯ ನಾಯಕರಂತೆ ವರ್ತಿಸುತ್ತಿದ್ದಾರೆ ಎಂದು ರೈತರು ಸಿನಿಮಾರಂಗದವರ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here