ವಿದ್ಯಾರ್ಥಿಗಳಿಗೆ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಅದು ಎಕ್ಸಾಮ್ ಸ್ಟ್ರೆಸ್. ಪರೀಕ್ಷಾ ಒತ್ತಡದಿಂದ ಹೊರ ಬರಲು ಅನೇಕ ಮಾರ್ಗಗಳನ್ನು, ಅನೇಕ ಪರಿಣಿತರು ಹೇಳುತ್ತಲೇ ಬಂದಿದ್ದಾರೆ. ಎಕ್ಸಾಮ್ ಸ್ಟ್ರೆಸ್ ನಿಂದ ಹೊರ ಬರುವ ಮಾರ್ಗಗಳ ಬಗ್ಗೆ ಆನ್ ಲೈನ್ ನಲ್ಲಿ ಅನೇಕ ವಿಡಿಯೋಗಳು, ಮಾಹಿತಿಗಳು ಕೂಡಾ ಲಭ್ಯವಿದೆ. ಆದರೆ ಇಲ್ಲೊಂದು ವಿಶ್ವವಿದ್ಯಾಲಯ ಒಂದು ವಿಭಿನ್ನ ಹಾಗೂ ಆಶ್ಚರ್ಯ ಪಡುವಂತ ಮಾರ್ಗವನ್ನು ಕಂಡು ಹಿಡಿದಿದೆ. ಅದೇನೆಂದರೆ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಮಾಧಿಯಲ್ಲಿ ಮಲಗುವುದು. ವಿಚಿತ್ರ ಎನ್ನಬೇಡಿ ಅಥವಾ ಫೇಕ್ ಎನ್ನುವ ಮೊದಲು ಸಂಪೂರ್ಣ ಸುದ್ದಿ ಓದಿ‌.

ನಿಜ್ಮೆಗನ್‌ನ ರಾಡ್‌ಬೌಡ್ ವಿಶ್ವವಿದ್ಯಾಲಯವು ಪರೀಕ್ಷೆಯ ಒತ್ತಡವನ್ನು ನಿಭಾಯಿಸಲು ತನ್ನ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅಸಾಮಾನ್ಯ ವಿಧಾನದೊಂದಿಗೆ ಎಲ್ಲರ ಗಮನ ಸೆಳೆದಿದೆ. ಅದೇ ಸಮಾಧಿಯಲ್ಲಿ ಮಲಗಿ ಧ್ಯಾನ ಮಾಡುವುದು. ಡಚ್ ನಗರ ನಿಜ್ಮೆಗನ್ ನಲ್ಲಿ ನೆಲೆಗೊಂಡಿರುವ ಈ ವಿಶ್ವ ವಿದ್ಯಾಲಯದಲ್ಲಿ ಶಿಕ್ಷಣ ಮಾಡಿರುವ ಹಳೆಯ ವಿದ್ಯಾರ್ಥಿಯೊಬ್ಬರು ಅಲ್ಲಿ ವಿದ್ಯಾರ್ಥಿಗಳ ಒತ್ತಡವನ್ನು ನಿರ್ವಹಿಸುವ ವಿಶಿಷ್ಟ ವಿಧಾನದ ಕುರಿತಾಗಿ ಬಹಿರಂಗಪಡಿಸಿದ ನಂತರ ಈ ಸಮಾಧಿ ಧ್ಯಾನದ ವಿಷಯ ಎಲ್ಲೆಡೆ ವೈರಲ್ ಆಗುತ್ತಾ ಸಾಗಿದೆ.

 

ವಿದ್ಯಾರ್ಥಿಗಳ ಪ್ರಕಾರ, ಈ ವಿಲಕ್ಷಣ ಯೋಜನೆಯು ತುಂಬಾ ಜನಪ್ರಿಯವಾಗಿದೆ, ಸಮಾಧಿಯಲ್ಲಿ ಮಲಗಲು ಮೊದಲೇ ಬುಕಿಂಗ್ ಮಾಡಿಸಿಕೊಳ್ಳಬೇಕು ಎಂದು ಕೂಡಾ ಹೇಳಿದ್ದಾರೆ. ಅಲ್ಲದೆ ಇಲ್ಲಿ ಮಲಗಲು ಸುಮಾರು 30 ನಿಮಿಷದಿಂದ ಮೂರು ಗಂಟೆಗಳ ಕಾಲ ಮಲಗಲು ಅವಕಾಶ ಮಾಡಿಕೊಡಲಾಗುತ್ತದೆ ಎಂದಿದ್ದಾರೆ. ಸೀನ್ ಮ್ಯಾಕ್ ಲಾಗ್ಲಿನ್ ಅನ್ನುವ ವಿದ್ಯಾರ್ಥಿ ಒಬ್ಬರು ಕಳೆದ ಒಂದು ವಾರದಿಂದ ಅಲ್ಲಿ ಮಲಗುವ ಅವಕಾಶಕ್ಕಾಗಿ ಕಾದರೂ ಸಿಕ್ಕಿಲ್ಲ ಎಂದಿರುವುದು ಸಮಾಧಿಯ ಧ್ಯಾನ ಯೋಜನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here