ವಿಜಯನಗರ: ಕರ್ನಾಟಕ ಎಂದು ನಾಮಕರಣಗೊಂಡು ನವಂಬರ್ 1ಕ್ಕೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತ ಇವರ ನೇತೃತ್ವದಲ್ಲಿ ನವೆಂಬರ್ 2ರಂದು ವಿಶ್ವವಿಖ್ಯಾತ ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುವರು.
ಈ ಹಿಂದೆ 1973ಕ್ಕೆ ಮೊದಲು ಈಗಿನ ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದು ಪ್ರಚಲಿತದಲಿತ್ತು, ಇದಕ್ಕೆ ಕಾರಣ ಕರ್ನಾಟಕದ ಏಕೀಕರಣದ 1950ರಲ್ಲಿ 1956 ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.
ಕರ್ನಾಟಕ ಎಂಬುದು ಕರು +ನಾಡು ಎಂಬುದರಿಂದ ಹುಟ್ಟು ಪಡೆದಿದೆ.
ಕರುನಾಡು ಎಂದರೆ ಕಪ್ಪು ಮಣ್ಣಿನ ನಾಡು ಹಾಗೂ ಎತ್ತರ ಪ್ರದೇಶ ಎಂದು ಅರ್ಥ.
ಈ 50ರ ಸಂಬಾರಂಭವನ್ನು ಆಚರಿಸಲು ಸಿಎಂ ಸಿದ್ದರಾಮಯ್ಯ ರಾಜ್ಯದ ಜನರೆಲ್ಲರೂ ನವಂಬರ್ 1ಕ್ಕೆ ತಮ್ಮ ಮನೆಗಳ ಮೇಲೆ ಕನ್ನಡದ ಬಾವುಟವನ್ನು ಆರಿಸಿ.
* ಮನೆಗಳ ಮುಂದೆ ರಾಜ್ಯೋತ್ಸವವನ್ನು ಬಿಂಬಿಸುವ ರಂಗೋಲಿಗಳನ್ನು ಹಾಕಿ.
* ರಾಜ್ಯೋತ್ಸವದ ದಿನದಂದು ರಾಜ್ಯದ ಎಲ್ಲಾ ಮನೆಗಳಲ್ಲಿ ಬೆಳಗ್ಗೆ 9 ಗಂಟೆಗೆ ನಾಡಗೀತೆಯ ಹಾಡು ಮೊಳಗಲಿ.
* ಸಂಜೆ 5:00 ಗಂಟೆಗೆ ನಿಮ್ಮ ನಿಮ್ಮ ಊರುಗಳ ಮೈದಾನದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಗಾಳಿಪಟಗಳನ್ನು ಹಾರಿಸಿ.
* ಸಂಜೆ 7:00ಗೆ ನಿಮ್ಮ ಮನೆಗಳಲ್ಲಿ ಹಣತೆ ಹಚ್ಚಿ ಜ್ಯೋತಿ ಬೆಳಗಿಸಿ ಎಂದು ರಾಜ್ಯದ ಜನತೆಗೆಮನವಿ ಮಾಡಿದ್ದಾರೆ.
50ರ ಸಂಭ್ರಮದ ಉದ್ಘಾಟನೆ ಮತ್ತು ಕನ್ನಡ ಜ್ಯೋತಿರಥಕ್ಕೆ ಚಾಲನೆ ನೀಡುವರು.
ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್ಆರ್ ಗವಿಯಪ್ಪ ವೇದಿಕೆ ಅಧ್ಯಕ್ಷತೆಯನ್ನು ವಹಿಸುವರು. ಈ ಸಂಭ್ರಮಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಜಯನಗರ ಉಸ್ತುವಾರಿ ಸಚಿವ ಬಿ ಜಡ್ ಜಮೀರ್ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ,ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್ ಕೆ ಪಾಟೀಲ್, ಇತರರು ಭಾಗವಹಿಸುವರು.
Disclaimer: This Story is auto-aggregated by a Syndicated Feed and has not been Created or Edited By City Big News Staff.